Lakshmi Nivasa Serial: ‘ಲಕ್ಷ್ಮಿ ನಿವಾಸ’ ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ರಿಯಲ್ ಹೆಸರೇನು? ರಂಗಭೂಮಿಯಲ್ಲೂ ಇವರದ್ದು ದೊಡ್ಡ ಹೆಸರು
- ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ಅತಿ ಹೆಚ್ಚು ಟಿಆರ್ಪಿ ಗಿಟ್ಟಿಸಿಕೊಳ್ಳುತ್ತಿರುವ ಕನ್ನಡದ ಧಾರಾವಾಹಿ. ಮಧ್ಯಮ ವರ್ಗದ ಬದುಕು ಮತ್ತು ಬವಣೆಯ ನಡುವೆ ಹಲವು ಪದರಗಳಲ್ಲಿ ತೆರೆದುಕೊಳ್ಳುವ ಈ ಕಥೆ, ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಸೀರಿಯಲ್ನ ಪ್ರಧಾನ ಪಾತ್ರದಲ್ಲಿರುವ, ಮನೆ ಯಜಮಾನ ಶ್ರೀನಿವಾಸ ಅವರ ಕುರಿತ ಕಿರು ವಿವರ ಇಲ್ಲಿದೆ.
- ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ಅತಿ ಹೆಚ್ಚು ಟಿಆರ್ಪಿ ಗಿಟ್ಟಿಸಿಕೊಳ್ಳುತ್ತಿರುವ ಕನ್ನಡದ ಧಾರಾವಾಹಿ. ಮಧ್ಯಮ ವರ್ಗದ ಬದುಕು ಮತ್ತು ಬವಣೆಯ ನಡುವೆ ಹಲವು ಪದರಗಳಲ್ಲಿ ತೆರೆದುಕೊಳ್ಳುವ ಈ ಕಥೆ, ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಸೀರಿಯಲ್ನ ಪ್ರಧಾನ ಪಾತ್ರದಲ್ಲಿರುವ, ಮನೆ ಯಜಮಾನ ಶ್ರೀನಿವಾಸ ಅವರ ಕುರಿತ ಕಿರು ವಿವರ ಇಲ್ಲಿದೆ.
(1 / 12)
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಯಜಮಾನ ಶ್ರೀನಿವಾಸನ ಪಾತ್ರದಲ್ಲಿ ನಟಿಸಿರುವವರ ಹೆಸರು ಅಶೋಕ ಜೆಂಬೆ. (Image source/ jembeashok.com)
(2 / 12)
ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅಶೋಕ ಜೆಂಬೆ, ವೃತ್ತಿಪರ ರಂಗಕರ್ಮಿ. ಜತೆಗೆ ಸಿನಿಮಾ, ಸೀರಿಯಲ್ಗಳ ನಂಟೂ ಇವರಿಗಿದೆ.
(3 / 12)
ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಅನುರೂಪ ಸೀರಿಯಲ್ನಲ್ಲಿ ರಾಜಕಾರಣಿಯಾಗಿ, ಕಲರ್ಸ್ ಕನ್ನಡದ ಪದ್ಮಾವತಿ ಧಾರಾವಾಹಿಯಲ್ಲಿ ಪುರೋಹಿತರಾಗಿ ನಟಿಸಿದ್ದಾರೆ.
(4 / 12)
ರಂಗಕರ್ಮಿ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲೂ ಇವರು ಮುಂದಿದ್ದಾರೆ. ಇವರ ಹೆಸರಿನ ಹಿಂದೆ ಜೆಂಬೆ ಸೇರಿಕೊಳ್ಳುವುದಕ್ಕೂ ಅದೇ ಕಾರಣ.
(5 / 12)
2014ರಲ್ಲಿ ಯೂ ಆರ್ ಅನಂತಮೂರ್ತಿ ಅವರ ಕಿರು ಕಥೆಯನ್ನಾಧರಿಸಿದ ಪ್ರಕೃತಿ ಚಿತ್ರದಲ್ಲಿ ರೈತನಾಗಿಯೂ ಅಶೋಕ್ ನಟಿಸಿದ್ದರು. ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು ಈ ಚಿತ್ರಕ್ಕೆ ಸಿಕ್ಕಿತ್ತು.
(6 / 12)
ಸೀರಿಯಲ್ ಜತೆಗೆ ಪಂಪ ಭಾರತ, ಸಾಹೇಬರ ಸರ್ಕೀಟು, ಶೇಕ್ಸ್ಪೀಯರ್ ಅವರ ಮಾರನಾಯಕ ನಾಟಕದಲ್ಲಿ ಮ್ಯಾಕ್ಬೆತ್ ಆಗಿಯೂ ಅಶೋಕ್ ಜಿಂಬೆ ಮಿಂಚಿದ್ದಾರೆ.
(7 / 12)
ನಮ್ ತಿಮ್ ತನ ನಾಟಕದಲ್ಲಿ ಕಪಟ ಸ್ವಾಮಿಯಾಗಿ, ಎನಿಮಿ ಆಫ್ ದಿ ಪೀಪಲ್, ಮದುವೆ ಹೆಣ್ಣು, ಹ್ಯಾಮ್ಲೆಟ್ ಸೇರಿ ಸಾಕಷ್ಟು ನಾಟಕಗಳಲ್ಲೂ ಅಭಿನಯಿಸಿದ್ದಾರೆ.
(8 / 12)
ನಾಟಕಗಳ ವೇಳೆ ಕಳೆದ 20 ವರ್ಷಗಳಿಂದ ಆಫ್ರಿಕನ್ ಡ್ರಮ್ ಜೆಂಬೆಯನ್ನು ಅಶೋಕ್ ನುಡಿಸುತ್ತಿದ್ದಾರೆ. ಆ ಕಾರಣಕ್ಕೂ ಅವರ ಹೆಸರಿನ ಮುಂದೆ ಅಶೋಕ ಜೆಂಬೆ ಎಂದಿದೆ.
(10 / 12)
ಈಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆಯ ಯಜಮಾನ ಅಂದರೆ ಹೀಗಿರಬೇಕು ಎಂಬಷ್ಟರ ಮಟ್ಟಿಗೆ ಅಶೋಕ ಜಿಂಬೆ ಇಷ್ಟವಾಗಿದ್ದಾರೆ.
ಇತರ ಗ್ಯಾಲರಿಗಳು