ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Nivasa Serial: ‘ಲಕ್ಷ್ಮಿ ನಿವಾಸ’ ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ರಿಯಲ್‌ ಹೆಸರೇನು? ರಂಗಭೂಮಿಯಲ್ಲೂ ಇವರದ್ದು ದೊಡ್ಡ ಹೆಸರು

Lakshmi Nivasa Serial: ‘ಲಕ್ಷ್ಮಿ ನಿವಾಸ’ ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ರಿಯಲ್‌ ಹೆಸರೇನು? ರಂಗಭೂಮಿಯಲ್ಲೂ ಇವರದ್ದು ದೊಡ್ಡ ಹೆಸರು

  • ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಳ್ಳುತ್ತಿರುವ ಕನ್ನಡದ ಧಾರಾವಾಹಿ. ಮಧ್ಯಮ ವರ್ಗದ ಬದುಕು ಮತ್ತು ಬವಣೆಯ ನಡುವೆ ಹಲವು ಪದರಗಳಲ್ಲಿ ತೆರೆದುಕೊಳ್ಳುವ ಈ ಕಥೆ, ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಸೀರಿಯಲ್‌ನ ಪ್ರಧಾನ ಪಾತ್ರದಲ್ಲಿರುವ, ಮನೆ ಯಜಮಾನ ಶ್ರೀನಿವಾಸ ಅವರ ಕುರಿತ ಕಿರು ವಿವರ ಇಲ್ಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಯಜಮಾನ ಶ್ರೀನಿವಾಸನ ಪಾತ್ರದಲ್ಲಿ ನಟಿಸಿರುವವರ ಹೆಸರು ಅಶೋಕ ಜೆಂಬೆ.  
icon

(1 / 12)

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಯಜಮಾನ ಶ್ರೀನಿವಾಸನ ಪಾತ್ರದಲ್ಲಿ ನಟಿಸಿರುವವರ ಹೆಸರು ಅಶೋಕ ಜೆಂಬೆ.  (Image source/ jembeashok.com)

ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅಶೋಕ ಜೆಂಬೆ, ವೃತ್ತಿಪರ ರಂಗಕರ್ಮಿ. ಜತೆಗೆ ಸಿನಿಮಾ, ಸೀರಿಯಲ್‌ಗಳ ನಂಟೂ ಇವರಿಗಿದೆ. 
icon

(2 / 12)

ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಅನುರೂಪ ಸೀರಿಯಲ್‌ನಲ್ಲಿ ರಾಜಕಾರಣಿಯಾಗಿ, ಕಲರ್ಸ್‌ ಕನ್ನಡದ ಪದ್ಮಾವತಿ ಧಾರಾವಾಹಿಯಲ್ಲಿ ಪುರೋಹಿತರಾಗಿ ನಟಿಸಿದ್ದಾರೆ. 
icon

(3 / 12)

ರಂಗಕರ್ಮಿ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲೂ ಇವರು ಮುಂದಿದ್ದಾರೆ. ಇವರ ಹೆಸರಿನ ಹಿಂದೆ ಜೆಂಬೆ ಸೇರಿಕೊಳ್ಳುವುದಕ್ಕೂ ಅದೇ ಕಾರಣ. 
icon

(4 / 12)

2014ರಲ್ಲಿ ಯೂ ಆರ್‌ ಅನಂತಮೂರ್ತಿ ಅವರ ಕಿರು ಕಥೆಯನ್ನಾಧರಿಸಿದ ಪ್ರಕೃತಿ ಚಿತ್ರದಲ್ಲಿ ರೈತನಾಗಿಯೂ ಅಶೋಕ್‌ ನಟಿಸಿದ್ದರು. ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು ಈ ಚಿತ್ರಕ್ಕೆ ಸಿಕ್ಕಿತ್ತು.
icon

(5 / 12)

ಸೀರಿಯಲ್‌ ಜತೆಗೆ ಪಂಪ ಭಾರತ, ಸಾಹೇಬರ ಸರ್ಕೀಟು, ಶೇಕ್ಸ್‌ಪೀಯರ್‌ ಅವರ ಮಾರನಾಯಕ ನಾಟಕದಲ್ಲಿ ಮ್ಯಾಕ್‌ಬೆತ್‌ ಆಗಿಯೂ ಅಶೋಕ್‌ ಜಿಂಬೆ ಮಿಂಚಿದ್ದಾರೆ. 
icon

(6 / 12)

ನಮ್‌ ತಿಮ್‌ ತನ ನಾಟಕದಲ್ಲಿ ಕಪಟ ಸ್ವಾಮಿಯಾಗಿ, ಎನಿಮಿ ಆಫ್‌ ದಿ ಪೀಪಲ್, ಮದುವೆ ಹೆಣ್ಣು, ಹ್ಯಾಮ್ಲೆಟ್‌ ಸೇರಿ ಸಾಕಷ್ಟು ನಾಟಕಗಳಲ್ಲೂ ಅಭಿನಯಿಸಿದ್ದಾರೆ.  
icon

(7 / 12)

ನಾಟಕಗಳ ವೇಳೆ ಕಳೆದ 20 ವರ್ಷಗಳಿಂದ ಆಫ್ರಿಕನ್ ಡ್ರಮ್ ಜೆಂಬೆಯನ್ನು ಅಶೋಕ್‌ ನುಡಿಸುತ್ತಿದ್ದಾರೆ. ಆ ಕಾರಣಕ್ಕೂ ಅವರ ಹೆಸರಿನ ಮುಂದೆ ಅಶೋಕ ಜೆಂಬೆ ಎಂದಿದೆ. 
icon

(8 / 12)

ನಟನೆ, ಸಂಗೀತ, ನಾಟಕ.. ಹೀಗೆ ಬಣ್ಣ ಲೋಕದ ಜತೆಗೆ ಸಂಗೀತ ಕ್ಷೇತ್ರದಲ್ಲೂ ಎರಡು ದಶಕಗಳಿಂದ ಸಕ್ರಿಯರಾಗಿದ್ದಾರೆ. 
icon

(9 / 12)

ಈಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆಯ ಯಜಮಾನ ಅಂದರೆ ಹೀಗಿರಬೇಕು ಎಂಬಷ್ಟರ ಮಟ್ಟಿಗೆ ಅಶೋಕ ಜಿಂಬೆ ಇಷ್ಟವಾಗಿದ್ದಾರೆ. 
icon

(10 / 12)

ವಿದ್ಯಾರ್ಥಿಗಳಿಗೆ ವಾದ್ಯ ಕಲಿಕೆ ತರಬೇತಿ ನೀಡುತ್ತಿರುವ ಅಶೋಕ್‌ ಜೆಂಬೆ
icon

(11 / 12)

ವಿದ್ಯಾರ್ಥಿಗಳಿಗೆ ವಾದ್ಯ ಕಲಿಕೆ ತರಬೇತಿ ನೀಡುತ್ತಿರುವ ಅಶೋಕ್‌ ಜೆಂಬೆ

ಸೀರಿಯಲ್‌ ನಟನೆಯ ಜತೆಗೆ ನಾಟಕಗಳಲ್ಲೂ ಇವರು ಸಕ್ರಿಯರಾಗಿದ್ದಾರೆ. 
icon

(12 / 12)

ಸೀರಿಯಲ್‌ ನಟನೆಯ ಜತೆಗೆ ನಾಟಕಗಳಲ್ಲೂ ಇವರು ಸಕ್ರಿಯರಾಗಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು