ಕನ್ನಡ ಸುದ್ದಿ  /  Photo Gallery  /  Kannada Television News Seetha Rama Serial Friday March 1st Episode Highlights Seetha Raama Serial Latest Updates Mnk

Seetha Rama Serial: ಕೆಲಸಕ್ಕೆ ರಾಜೀನಾಮೆ ನೀಡಿದ ಸೀತಾ, ಪಾಪ ಭಾರ್ಗವಿಯಿಂದ ಬಕ್ರ ಆಗ್ತಿದ್ದಾಳೆ ರಾಮ್‌ ಮಾಜಿ ಪ್ರೇಯಸಿ ಚಾಂದಿನಿ!

  • ರಾಮ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಮರಳಿದ್ದಾನೆ. ಮನೆಗೆ ಬಂದ ಮಗನಿಗೆ ದೃಷ್ಟಿ ತೆಗೆದಿದ್ದಾಳೆ ಭಾರ್ಗವಿ. ಇತ್ತ ಸೀತಾಳ ಜತೆಗೆ ಸೂರ್ಯ ಪ್ರಕಾಶ್‌ ದೇಸಾಯಿ ಮಾತುಕತೆ ನಡೆದರೂ, ಅದು ಫಲಪ್ರದವಾಗಿಲ್ಲ. ಮತ್ತೊಂದು ಕಡೆ, ಆಫೀಸ್‌ಗೆ ಫಿನಾನ್ಸ್‌ ಸೆಕ್ಷನ್‌ಗೆ ಹೊಸದಾಗಿ ಕೆಲಸಕ್ಕೆ ಸೇರಿದ ಚಾಂದಿನಿಯನ್ನೇ ಕೈಗೊಂಬೆ ಮಾಡಿಕೊಳ್ಳಲು ಹೊರಟಿದ್ದಾಳೆ ಭಾರ್ಗವಿ.

ಸೀತಾ ರಾಮ ಸೀರಿಯಲ್‌ನಲ್ಲೀಗ ಒಂದಷ್ಟು ರೋಚಕ ಅಂಶಗಳು ನೋಡುಗನ ಕಣ್ಣೀಗೆ ಬಿದ್ದಿವೆ. ಆಫೀಸ್‌ಗೆ ರಾಮ್‌ ಮಾಜಿ ಪ್ರೇಯಸಿ ಎಂಟ್ರಿಯಾದರೆ, ಮತ್ತೊಂದು ಕಡೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ ಸೀತಾ. 
icon

(1 / 8)

ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಾಮ್‌, ಕೊಂಚ ಗುಣಮುಖನಾಗಿ ಮನೆಗೆ ಮರಳಿದ್ದಾನೆ. ಮನೆಯಲ್ಲಿಯೂ ಚಿಕಿತ್ಸೆ ಮುಂದುವರಿದಿದೆ. 
icon

(2 / 8)

ಸೀತಾಳ ಜತೆಗೆ ಮಾತನಾಡಬೇಕು ಎಂದು ಹಪಹಪಿಸುತ್ತಿರುವ ರಾಮನಿಗೆ ಅಶೋಕ ಊರುಗೋಲಾಗಿದ್ದಾನೆ. ಚಾಂದಿನಿಯನ್ನು ಭೇಟಿ ಮಾಡುವುದಕ್ಕೂ ಮುನ್ನ ಸೀತಾ- ರಾಮ ಒಂದಾಗಲಿ ಎಂದು ಬಯಸುತ್ತಿದ್ದಾನೆ. 
icon

(3 / 8)

ಈ ನಡುವೆ ಚಾಂದಿನಿಗೆ ಫೋನ್‌ ಮಾಡಿದ ಭಾರ್ಗವಿ, ಆಕೆಯ ತಲೆಗೆ ಇಲ್ಲ ಸಲ್ಲದ ವಿಚಾರಗಳನ್ನು ತುಂಬುತ್ತಿದ್ದಾಳೆ. ಈಗಲೇ ಆಫೀಸ್‌ನಲ್ಲಿ ಕೆಲಸ ಶುರು ಮಾಡು, ರಾಮ್‌ ಬಂದ ಮೇಲೆ ಸರ್ಪ್ರೈಸ್‌ ಆಗ್ತಾನೆ ಎಂದಿದ್ದಾಳೆ. 
icon

(4 / 8)

ಅಷ್ಟಕ್ಕೆ ಮುಗಿಯಲಿಲ್ಲ. ರಾಮನ ಪ್ರೀತಿ ಗಳಿಸು, ಕಳೆದ ಸಲ ಪ್ರೀತಿ ಮಾಡಿದ್ದಕ್ಕೆ ನಿನ್ನ ಕೈಗೆ ಹಣ್ಣ ತಲುಪಿತ್ತು. ಈ ಸಲ ದೇಸಾಯಿ ಕುಟುಂಬದ ಸೊಸೆಯಾದರೂ ಆಗಬಹುದು ಎಂದು ಚಾಂದಿನಿಗೆ ಹೇಳಿದ್ದಾಳೆ ಭಾರ್ಗವಿ. 
icon

(5 / 8)

ಚಿಕ್ಕಿಯ ಮಾತನ್ನು ಕೇಳಿ ಆಕಾಶದಲ್ಲಿ ತೇಲಾಡಿದ್ದಾಳೆ ಚಾಂದಿನಿ. ಆದರೆ, ತಾನು ಭಾರ್ಗವಿ ಕೈಯಲ್ಲಿ ಬಕ್ರ ಆಗುತ್ತಿದ್ದೇನೆ ಎಂಬ ಅರಿವೂ ಚಾಂದಿನಿಗಿಲ್ಲ.
icon

(6 / 8)

ಮತ್ತೊಂದು ಕಡೆಗೆ ಸೀತಾಳ ರಾಜೀನಾಮೆ ಪತ್ರ ಸೂರ್ಯಪ್ರಕಾಶ್‌ ಕೈಗೆ ಬಂದಿದೆ. ರಾಮ್‌ ಮನೆ ಖರೀದಿಸಿದ ವಿಚಾರ ತಿಳಿದ ಬಳಿಕವೇ ಸೀತಾ ರಿಸೈನ್ ಮಾಡಿದ್ದಳು. ಇದೀಗ ಅದು ಬಾಸ್‌ ಟೇಬಲ್‌ ಮೇಲಿದೆ. 
icon

(7 / 8)

 ಮತ್ತೊಂದು ಕಡೆ ಲಾಯರ್‌ ರುದ್ರಪ್ರತಾಪ್‌ ಕಣ್ಣು ಅಶೋಕನ ತಂಗಿ ಮೇಲೆ ಬಿದ್ದಿದೆ. ರಾಹುಲ್‌ ಎಂದು ಹೇಳಿಕೊಂಡು, ಆಕೆ ಬಳಿ ಚಿಕಿತ್ಸೆಗೆ ತೆರಳಿದ್ದಾನೆ. 
icon

(8 / 8)

ಇತರ ಗ್ಯಾಲರಿಗಳು