ಕನ್ನಡ ಸುದ್ದಿ  /  Photo Gallery  /  Kannada Television News Seetha Rama Serial April 01st Episode Promo Highlights Seetha Raama Serial Latest Update Mnk

Seetha Rama Serial: ಈ ವರೆಗೂ ಸೀತಾಳ ಯಾವ ವಿಷಯ ಭಾರ್ಗವಿಗೆ ತಿಳಿಯಬಾರದಿತ್ತೋ, ಕೊನೆಗೂ ಆ ಗುಟ್ಟು ರಟ್ಟಾಯ್ತು!

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ಶ್ರೀರಾಮನ ಲವ್‌ಸ್ಟೋರಿ ಚಾಂದಿನಿ ಗಮನಕ್ಕೆ ಬಂದಿದೆ. ಭಾರ್ಗವಿಯೂ ಇವರಿಬ್ಬರ ಮೇಲೆ ಕಣ್ಣಿದ್ದಾರೆ. ಹೇಗಾದ್ರೂ ಮಾಡಿ ಇವರಿಬ್ಬರನ್ನು ಒಂದಾಗಿಸಬಾರದೆಂದು ಕೆಟ್ಟ ಮನಸ್ಸುಗಳು ಒಂದಾಗಿವೆ. ಈ ನಡುವೆ ಯಾವ ವಿಚಾರ ಭಾರ್ಗವಿಗೆ ಈ ವರೆಗೆ ಗೊತ್ತಿರಲಿಲ್ಲವೋ, ಈಗ ಅದೂ ಗೊತ್ತಾಗಿದೆ.

ಚಾಂದಿನಿಗೆ ಸೀತಾ ಸಖತ್ತಾಗಿಯೇ ಕೌಂಟರ್‌ ಕೊಟ್ಟಾಗಿದೆ. ರಾಮ್‌ ನನ್ನವನು ಎಂದಿದ್ದಾಳೆ ಸೀತಾ. ಹೀಗಿರುವಾಗಲೇ ಈ ನಡುವೆ ಸೀತಾಳ ಮನೆಗೆ ಬಂದಿದ್ದಾಳೆ ಶ್ರೀರಾಮನ ಚಿಕ್ಕಮ್ಮ ಭಾರ್ಗವಿ. 
icon

(1 / 7)

ಶಾಂತಮ್ಮನ ವಠಾರಕ್ಕೆ ಬಂದ ಭಾರ್ಗವಿಯನ್ನು ಸಿಹಿ ನೋಡಿದ್ದಾಳೆ. ಯಾರು ಬೇಕಿತ್ತು ಎಂದಿದ್ದಾರೆ. ಸೀತಾ ಅವರನ್ನು ನೋಡಲು ಬಂದಿದ್ದೇನೆ ಎಂದಿದ್ದಾಳೆ ಭಾರ್ಗವಿ.
icon

(2 / 7)

ಓಹ್‌ ಸೀತಮ್ಮನ ನೋಡಲು ಬಂದಿದ್ದೀರಾ, ನಮ್ಮ ಮನೆಗೆ ಬಂದಿದ್ದೀರಾ, ಬನ್ನಿ ಬನ್ನಿ ಕರೆದುಕೊಂಡು ಹೋಗಿದ್ದಾಳೆ ಸಿಹಿ. ಆದರೆ, ಪಾಪ ಭಾರ್ಗವಿ ಯಾರು ಎಂಬುದು ಸಿಹಿಗೇನು ಗೊತ್ತು? ಎಂದಿನಂತೆ ಅಮ್ಮನ ಕೇಳಿಕೊಂಡು ಬಂದವರನ್ನು ಮನೆಗೆ ಕರೆದೊಯ್ದಿದ್ದಾಳೆ.
icon

(3 / 7)

ಕುಳಿತುಕೊಳ್ಳಿ ನೀರು ತೆಗೊಂಡು ಬರ್ತಿನಿ ಎಂದಿದ್ದಾಳೆ ಸಿಹಿ. ಇತ್ತ ಸಿಹಿ ಒಳಗೆ ಹೋಗುತ್ತಿದ್ದಂತೆ, ಮನೆಯನ್ನು ಒಂದು ಸುತ್ತ ಕಣ್ಣಾಡಿಸಿದ್ದಾಳೆ. ಸೀತಾ ಮತ್ತು ರಾಮನ ನಡುವಿನ ಪ್ರೀತಿ ಮುರಿಯಲು, ಸೀತಾಳ ಮನೆಯಲ್ಲಿ ಏನಾದ್ರೂ ಸಿಗಬಹುದಾ ಎಂದು ಬಂದಿದ್ದಾಳೆ. 
icon

(4 / 7)

ಆಗ ಸೀತಾಳ ಜತೆ ಸಿಹಿ ಇರೋ ಫೋಟೋ ಭಾರ್ಗವಿ ಕಣ್ಣಿಗೆ ಬಿದ್ದಿದೆ. ಅಷ್ಟೇ ಅಲ್ಲ ಸೀತಾಗೆ ಮಗಳಿದ್ದಾಳಾ ಎಂದು ಒಳಗೊಳಗೆ ಮತ್ತೊಂದು ತಂತ್ರ ಹೆಣೆಯುತ್ತಿದ್ದಾಳೆ. ಈ ವರೆಗೂ ಸೀತಾ ಸಿಂಗಲ್‌ ಎಂದುಕೊಂಡಿದ್ದ ಭಾರ್ಗವಿಗೆ ಈ ವಿಚಾರ ಶಾಕ್‌ ನೀಡಿದೆ.  
icon

(5 / 7)

ಈ ಮೂಲಕ ಸೀತೆಯನ್ನ ಅರಸಿ ಬಂದ ಭಾರ್ಗವಿಗೆ ಸಿಕ್ಕಿದೆ ಸಿಹಿ ಅನ್ನೋ ಬ್ರಹ್ಮಾಸ್ತ್ರ! ಈ ಸಿಹಿ ಸೀತಾಳ ಮಗಳಾ ಎಂದು ಬೀಗಿದ್ದಾಳೆ. ಆ ಅಸ್ತ್ರವನ್ನಿಟ್ಟುಕೊಂಡು ತಂತ್ರ ಪ್ರತಿತಂತ್ರ ಹೆಣೆಯಲು ಮುಂದಾಗಿದ್ದಾಳೆ. ಹಾಗಾದರೆ, ಭಾರ್ಗವಿಯ ಮುಂದಿನ ಪ್ಲಾನ್‌ ಏನು? 
icon

(6 / 7)

ಈ ವಿಚಾರವನ್ನೇ ದೊಡ್ಡದಾಗಿಸಿ, ರಾಮ ಮತ್ತು ಸೀತಾಳ ಪ್ರೀತಿ ಮತ್ತು ಮದುವೆ ಮುರಿಯಲು ಸಂಚು ರೂಪಿಸುತ್ತಾಳಾ ಭಾರ್ಗವಿ? ಇದಕ್ಕೆ ಮುಂದಿನ ದಿನಗಳಲ್ಲೇ ಉತ್ತರ ಸಿಗಬೇಕಿದೆ. 
icon

(7 / 7)

ಇತರ ಗ್ಯಾಲರಿಗಳು