ಕೇರಳದ ಶತ್ರು ಸಂಹಾರಿ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಭವ್ಯಾ ಗೌಡ, ಪ್ರಸಾದದ ರೂಪದಲ್ಲಿ ಮಾಂಸಾಹಾರ ಸೇವನೆ
ಮಾಡಾಯಿಕಾವು ಅಥವಾ ತಿರುವರ್ಕಾಡು ಭಗವತಿ ದೇವಸ್ಥಾನ ಎಂದೂ ಕರೆಯಲ್ಪಡುವ ಶ್ರೀ ಭದ್ರಕಾಳಿ ದೇಗುಲಕ್ಕೆ ಕನ್ನಡ ಕಿರುತೆರೆ ನಟಿ ಭವ್ಯಾ ಗೌಡ ಭೇಟಿ ನೀಡಿದ್ದಾರೆ. ಕೇರಳದ ಕಣ್ಣೂರಿನ ಪಳಯಂಗಡಿ ಬಳಿಯಿರುವ ಈ ದೇಗುಲದಲ್ಲಿ ದೇವಿಗೆ ಮಾಂಸಾಹಾರವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಶತ್ರು ಸಂಹಾರಿ ಯಾಗಕ್ಕೂ ಈ ದೇವಸ್ಥಾನ ಪ್ರಸಿದ್ಧಿ ಪಡೆದಿದೆ.
(1 / 10)
ಗೀತಾ ಧಾರಾವಾಹಿ ಮೂಲಕ ಗುರುತಿಸಿಕೊಂಡು, ಬಳಿಕ ಬಿಗ್ ಬಾಸ್ ಶೋ ಮುನ್ನೆಲೆಗೆ ಬಂದ ಬೆಡಗಿ ಭವ್ಯಾ ಗೌಡ. ಈಗ ಇದೇ ನಟಿ ಜೀ ಕನ್ನಡದಲ್ಲಿ ಇನ್ನೇನು ಪ್ರಸಾರವಾಗಲಿರುವ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
(Instagram\bhavya gowda)(2 / 10)
ಕರ್ಣ ಧಾರಾವಾಹಿ ಮೂಲಕ ಜೀ ಕನ್ನಡ ವಾಹಿನಿಗೆ ಆಗಮಿಸಿದ್ದಾರೆ. ಈಗಾಗಲೇ ಪ್ರೋಮೋ ನೋಡಿದ ವೀಕ್ಷಕರು, ಭವ್ಯಾ ಕಂಡ ರೀತಿಯನ್ನು ಮೆಚ್ಚಿಕೊಂಡು, ಈ ಸೀರಿಯಲ್‌ಗಾಗಿ ಕಾಯುತ್ತಿದ್ದಾರೆ.
(3 / 10)
ಅಂದಹಾಗೆ ಈ ಸೀರಿಯಲ್‌ನಲ್ಲಿ ನಿಧಿ ಹೆಸರಿನ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ನಿಧಿ ಮತ್ತು ಕರ್ಣನ ಕೆಮಿಸ್ಟ್ರಿಗೆ ನೋಡುಗರಿಂದ ಪೂರ್ಣಾಂಕ ಸಿಕ್ಕಿದೆ.
(4 / 10)
ಇನ್ನೇನು ಇದೇ ತಿಂಗಳ ಮಾಸಾಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ಕರ್ಣ ಸೀರಿಯಲ್ ಶುರುವಾಗುವ ಸಾಧ್ಯತೆ ಇದೆ.
(5 / 10)
ಈ ನಡುವೆ ಇದೇ ನಟಿ ಇದೀಗ ಕೇರಳದ ಪುರಾತನ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಕಣ್ಣೂರಿನ ಪಳಯಂಗಡಿ ಬಳಿಯಿರುವ ಮಾಡಾಯಿಕಾವು ಅಥವಾ ತಿರುವರ್ಕಾಡು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
(6 / 10)
ಅಂದಹಾಗೆ ಈ ದೇವಸ್ಥಾನ ಶತ್ರು ಸಂಹಾರಿ ಯಾಗಕ್ಕೆ ಪ್ರಸಿದ್ಧಿ ಪಡೆದಿದೆ. ರಾಜಕಾರಣಿಗಳು, ಸಿನಿಮಾ ಮಂದಿ ಈ ದೇಗುಲಕ್ಕೆ ಬಂದು ಯಾಗ ನಡೆಸಿದ ಉದಾಹರಣೆಗಳು ಸಾಕಷ್ಟಿವೆ.
(7 / 10)
ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್ ನಟ ದರ್ಶನ್ ತಮ್ಮ ಕುಟುಂಬದ ಜತೆಗೆ ಆಗಮಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಸಹ ಇತ್ತೀಚೆಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
(8 / 10)
ಇದೀಗ ಇದೇ ಮಾಡಾಯಿಕಾವು ಭದ್ರಕಾಳಿ ದೇವಸ್ಥಾನಕ್ಕೆ ನಟಿ ಭವ್ಯಾ ಗೌಡ ಸಹ ಆಗಮಿಸಿ ಭದ್ರಕಾಳಿಯ ದರ್ಶನ ಪಡೆದಿದ್ದಾರೆ.
(9 / 10)
ಈ ದೇಗುಲದಲ್ಲಿ ದೇವಿಗೆ ಮಾಂಸಾಹಾರವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಪ್ರಸಾದದ ರೂಪದಲ್ಲಿ ಸಿಕ್ಕ ಮಾಸಾಂಹಾರವನ್ನು ಸೇವಿಸಿ, ಅದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇತರ ಗ್ಯಾಲರಿಗಳು