ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಪತ್ರೆ ಸೇರಿದ ‘ಸೀತಾ ರಾಮ’ ಸೀರಿಯಲ್‌ ಅಶೋಕ; ಕಾಯಿಲೆ ಬಗ್ಗೆ ಹೇಳಿಕೊಂಡು, ಈ ವಿಚಾರದಲ್ಲಿ ಕಾಳಜಿವಹಿಸಿ ಎಂದ ನಟ

ಆಸ್ಪತ್ರೆ ಸೇರಿದ ‘ಸೀತಾ ರಾಮ’ ಸೀರಿಯಲ್‌ ಅಶೋಕ; ಕಾಯಿಲೆ ಬಗ್ಗೆ ಹೇಳಿಕೊಂಡು, ಈ ವಿಚಾರದಲ್ಲಿ ಕಾಳಜಿವಹಿಸಿ ಎಂದ ನಟ

  • ಸೀತಾ ರಾಮ ಸೀರಿಯಲ್‌ನಲ್ಲಿ ಸ್ನೇಹಕ್ಕೆ ಇನ್ನೊಂದು ಹೆಸರೇ ಅಶೋಕ. ಫ್ರೆಂಡ್‌ಶಿಫ್‌ ಅಂದ್ರೆ ಹೀಗೀರಬೇಕು, ಫ್ರೆಂಡ್‌ ಅಂದ್ರೆ ಅಶೋಕನ ರೀತಿ ಇರಬೇಕು ಎಂದು ಅಂದುಕೊಂಡವರೇ ಹೆಚ್ಚು. ಈಗ ಇದೇ ಅಶೋಕ ನಿಜ ಜೀವನದಲ್ಲಿ ಆಸ್ಪತ್ರೆ ಸೇರಿದ್ದಾರೆ. ಜತೆಗೆ ತಮ್ಮ ಅಭಿಮಾನಿಗಳಿಗೂ ವಿಶೇಷ ಆರೋಗ್ಯ ಸಲಹೆಯನ್ನೂ ಹೇಳಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಧಾರಾವಾಹಿಯ ಪ್ರತಿ ಪಾತ್ರವನ್ನೂ ಇಷ್ಟಪಡುತ್ತಿದ್ದಾರೆ ವೀಕ್ಷಕರು. 
icon

(1 / 9)

ರಾಮ ಮತ್ತು ಅಶೋಕ ಸ್ನೇಹ, ಸೀತಾ ಮತ್ತು ಪ್ರಿಯಾಳ ಸ್ನೇಹ ಈ ಸೀರಿಯಲ್‌ನ ಹೈಲೈಟ್‌. ಇದ್ದರೆ ಈ ರೀತಿಯ ಸ್ನೇಹಿತರು ಇರಬೇಕು ಎಂದು ಸೀರಿಯಲ್‌ ವೀಕ್ಷಕರು ಹೇಳಿಕೊಳ್ಳುತ್ತಿದ್ದಾರೆ.
icon

(2 / 9)

ಅದರಲ್ಲೂ ಅಶೋಕ ಪಾತ್ರಕ್ಕೆ ಫಿದಾ ಆದವರೇ ಹೆಚ್ಚು. ನಿಜ ಜೀವನದಲ್ಲೂ ಇಂಥ ಒಬ್ಬ ಸ್ನೇಹಿತ ಇರಬೇಕು ಎಂದೂ ಬಯಸಿದವರಿದ್ದಾರೆ. 
icon

(3 / 9)

ಆದರೆ ಇತ್ತೀಚಿನ ಕೆಲ ದಿನಗಳಿಂದ ಸೀರಿಯಲ್‌ನಲ್ಲಿ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಸಿಗುತ್ತಿಲ್ಲ. ಇತ್ತ ಸೋಷಿಯಲ್‌ ಮೀಡಿಯಾದಿಂದಲೂ ಕೊಂಚ ದೂರವೇ ಉಳಿದಿದ್ದರು. 
icon

(4 / 9)

ಇದೆಲ್ಲವನ್ನು ಗಮನಿಸಿ, ಅಶೋಕ ಎಲ್ಲೋದ್ರು, ಸೋಷಿಯಲ್‌ ಮೀಡಿಯಾ ಪೋಸ್ಟ್‌ ಇಲ್ಲ, ಸೀರಿಯಲ್‌ನಲ್ಲೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದವರೇ ಹೆಚ್ಚು.
icon

(5 / 9)

ಆದರೆ, ಅಸಲಿ ಕಾರಣವೇ ಬೇರೆ ಇದೆ. ನಟ ಅಶೋಕ ಶರ್ಮಾ ನ್ಯುಮೋನಿಯಾ ಸಮಸ್ಯೆಯಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
icon

(6 / 9)

ಈ ವಿಚಾರವನ್ನು ಸ್ವತಃ ಅಶೋಕ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ತುಂಬಾ ದಿನದಿಂದ ಒಂದೂ ಪೋಸ್ಟ್ ಇಲ್ಲ ಅಂತ ಕೇಳ್ತಿದ್ರಿ. ನಾನು ನ್ಯುಮೋನಿಯಾದಿಂದ ಬಳಲುತ್ತಿದ್ದೇನೆ, ಆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೆ. ಈಗ ನಾನು ಹುಷಾರಾಗಿದ್ದೇನೆ" 
icon

(7 / 9)

"ನಿಮ್ಮೆಲ್ಲರ ಕಾಳಜಿ, ಪ್ರೀತಿ , ಮನೆಯವರ ಹರಕೆ, ಹಾರೈಕೆ ನನ್ನನ್ನು ಸರಿಪಡಿಸಿದೆ. ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ. ಆರೋಗ್ಯವೇ ಭಾಗ್ಯ. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ" ಎಂದಿದ್ದಾರೆ.
icon

(8 / 9)

ಇನ್ನು ಸೀರಿಯಲ್‌ ಏಪಿಸೋಡ್ ವಿಚಾರಕ್ಕೆ‌ ಬಂದರೆ, ಸೀತಾ ರಾಮ ಧಾರಾವಾಹಿಯಲ್ಲಿ ಅಶೋಕ ಮತ್ತು ಪ್ರಿಯಾ ಕಲ್ಯಾಣ ಕೆಲಸ ಶುರುವಾಗಿದೆ. 
icon

(9 / 9)

ಇನ್ನು ಸೀರಿಯಲ್‌ ಏಪಿಸೋಡ್ ವಿಚಾರಕ್ಕೆ‌ ಬಂದರೆ, ಸೀತಾ ರಾಮ ಧಾರಾವಾಹಿಯಲ್ಲಿ ಅಶೋಕ ಮತ್ತು ಪ್ರಿಯಾ ಕಲ್ಯಾಣ ಕೆಲಸ ಶುರುವಾಗಿದೆ. 

IPL_Entry_Point

ಇತರ ಗ್ಯಾಲರಿಗಳು