ಸಿಹಿ ಸತ್ತ ಸುದ್ದಿ ಸೀತಾ ಕಿವಿಗೆ ಬಿದ್ದೇಬಿಡ್ತು! ಇಂದ್ರ- ವಾಣಿ ಕೊಲೆಗೂ ಭಾರ್ಗವಿಯೇ ಕಾರಣ ಎಂದ ಸತ್ಯಜೀತ್, ಆದರೆ..
ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಒಂದಾದ ಮೇಲೊಂದು ಅಚ್ಚರಿಗಳು ದಕ್ಕುತ್ತಿವೆ. ಭಾರ್ಗವಿಗೂ ಸಿಹಿಯ ಕಣ್ಣಾಮುಚ್ಚಾಲೆ ಆಟ ಭಯ ಹುಟ್ಟಿಸಿತ್ತು. ಸಿಹಿಯ ಆತ್ಮ ಇರುವುದೂ ಭಾರ್ಗವಿಗೆ ಗೊತ್ತಾಗಿದೆ. ಅದಕ್ಕೆ ಸಿಹಿ ಸುಬ್ಬಿಯನ್ನು ದೂರ ಮಾಡಿ ಗೆದ್ದು ಬೀಗಿದ್ದಾಳೆ. ಇತ್ತ ಸಿಹಿ ಸಾವಿನ ಸುದ್ದಿ ಭಾರ್ಗವಿ ಹೇಳಿದ್ದಾಳೆ. ಅದು ಸೀತಾ ಕಿವಿಗೂ ಬಿದ್ದಿದೆ.
(1 / 10)
ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಒಂದಾದ ಮೇಲೊಂದು ಅಚ್ಚರಿಗಳು ದಕ್ಕುತ್ತಿವೆ. ಭಾರ್ಗವಿಗೂ ಸಿಹಿಯ ಕಣ್ಣಾಮುಚ್ಚಾಲೆ ಆಟ ಭಯ ಹುಟ್ಟಿಸಿತ್ತು. ಸಿಹಿಯ ಆತ್ಮ ಇರುವುದೂ ಭಾರ್ಗವಿಗೆ ಗೊತ್ತಾಗಿದೆ. ಅದಕ್ಕೆ ಸಿಹಿ ಸುಬ್ಬಿಯನ್ನು ದೂರ ಮಾಡಿ ಗೆದ್ದು ಬೀಗಿದ್ದಾಳೆ. ಇತ್ತ ಸಿಹಿ ಸಾವಿನ ಸುದ್ದಿ ಭಾರ್ಗವಿ ಹೇಳಿದ್ದಾಳೆ. ಅದು ಸೀತಾ ಕಿವಿಗೂ ಬಿದ್ದಿದೆ.
(Zee Kannada)(2 / 10)
ಸೀತಾ ರಾಮ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರೋಮೋವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಆ ಪ್ರೋಮೋದಲ್ಲಿ ಸಿಹಿಯ ಸಾವಿನ ವಿಚಾರವನ್ನೈ ಹೈಲೈಟ್ ಮಾಡಲಾಗಿದೆ.
(3 / 10)
ಭಾರ್ಗವಿಯ ಕೆಟ್ಟ ಕೆಲಸಗಳನ್ನು ಇಲ್ಲಿಯವರೆಗೂ ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ಸತ್ಯಜೀತ್, ಇದೀಗ ಅದೇ ಸತ್ಯವನ್ನು ಅಪ್ಪ ಸೂರ್ಯ ಪ್ರಕಾಶ್ ಮುಂದೆ ಹೇಳಲು ಬಂದು ನಿಂತಿದ್ದಾನೆ.
(4 / 10)
"ನಿಮ್ಮೆಲ್ಲರಿಗೂ ಸತ್ಯ ಏನು ಅಂತ ಗೊತ್ತಾಗಬೇಕು. ಅದನ್ನು ಹೇಳಲೆಂದೇ ನಾನಿಲ್ಲಿ ಬಂದಿದ್ದೇನೆ" ಎಂದಿದ್ದಾನೆ ಸತ್ಯ. "ಏನು ಸತ್ಯ ಹೇಳ್ತಾನೋ ಕೇಳಿಬಿಡೋಣ" ಎಂದು ಸೂರ್ಯಪ್ರಕಾಶ್ ಹೇಳಿದ್ದಾನೆ.
