ಕನ್ನಡ ಸುದ್ದಿ  /  Photo Gallery  /  Kannada Television News Seetha Rama Serial March 29th Episode Promo Highlights Seetha Raama Serial Latest Update Mnk

Seetha Rama Serial: ಚಾಂದಿನಿಗೆ ಮಾತಲ್ಲೇ ಖಡಕ್‌ ಕೌಂಟರ್‌, ಏನೇ ಆದ್ರೂ ರಾಮನನ್ನ ಬಿಟ್ಕೊಡೋ ಮಾತೇ ಇಲ್ಲ ಎಂದ ಸೀತಾ!

  • Seetha Rama Serial: ಸೀತಾ ಮತ್ತು ರಾಮನ ನಡುವಿನ ಪ್ರೀತಿ ವಿಚಾರ ಚಾಂದಿನಿ ಗಮನಕ್ಕೂ ಬಂದಿದೆ. ನೇರವಾಗಿ ರಾಮ್‌ ಬಳಿ ಬಂದು ಇಬ್ಬರಿಗೂ ಆಲ್‌ದಿ ಬೆಸ್ಟ್‌ ಹೇಳಿ, ರಾಮನ ಕಣ್ಣಲ್ಲಿ ಒಳ್ಳೆಯವಳಂತೆ ನಟಿಸಿದ್ದಾಳೆ. ಆದರೆ, ಸೀತಾಳನ್ನು ನೋಡಿ ಕೋಪ ತಾಪ ಮುಂದುವರಿಸಿದ್ದಾಳೆ. ಹಾಗೆಂದ ಮಾತ್ರಕ್ಕೆ ಸೀತಾ ಸುಮ್ಮನಿರ್ತಾಳಾ? ಚೆನ್ನಾಗಿಯೇ ಕೌಂಟರ್‌ ಕೊಟ್ಟಿದ್ದಾಳೆ.

ರಾಮನ ಬಳಿ ಬಂದ ಚಾಂದಿನಿ, ನಿನ್ನ ಮತ್ತು ಸೀತಾ ನಡುವಿನ ಪ್ರೀತಿ ವಿಚಾರ ನನಗೆ ಗೊತ್ತು. ನಾನು ನಿನಗಾಗಿ ನನ್ನ ಪ್ರೀತಿ ತ್ಯಾಗ ಮಾಡುವೆ ಎಂದು ಡೌವ್‌ ಮಾಡಿದ್ದಾಳೆ.
icon

(1 / 8)

ಇತ್ತ ರಾಮನ ಜತೆ ಮಾತನಾಡಿದ ಚಾಂದಿನಿ ಬಳಿಕ ಸೀತಾ ಬಳಿ ಬಂದು ಆಕೆಯನ್ನೂ ಕೆಣಕಿದ್ದಾಳೆ. ನನ್ನ ಪ್ರೀತಿಯನ್ನು ನನ್ನ ಕೈಯಿಂದ ಕಿತ್ತುಕೊಂಡು ಬಿಟ್ರಲ್ಲ ಎಂದಿದ್ದಾಳೆ. ನಾನು ನನ್ನ ಫೀಲಿಂಗ್ಸ್‌ ನಿಮ್ಮ ಬಳಿ ಹೇಳಿದರೂ, ನೀವು ನಿಮ್ಮ ಮನಸ್ಸಿನಲ್ಲಿರೋದನ್ನು ಹೇಳಲಿಲ್ಲ. 
icon

(2 / 8)

ಈಗ ನೋಡಿದರೆ, ರಾಮ್‌ ನನ್ನವನು ಅಂತಿದ್ದೀರಾ. ಸೋ ಸ್ಯಾಡ್‌. ಅದೇ ನಾನು ನಿಮ್ಮ ಜಾಗದಲ್ಲಿ ಇದ್ದಿದ್ದರೆ, ಮೊದಲ ಪ್ರೀತಿಯನ್ನು ಒಂದು ಮಾಡಿಸೋ ಕೆಲಸ ಮಾಡ್ತಿದ್ದೆ. ಆದ್ರೆ, ನೀವು ಮಾಡಿದ್ದೇನು, ನಿಮ್ಮ ಲೈಫ್‌ ಸೆಟಲ್‌ ಮಾಡಿಕೊಳ್ಳಲು ರಾಮ್‌ನ ಬಳಸಿಕೊಂಡ್ರಿ ಎಂದಿದ್ದಾಳೆ ಚಾಂದಿನಿ. 
icon

