Seetha Rama Serial: ಸಿಹಿಯ ಎದುರೇ ಸೀತಾ ಕೊರಳಿಗೆ ತಾಳಿ ಕಟ್ಟಿದ ರಾಮ! ಮನದುಂಬಿ ಹರಸಿದ ವೀಕ್ಷಕ
- Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯಿತು, ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂಬ ವಿವರ ಇಲ್ಲಿದೆ. ಅಚ್ಚರಿಯ ಗಳಿಗೆಯಲ್ಲಿ ಸೀತಾ ಕೊರಳಿಗೆ ರಾಮ ತಾಳಿ ಕಟ್ಟಿದ್ದಾನೆ. ಸಿಹಿ ಕುಣಿದು ಕುಪ್ಪಳಿಸಿದ್ದಾಳೆ.
- Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯಿತು, ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂಬ ವಿವರ ಇಲ್ಲಿದೆ. ಅಚ್ಚರಿಯ ಗಳಿಗೆಯಲ್ಲಿ ಸೀತಾ ಕೊರಳಿಗೆ ರಾಮ ತಾಳಿ ಕಟ್ಟಿದ್ದಾನೆ. ಸಿಹಿ ಕುಣಿದು ಕುಪ್ಪಳಿಸಿದ್ದಾಳೆ.
(1 / 11)
ಸೀತಾ ರಾಮ ಸೀರಿಯಲ್ನಲ್ಲಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು, ಗುರುವಾರದ ಸಂಚಿಕೆಯಲ್ಲಿ ಏನೆಲ್ಲ ಆಗಲಿದೆ ಎಂಬ ಮಾಹಿತಿ ಇಲ್ಲಿದೆ. ಸೀತಾ ಮದುವೆ ಆಗುವ ವಿಚಾರ ತಿಳಿದ ಭಾರ್ಗವಿ, ಸೀತಾಳನ್ನು ಮನೆಗೆ ಕರೆಸಿ, ಸತ್ಕರಿಸುತ್ತಿದ್ದಾಳೆ. ರಾಮನ ಕೈಯಿಂದಲೇ ಉಡುಗೊರೆ ಕೊಡಿಸಲು ಮುಂದಾಗಿದ್ದಾಳೆ. ಆದರೆ, ಅಚ್ಚರಿ ರೀತಿಯಲ್ಲಿ ರಾಮಯ ಆಗಮನವಾಗುತ್ತಿದ್ದಂತೆ, ಸೀತಾ, ಆ ಉಡುಗೊರೆಗಳನ್ನು ದೇವರ ಕೋಣೆಯಲ್ಲಿಟ್ಟು ಹೊರನಡೆದಿದ್ದಾಳೆ.(Photos/ ZEE5)
(2 / 11)
ಇತ್ತ ಗುರುವಾರದ ಏಪಿಸೋಡ್ನಲ್ಲಿ ರಾಮನ ಮನೆಯಲ್ಲಿ ಫ್ಯಾಮಿಲಿ ಫೋಟೋಶೂಟ್ ಸಂಭ್ರಮ ನಡೆಯುತ್ತಿದೆ. ಗಾರ್ಡನ್ನಲ್ಲಿ ಇಡೀ ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳುತ್ತಿದ್ದರೆ, ಅಶೋಕ ಮಾತ್ರ ದೂರ ಸರಿದು ನಿಂತಿದ್ದಾನೆ.
(3 / 11)
ಅಶೋಕನನ್ನು ಕರೆದು, ಹತ್ತಿರ ನಿಲ್ಲಿಸಿಕೊಂಡಿದ್ದಾನೆ ರಾಮ. ಅಶೋಕ ಫೋಟೋದಲ್ಲಿ ಬರುತ್ತಿದ್ದಂತೆ, ತನ್ನ ಕೆಟ್ಟ ದೃಷ್ಟಿ ಬೀರಿದ್ದಾಳೆ ಭಾರ್ಗವಿ. ಆಕೆಯನ್ನು ನೋಡಿ ಮತ್ತೆ ಅಲ್ಲಿಂದ ಹಿಂದೆ ಸರಿದಿದ್ದಾನೆ ಅಶೋಕ.
(4 / 11)
ಮತ್ತೊಂದು ಕಡೆ ಮದುವೆ ತಯಾರಿಯಲ್ಲಿ ಮುಳುಗಿದ್ದಾಳೆ ಸೀತಾ ಮತ್ತವರ ಕುಟುಂಬ. ತಾಳಿ ಖರೀದಿಸಲು ಎಲ್ಲರೂ ಬಂಗಾರದ ಅಂಗಡಿಗೆ ಹೋಗಿದ್ದಾರೆ. ರಾಮ ಹೊರಗಿನವನು, ಇನ್ಮೇಲೆ ಅವನ ಜತೆ ಮಾತನಾಡುವಂತಿಲ್ಲ ಎಂದಿದ್ದಾಳೆ ಸುಲೋಚನಾ. ಅತ್ತೆಯ ಈ ಮಾತು ಸಿಹಿಗೆ ಕೊಂಚ ಬೇಸರ ತರಿಸಿದೆ.
