ಮದುವೆ ಬಳಿಕ ಮರೆಯಾದರು ಎಂದವರಿಗೆ ಸರ್ಪ್ರೈಸ್ ಕೊಟ್ಟ ಹರಿಪ್ರಿಯಾ; ‘ಅಹನ ಅಗ್ನಿಹೋತ್ರ’ ಮೂಲಕ ಕಿರುತೆರೆಗೆ ಎಂಟ್ರಿ!
- ಸ್ಯಾಂಡಲ್‌ವುಡ್ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿ ನಟಿಸಿದ ಹರಿಪ್ರಿಯಾ, ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಹೋದಲ್ಲಿ ಬಂದಲ್ಲಿ ಮುಂದಿನ ಪ್ರಾಜೆಕ್ಟ್ ಬಗ್ಗೆಯೇ ಮಾತುಗಳನ್ನು ಎದುರಿಸುತ್ತಿದ್ದರು. ಈಗ ಅದೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಸಿನಿಮಾ ಜತೆಗೆ, ಕಿರುತೆರೆಗೂ ಮತ್ತೆ ಎಂಟ್ರಿಕೊಟ್ಟಿದ್ದಾರೆ.

(1 / 8)
ಸ್ಯಾಂಡಲ್‌ವುಡ್‌ನಲ್ಲಿ ದಶಕ ಪೂರೈಸಿರುವ ಬೆರಳೆಣಿಕೆ ನಟಿಯರಲ್ಲಿ ಹರಿಪ್ರಿಯಾ ಸಹ ಒಬ್ಬರು. ಚಂದನವನದ ಸ್ಟಾರ್ ನಟರ ಜತೆಗೂ ತೆರೆ ಹಂಚಿಕೊಂಡಿದ್ದಾರೆ ಈ ನಟಿ.
(instagram/ Star Suvarna)(2 / 8)
2007ರಲ್ಲಿ ತುಳುವಿನ ಬದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆ, ಅದಾದ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ.
(3 / 8)
ಸಾಲು ಸಾಲು ಕನ್ನಡದ ಸಿನಿಮಾಗಳ ಅವಕಾಶಗಳು ಈ ನಟಿಗೆ ಒಲಿದು ಬಂದವು. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದರು.
(4 / 8)
ಹೀಗಿರುವಾಗಲೇ ಇದೀಗ ನಟಿ ಇದೀಗ ಕಿರುತೆರೆಗೆ ಹೊರಳಿದ್ದಾರೆ. ಅಂದರೆ, ಸೀರಿಯಲ್ ಕಡೆ ಮುಖ ಮಾಡಿದ್ದಾರೆ. ಪೂರ್ಣಪ್ರಮಾಣದ ನಾಯಕಿಯಾಗಿ ಅಲ್ಲ. ಬದಲಿಗೆ ಅತಿಥಿ ಪಾತ್ರದಲ್ಲಿ.
(5 / 8)
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದು (ಏ. 6) ಹೊಸ ಸೀರಿಯಲ್ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಹರಿಪ್ರಿಯಾ ಅಡ್ವೋಕೇಟ್ ಆಗಿ ಎಂಟ್ರಿಕೊಟ್ಟಿದ್ದಾರೆ.
(6 / 8)
ಈ ಹಿಂದೆ ಹಲವು ಸೀರಿಯಲ್‌ಗಳಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಇದೇ ನಟಿ. ಈಗ ಕೋಟ್ ಹಾಕಿ ಅಹನ ಅಗ್ನಿಹೋತ್ರ ಎಂಬ ಪಾತ್ರದ ಮೂಲಕ ಆಗಮಿಸುತ್ತಿದ್ದಾರೆ. ಹಾಗಾದರೆ, ಹರಿಪ್ರಿಯಾ ಯಾವ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಈ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
(7 / 8)
ಖಡಕ್ ಅಡ್ವೋಕೇಟ್ ಪಾತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಶುರುವಾಗಲಿದೆ ಎಂಬ ಸುಳಿವೂ ನೀಡಿದ ಸ್ಟಾರ್ ಸುವರ್ಣ ವಾಹಿನಿ.
ಇತರ ಗ್ಯಾಲರಿಗಳು