ಶಾಸ್ತ್ರ ಸಂಪ್ರದಾಯದಂತೆ ವಿಶೇಷ ಚೇತನ ತಮ್ಮನ ಉಪನಯನ ನೆರವೇರಿಸಿದ ಪಾರು ಸೀರಿಯಲ್ ನಟಿ ಮೋಕ್ಷಿತಾ ಪೈ ಇಲ್ಲಿವೆ PHOTOS
- ಪಾರು ಸೀರಿಯಲ್ ಮುಗಿದು ವರ್ಷದ ಸನಿಹ ಬಂತು. ಈ ವರೆಗೂ ಬೇರೆ ಸೀರಿಯಲ್‌ಗಳತ್ತ ಮುಖ ಮಾಡಿಲ್ಲ ನಟಿ ಮೋಕ್ಷಿತಾ ಪೈ. ಈ ನಡುವೆ ಬಿಗ್‌ಬಾಸ್‌ಗೂ ಹೋಗಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಇತ್ತೀಚೆಗಷ್ಟೇ ಮನೆಯಲ್ಲಿ ವಿಶೇಷ ಚೇತನ ಸಹೋದರನ ಉಪನಯನ ಮಾಡಿದ್ದಾರೆ. ಆ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

(1 / 8)
ಪಾರು ಸೀರಿಯಲ್ ನಟಿ ಮೋಕ್ಷಿತಾ ಪೈ ಮೂಲತಃ ದಕ್ಷಿಣ ಕನ್ನಡದವರು. ಸೀರಿಯಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಸದ್ಯ ಕುಟುಂಬಕ್ಕೆ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
(Instagram\ Mokshitha Pai)(2 / 8)
ಈ ನಡುವೆ ಇದೇ ನಟಿ ಇನ್ನೇನು ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಬಿಗ್‌ಬಾಸ್‌ಗೂ ತೆರಳಿದ್ದಾರೆ ಎಂದೂ ಹೇಳಲಾಗುತ್ತಿದೆ. ಸ್ಪರ್ಧಿಗಳ ಲಿಸ್ಟ್‌ನಲ್ಲಿ ಇವರ ಹೆಸರೂ ತಳುಕು ಹಾಕಿಕೊಂಡಿದೆ.
(3 / 8)
ಇದೆಲ್ಲದರ ನಡುವೆಯೇ ಇತ್ತೀಚೆಗಷ್ಟೇ ಸಹೋದರನ ಉಪನಯನ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಸರಳವಾಗಿ 25ಕ್ಕೂ ಅಧಿಕ ಆಪ್ತರನ್ನು ಮನೆಗೆ ಕರೆದು ವಿಕಲಚೇತನ ಸಹೋದರನ ಉಪನಯನ ಮತ್ತು ನವಗ್ರಹ ಹೋಮ ಪೂಜೆ ನೆರವೇರಿಸಿದ್ದಾರೆ ಮೋಕ್ಷಿತಾ ಪೈ.
(4 / 8)
ಸರಳವಾಗಿ 25ಕ್ಕೂ ಅಧಿಕ ಆಪ್ತರನ್ನು ಮನೆಗೆ ಕರೆದು ವಿಕಲಚೇತನ ಸಹೋದರನ ಉಪನಯನ ಮತ್ತು ನವಗ್ರಹ ಹೋಮ ಪೂಜೆ ನೆರವೇರಿಸಿದ್ದಾರೆ ಮೋಕ್ಷಿತಾ ಪೈ.
(5 / 8)
7 ವರ್ಷ ಮೇಲ್ಪಟ್ಟು 14 ವರ್ಷದೊಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವ ಸಂಪ್ರದಾಯವಿದೆ. ಆದರೆ, ಮೋಕ್ಷಿತಾ ಸಹೋದರನಿಗೆ 20 ವರ್ಷ ವಯಸ್ಸು.
(7 / 8)
ತಮ್ಮನನ್ನು ಹೂಗಳಿಂದ ಸಿಂಗರಿಸಿ, ಕುಟುಂಬದ ಜತೆ ಸೇರಿ ನವಗ್ರಹ ಹೋಮವನ್ನು ಹಾಕಿಸಿದ್ದಾರೆ ಅದಾದ ಬಳಿಕ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು ಮೋಕ್ಷಿತಾ.
ಇತರ ಗ್ಯಾಲರಿಗಳು