(5 / 11)
ರಾಮನಿಗೆ ಫೋನ್ ಮಾಡಿ, ತನ್ನ ಕಷ್ಟ ಸುಖ ಹಂಚಿಕೊಂಡಿದ್ದಾಳೆ. ರಾಮ್ಗೆ ಲವ್ ಯೂ ಫ್ರೆಂಡ್. ನಿನ್ನನ್ನು ನೋಡಬೇಕು ಅನಿಸ್ತಿದೆ. ಯಾವಾಗಲೂ ನೀನು ನನ್ನ ಕಣ್ಣಮುಂದೆಯೇ ಇರಬೇಕು. ನನ್ನಿಂದ ನಿನ್ನನ್ನು ಯಾರೂ ಬೇರೆ ಮಾಡೋಕೆ ಆಗಲ್ಲ ಎಂದಿದ್ದಾಳೆ. ಈಗಲೇ ಬಾ ಎಂದಿದ್ದಾಳೆ.
(6 / 11)
ಇತ್ತ ರುದ್ರನ ಪ್ರತಾಪ ಮುಂದುವರಿದಿದೆ. ಸೀತಾಳ ಮದುವೆ ಆಗ್ತಿದ್ದಂತೆ, ಆಕೆಯ ಮನೆ ಅಷ್ಟೇ ಅಲ್ಲ ಇಡೀ ವಠಾರವನ್ನೇ ಮಾರಲು ಪ್ಲಾನ್ ರೂಪಿಸಿದ್ದಾನೆ ಲಾಯರ್.
(7 / 11)
ಚಿನ್ನದಂಗಡಿ ಮುಂದೆ ಫ್ರೆಂಡ್ಗಾಗಿ ಕಾಯುತ್ತಿದ್ದಾಳೆ ಸಿಹಿ. ಅಚ್ಚರಿಯ ರೀತಿಯಲ್ಲಿ ರಾಮನ ಎಂಟ್ರಿಯಾಗಿದೆ. ಇವತ್ತು ಇಡೀ ದಿನ ನಿನ್ನ ಜತೆಗಿರ್ತಿನಿ ಎಂದಿದ್ದಾನೆ ರಾಮ.
(8 / 11)
ಇದೇ ವೇಳೆ ತಾಳಿ ಧರಿಸಿ ಟ್ರಯಲ್ ನೋಡುತ್ತಿದ್ದಾಗ, ಸೀತಾಳ ಕೂದಲಿಗೆ ತಾಳಿ ಸಿಕ್ಕಿಹಾಕೊಂಡಿದೆ. ಫ್ರೆಂಡ್ ಸೀತಮ್ಮನ ಕೊರಳಿಗೆ ಚೈನ್ ಸಿಲುಕಿದೆ ಅದನ್ನು ಬಿಡಿಸು ಎಂದಿದ್ದಾಳೆ ಸಿಹಿ.
(9 / 11)
ಸರಿ ಫ್ರೆಂಡ್ ಎಂದು ಕೂದಲಿಗೆ ಸಿಲುಕಿದ ತಾಳಿ ಸರಿಪಡಿಸಿ, ಕೊಂಡಿ ಹಾಕಿದ್ದಾನೆ. ಹೀಗೆ ತಾಳಿ ಹಾಕಿದ್ದನ್ನು ಅಜ್ಜಿ ತಾತ ನೋಡಿದ್ದಾರೆ. ಅತ್ತಿಗೆ ಸುಲೋಚನಾ ಕಣ್ಣಿಗೂ ಬಿದ್ದಿದೆ.
(10 / 11)
ಫ್ರೆಂಡ್ ಸೀತಮ್ಮನ ಮದುವೆ ಆಗಿಬಿಟ್ಟ ಎಂದು ಸಿಹಿ ಜೋರಾಗಿ ಖುಷಿಯಿಂದ ಸಂಭ್ರಮಿಸಿದ್ದಾಳೆ. ಇದೇ ವೇಳೆ ರಾಮ ಮತ್ತು ಸೀತಾ ಒಬ್ಬರನ್ನೊಬ್ಬರು ನೋಡಿಕೊಂಡಿದ್ದಾರೆ.
ಇತರ ಗ್ಯಾಲರಿಗಳು