ಅವನಿಗೆ 20 ವರ್ಷವಾದ್ರೂ 8 ತಿಂಗಳ ಮಗುವಿನ ಬುದ್ಧಿ; ವಿಶೇಷ ಚೇತನ ತಮ್ಮನಿಗೆ ಉಪನಯನ ಮಾಡಿಸಿದ ಪಾರು ನಟಿ ಮೋಕ್ಷಿತಾ ಪೈ PHOTOS
- ಜೀ ಕನ್ನಡಲ್ಲಿ ಪ್ರಸಾರ ಕಾಣುತ್ತಿದ್ದ ಪಾರು ಸೀರಿಯಲ್ ಮುಗಿದು ವರ್ಷದ ಸನಿಹ ಬಂತು. ಈ ವರೆಗೂ ಬೇರೆ ಸೀರಿಯಲ್ಗಳತ್ತ ಮುಖ ಮಾಡಿಲ್ಲ ನಟಿ ಮೋಕ್ಷಿತಾ ಪೈ. ಆದರೆ, ಫ್ಯಾಮಿಲಿ ಜತೆಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಹೋದರನ ಉಪನಯನವನ್ನೂ ಅದ್ಧೂರಿಯಾಗಿಯೇ ಮಾಡಿದ್ದಾರೆ ಮೋಕ್ಷಿತಾ. ಇಲ್ಲಿವೆ ಫೋಟೋಸ್.

(1 / 9)
ಪಾರು ಸೀರಿಯಲ್ ನಟಿ ಮೋಕ್ಷಿತಾ ಪೈ ಮೂಲತಃ ದಕ್ಷಿಣ ಕನ್ನಡದವರು. ಸೀರಿಯಲ್ ಕ್ಷೇತ್ರದಲ್ಲಿ ಹೆಸರು ಮಾಡಿದ ಈ ನಟಿ ಸದ್ಯ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತಿದ್ದಾರೆ.
(2 / 9)
ವೈಯಕ್ತಿಕ ಬದುಕಿನ ಕಡೆಗೂ ಗಮನ ಹರಿಸುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಸುತ್ತಾಟದ ಫೋಟೋ ಶೇರ್ ಮಾಡಿತ್ತಾರೆ. ಹೀಗಿರುವಾಗ ಇತ್ತೀಚೆಗಷ್ಟೇ ಸಹೋದರನ ಉಪನಯನ ಮಾಡಿದ್ದಾರೆ.
(3 / 9)
ಸರಳವಾಗಿ 25ಕ್ಕೂ ಅಧಿಕ ಆಪ್ತರನ್ನು ಮನೆಗೆ ಕರೆದು ವಿಕಲಚೇತನ ಸಹೋದರನ ಉಪನಯನ ಮತ್ತು ನವಗ್ರಹ ಹೋಮ ಪೂಜೆ ನೆರವೇರಿಸಿದ್ದಾರೆ ಮೋಕ್ಷಿತಾ ಪೈ.
(4 / 9)
7 ವರ್ಷ ಮೇಲ್ಪಟ್ಟು 14 ವರ್ಷದೊಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವ ಸಂಪ್ರದಾಯವಿದೆ. ಆದರೆ, ಮೋಕ್ಷಿತಾ ಸಹೋದರನಿಗೆ 20 ವರ್ಷ ವಯಸ್ಸು.
(5 / 9)
20 ವರ್ಷದವನಾದರೂ 8 ತಿಂಗಳ ಮಗುವಿನ ಮನಸ್ಥಿತಿ ಅವನದ್ದು ಎಂದು ಖಾಸಗಿ ವೆಬ್ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮೋಕ್ಷಿತಾ ಹೇಳಿಕೊಂಡಿದ್ದಾರೆ.
(6 / 9)
ತಮ್ಮನನ್ನು ಹೂಗಳಿಂದ ಸಿಂಗರಿಸಿ, ಕುಟುಂಬದ ಜತೆ ಸೇರಿ ನವಗ್ರಹ ಹೋಮವನ್ನು ಹಾಕಿಸಿದ್ದಾರೆ ಅದಾದ ಬಳಿಕ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು ಮೋಕ್ಷಿತಾ.
ಇತರ ಗ್ಯಾಲರಿಗಳು