(3 / 8)

ಇವತ್ತು ರಾಮ್‌ ನಿಮಗೆ ಸಿಗ್ತಿದಾನೆ ಅಂದರೆ, ಅದು ನಾನು ಮಾಡಿರೋ ದಾನ ಎಂದು ಹೇಳಿದ ಚಾಂದಿನಿಗೆ ಮುಟ್ಟಿ ನೋಡುಕೊಳ್ಳುವಂತೆ ಉತ್ತರಿಸಿದ್ದಾಳೆ ಸೀತಾ. 
icon

(4 / 8)

ಇದಕ್ಕೆ ಉತ್ತರಿಸಿದ ಸೀತಾ, ನಾನೇನೂ ರಾಮ್‌ನ ಕಿತ್ತುಕೊಂಡಿಲ್ಲ ಚಾಂದಿನಿ ಅವ್ರೇ. ಕಿತ್ತುಕೊಳ್ಳಲು ಅದೇನೂ ತಿಂಡಿ ಅಲ್ಲ. ಪ್ರೀತಿ ಅನ್ನೋದು ಅದೊಂದು ಭಾವನೆ. ಇಬ್ಬರಲ್ಲೂ ಮ್ಯೂಚುವಲ್ ಆಗಿ ಬರಬೇಕು ಎಂದು ಚಾಂದಿನಿಗೆ ಕೌಂಟರ್‌ ಕೊಟ್ಟಿದ್ದಾಳೆ.
icon

(5 / 8)

ರಾಮ್‌ಗೆ ನೀವು ಬೇಕು ಅಂದೇ ಈಗಲೇ ತಂದು ನಿಮ್ಮ ಮುಂದೆ ನಿಲ್ಲಿಸ್ತಿನಿ. ಕನ್ವಿನ್ಸ್‌ ಮಾಡ್ತಿನಿ. ಆದರೆ, ರಾಮ್‌ಗೆ ನಿಮ್ಮ ಮೇಲೆ ಯಾವ ಪ್ರೀತಿಯೂ ಇಲ್ಲ. ರಾಮ್‌ ನಿಮ್ಮನ್ನ ಮರಿಯೋಕೆ ಎಷ್ಟು ಕಷ್ಟ ಪಡ್ತಿದ್ರು ಅನ್ನೋದನ್ನ ನಾನು ನೋಡಿದ್ದೇನೆ. 
icon

(6 / 8)

ಒಂದು ಸತ್ಯ ಏನಂದ್ರೆ, ನಾನೂ ರಾಮ್‌ನ ಇಷ್ಟಪಡ್ತಿದ್ದೀನಿ, ರಾಮ್‌ ಕೂಡ ನನ್ನನ್ನು ಇಷ್ಟಪಡ್ತಿದ್ದಾನೆ. ಇಬ್ಬರೂ ಪ್ರೀತಿಸ್ತಿದ್ದೀವಿ ಎಂದಿದ್ದಾಳೆ ಸೀತಾ. ಇತ್ತ ಇವರಿಬ್ಬರ ಮಾತನ್ನು ಮರೆಯಲ್ಲಿ ನಿಂತು ಅಶೋಕ ಕೇಳಿಸಿಕೊಂಡು, ಸೀತಾಳ ಉತ್ತರಕ್ಕೆ ಖುಷಿಯಲ್ಲಿದ್ದಾನೆ. 
icon

(7 / 8)

ಸಿನಿಮಾ ಸೀರಿಯಲ್‌, ಒಟಿಟಿ ಕುರಿತ ಸುದ್ದಿಗಳಿಗೆ ಎಚ್‌ ಟಿ ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ. 
icon

(8 / 8)

ಸಿನಿಮಾ ಸೀರಿಯಲ್‌, ಒಟಿಟಿ ಕುರಿತ ಸುದ್ದಿಗಳಿಗೆ ಎಚ್‌ ಟಿ ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ. 

IPL_Entry_Point

ಇತರ ಗ್ಯಾಲರಿಗಳು