ಕನ್ನಡ ಸುದ್ದಿ  /  Photo Gallery  /  Kannada Television News Seetha Rama Serial March 27th Episode Promo Highlights Seetha Raama Serial Latest Update Mnk

Seetha Rama Serial: ಸೀತಮ್ಮನ್ನ ಮದುವೆಯಾಗಿ, ನಾನು ನಿನ್ನ ಅಪ್ಪನಾಗ್ತಿನಿ; ತಂದೆ ಪ್ರೀತಿ ಕಾಣದ ಸಿಹಿ, ರಾಮನ ಬಂಧವನ್ನು ಒಪ್ತಾಳಾ?

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಹೋಳಿಯ ರಂಗು ಮುಗಿದ ಬಳಿಕ, ನೇರವಾಗಿ ಸಿಹಿ ಬಳಿ ಆಗಮಿಸಿದ್ದಾನೆ ರಾಮ. ಸೀತಾಳನ್ನು ಮದುವೆಯಾಗುವ ವಿಚಾರವನ್ನು ಪ್ರಸ್ತಾಪಿಸಿ, ಆ ಪುಟಾಣಿಯಿಂದಲೂ ಒಪ್ಪಿಗೆ ಪಡೆದುಕೊಳ್ಳಲು ಮುಂದಾಗಿದ್ದಾನೆ. ಆದರೆ, ರಾಮನ ಮಾತಿಗೆ ಸಿಹಿ ಒಪ್ಪಿಗೆ ಕೊಡ್ತಾಳಾ?

ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಪ್ರೀತಿಯ ಮಾತು ಮುಂದುವರಿದಿದೆ. ಮನೆ ಮಂದಿಗೂ ಈ ವಿಚಾರವನ್ನು ಹೇಳಲು ತುದಿಗಾಲ ಮೇಲೆ ನಿಂತಿದ್ದಾನೆ ರಾಮ. 
icon

(1 / 8)

ತಮ್ಮ ಮನೆಯವರನ್ನು ಒಪ್ಪಿಸುವುದಕ್ಕೂ ಮುನ್ನ ಸೀತಾಳ ಮಗಳು ಪುಟಾಣಿ ಸಿಹಿಯಿಂದ ಒಪ್ಪಿಗೆ ಪಡೆದುಕೊಳ್ಳಬೇಕಿದೆ ರಾಮ. 
icon

(2 / 8)

ಸಿಹಿಯ ಒಪ್ಪಿಗೆ ಪಡೆದುಕೊಂಡೇ ಮುಂದುವರಿಯುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ ಸೀತಾ. ಹಾಗಾಗಿ ಸಿಹಿ ಬಳಿಗೆ ಆಗಮಿಸಿ, ತಮ್ಮಿಬ್ಬರ ಪ್ರೀತಿಗೆ ಒಪ್ಪಿಗೆ ಪಡೆಯುತ್ತಿದ್ದಾನೆ ರಾಮ. 
icon

(3 / 8)

ನಾನು, ಸೀತಮ್ಮ, ನೀನು ಮೂರೂ ಜನ ಒಟ್ಟಿಗೆ ಇರೋಣ್ವಾ? ಎಂದು ಸಿಹಿ ಮುಂದೆ ಮನದ ಬಯಕೆಯನ್ನು ಹೇಳಿಕೊಂಡಿದ್ದಾನೆ ರಾಮ. 
icon

(4 / 8)

ನಮ್ಮದೇ ಆದ ಒಂದು ಪುಟ್ಟ ಪ್ರಪಂಚದಲ್ಲಿ ನಾವೆಲ್ಲರೂ ಹ್ಯಾಪಿಯಾಗಿರೋಣ್ವಾ? ಸೀತಮ್ಮನ್ನ ನಾನು ಮದುವೆ ಆಗಬಹುದಾ? ಎಂದು ಸಿಹ ಬಳಿ ಕೇಳಿದ್ದಾನೆ ರಾಮ. 
icon

(5 / 8)

ಸೀತಮ್ಮನ ಮದುವೆಯಾದರೆ, ನಂಗೆ ಅಪ್ಪ ಆಗ್ತಿಯಾ ಎಂದು ಸಿಹಿ ಕೇಳಿದ್ದಾಳೆ. ಅದಕ್ಕೆ ಉತ್ತರಿಸಿದ ರಾಮ್.‌ ನೀನು ನನ್ನ ಮಗಳು ಅಂತ ಯಾವತ್ತೋ ಒಪ್ಪಿಕೊಂಡಿದ್ದೇನೆ. ನಂಗೆ ನೀನು ಯಾವತ್ತಿದ್ದರೂ ಮಗಳೇ ಎಂದಿದ್ದಾನೆ ರಾಮ.
icon

(6 / 8)

ಇದೆಲ್ಲದರ ಕೊನೆಗೆ ನಂಗೆ ಅಪ್ಪ ಬೇಡ ಎಂದೂ ಸಿಹಿ ಕಣ್ಣೀರಿಟ್ಟಿದ್ದಾಳೆ. ರಾಮ್‌ಗೂ ಇದೂ ಶಾಕ್‌ಗೆ ದೂಡಿದೆ.  ಅಪ್ಪನ ಪ್ರೀತಿನೇ ಕಾಣದ ಮುದ್ದು ಸಿಹಿ.. ರಾಮನನ್ನ ಅಪ್ಪ ಅಂತ ಒಪ್ಕೋತಾಳಾ? 
icon

(7 / 8)

ಈ ಪ್ರಶ್ನೆಗೆ ಇನ್ನೇನು ಇಂದಿನ ಸೀತಾ ರಾಮ ಸೀರಿಯಲ್‌ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. 
icon

(8 / 8)

ಇತರ ಗ್ಯಾಲರಿಗಳು