(5 / 10)
"ನಾನು ನನ್ನ ಅಣ್ಣ ಅತ್ತಿಗೆಯನ್ನು ಕೊಂದಿಲ್ಲ. ಅವರನ್ನು ಕೊಂದಿದ್ದು, ಈ ನಿಮ್ಮ.." ಎನ್ನುವಷ್ಟರಲ್ಲಿಯೇ ಭಾರ್ಗವಿ ಮಧ್ಯ ಪ್ರವೇಶಿಸಿದ್ದಾಳೆ.
(6 / 10)
"ಆ ಕೊಲೆನಾ ನಾನು ಮಾಡಿದ್ದು ಅಂತಾನಾ? ಅಲ್ಲಿ ಆ ಅಶೋಕ ಸಿಹಿ ಸಾವಿಗೆ ನಾನೇ ಕಾರಣ ಅಂತ ಹೇಳ್ತಿದ್ದಾನೆ. ಇಲ್ಲಿ ವಾಣಿ- ಇಂದ್ರ ಕೊಲೆ ನಾನೇ ಮಾಡಿದ್ದು ಅಂತ ಸತ್ಯ ಹೇಳ್ತಿದ್ದಾನೆ" ಎಂದಿದ್ದಾಳೆ ಭಾರ್ಗವಿ.
(7 / 10)
ಭಾರ್ಗವಿಯ ಬಾಯಿಂದ "ಆ ಅಶೋಕ ಸಿಹಿ ಸಾವಿಗೆ ನಾನೇ ಕಾರಣ ಅಂತ ಹೇಳ್ತಿದ್ದಾನೆ" ಅನ್ನೋ ಮಾತು ಅಲ್ಲೇ ಇದ್ದ ಸೀತಾ ಕಿವಿಗೂ ಬಿದ್ದಿದೆ. ನಮ್ಮ ಸಿಹಿ ಸತ್ತು ಹೋಗಿದ್ದಾಳಾ ಎಂದು ಗಾಬರಿಯಲ್ಲಿಯೇ ಪ್ರಶ್ನೆ ಮಾಡಿದ್ದಾಳೆ.
(8 / 10)
ಮೊದಲೇ ಸಿಹಿಯ ವರ್ತನೆ ಕಂಡು ಸೀತಾ ಕೊಂಚ ಬೇಸರದಲ್ಲಿದ್ದಾಳೆ. ಸಿಹಿಯ ವರ್ತನೆ, ಸಿಹಿಯ ಆಟ, ತುಂಟಾಟ ಎಲ್ಲವೂ ಬದಲಾಗಿದೆ. ಕೆಲವೊಮ್ಮೆ ಅವಳು ನಮ್ಮ ಸಿಹಿ ಹೌದ ಅಂತ ಅನ್ನೋ ಅನುಮಾನವೂ ಬರ್ತಿದೆ ಎಂದಿದ್ದಾಳೆ.
(9 / 10)
ಸಿಹಿ ಇಲ್ಲ ಅನ್ನೋ ವಿಚಾರ ತಿಳಿದ ಸೀತಾಳ ಮುಂದಿನ ನಡೆ ಏನು? ಭಾರ್ಗವಿ ಹೇಳಿದ ಮಾತನ್ನು ಸೀತಾ ನಂಬುತ್ತಾಳಾ? ಸತ್ಯಜೀತ್ ಹೇಳಿದ ಇಂದ್ರ- ವಾಣಿಯ ಸಾವಿನ ವಿಚಾರವನ್ನು ಸೂರ್ಯಪ್ರಕಾಶ್ ನಂಬುತ್ತಾನಾ? ಇಂದಿನ ಸಂಚಿಕೆಯಲ್ಲಿ ಈ ಬಗ್ಗೆ ಗೊತ್ತಾಗಲಿದೆ.
ಇತರ ಗ್ಯಾಲರಿಗಳು