ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಭಾರ್ಗವಿಯ ಮುಖವಾಡ ಕಳಚಲು ಹೊರಟ ಸತ್ಯಜಿತ್;‌ ಬಯಲಾಯ್ತು ವಾಣಿ ಬರೆದಿಟ್ಟ ವಿಲ್‌ ರಹಸ್ಯ!

Seetha Rama Serial: ಭಾರ್ಗವಿಯ ಮುಖವಾಡ ಕಳಚಲು ಹೊರಟ ಸತ್ಯಜಿತ್;‌ ಬಯಲಾಯ್ತು ವಾಣಿ ಬರೆದಿಟ್ಟ ವಿಲ್‌ ರಹಸ್ಯ!

  • ಸೀತಾಳನ್ನು ಮನೆ ಸೊಸೆ ಮಾಡಿಕೊಳ್ಳಲು ತಾತ ಒಪ್ಪಿಗೆ ಸೂಚಿಸಿದರೆ, ಸೀತಾ ತನ್ನ ನಿರ್ಧಾರ ತಿಳಿಸಿಲ್ಲ. ಈ ನಡುವೆ ಭಾರ್ಗವಿಗೆ ವಿಲ್‌ನಲ್ಲೇನಿದೆ ಎಂಬ ಸತ್ಯ ತಿಳಿಯಲು ಕಾಯುತ್ತಿದ್ದಾಳೆ. ಭಾರ್ಗವಿ ಮೇಲೆ ಮೊದಲೇ ಉರಿದು ಬೀಳುವ ಸತ್ಯಜಿತ್‌, ಒಡಲೊಳಗಿನ ಆಕ್ರೋಶವನ್ನು ಎಲ್ಲರ ಮುಂದೆ ಹೇಳಲು ಹೊರಟೇ ಬಿಟ್ಟಿದ್ದಾನೆ.

ಸೀತಾ ಮತ್ತು ರಾಮನ ಮದುವೆಯ ಮಾತುಕತೆ ಮುಂದುವರಿದಿದೆ. ಆದಷ್ಟು ಬೇಗ ಇವರಿಬ್ಬರ ಮದುವೆ ಮಾಡಿಸಬೇಕೆಂದು ತಾತ ಸೂರ್ಯಪ್ರಕಾಶ್‌ ಕಾಯುತ್ತಿದ್ದರೆ, ಸೀತಾಳಿಂದ ಇನ್ನೂ ಯಾವುದೇ ಉತ್ತರ ಹೊರಬಂದಿಲ್ಲ. 
icon

(1 / 8)

ಈ ನಡುವೆ ತಾಟಕಿ ಭಾರ್ಗವಿಯ ಕುತಂತ್ರಗಳನ್ನು ಎಲ್ಲರ ಮುಂದೆ ಬಹಿರಂಗಪಡಿಸಬೇಕೆಂಬ ನಿಟ್ಟಿನಲ್ಲಿಯೂ ಸತ್ಯಜಿತ್‌ ಪಣ ತೊಟ್ಟಿದ್ದಾನೆ. 
icon

(2 / 8)

ಮಾವನ ಮುಂದೆ ವಾಣಿಯ ಬಗ್ಗೆ ಮಾತನಾಡುತ್ತಿರುವ ಭಾರ್ಗವಿ, ವಾಣಿ ಅಕ್ಕ ಇದ್ದಿದ್ದರೆ, ನಮ್ಮ ಮನೆ ಖುಷಿ, ಸಂಭ್ರಮ ಇನ್ನೂ ಹೆಚ್ಚಾಗಿರೋದು ಎಂದಿದ್ದಾಳೆ. 
icon

(3 / 8)

ವಿಧಿ ಯಾಕೆ ಇಷ್ಟು ಬೇಗ ಅವರನ್ನು ಕರೆಸಿಕೊಂಡು ಬಿಡ್ತೋ ಗೊತ್ತಿಲ್ಲ ಎಂದು ಸೂರ್ಯಪ್ರಕಾಶ್‌ ಮರುಕ ವ್ಯಕ್ತಪಡಿಸಿದ್ದಾನೆ. 
icon

(4 / 8)

ಅಕ್ಕನ ಜಾಗಕ್ಕೆ ಅಕ್ಕನ ಥರ ಇರೋ ಸೊಸೆಯೇ ಈ ಮನೆಗೆ ಬರ್ತಿದ್ದಾಳಲ್ಲ, ರಾಮನ ಖುಷಿಯಲ್ಲಿ ನಾವೆಲ್ಲರೂ ನಮ್ಮ ದುಃಖವನ್ನು ಮರಿಬೇಕು ಎಂದಿದ್ದಾಳೆ. 
icon

(5 / 8)

ಇನ್ನೊಂದು ಕಡೆ, ಇವತ್ತು ನಾನು ಆಗಿದ್ದಾಗಲಿ, ಭಾರ್ಗವಿ ಬಗ್ಗೆ ಇರುವ ಸತ್ಯವನ್ನು ಎಲ್ಲರ ಮುಂದೆ ಹೇಳಿಯೇ ಹೇಳ್ತಿನಿ ಎಂದು ಅಪ್ಪನ ಮುಂದೆ ಬಂದಿದ್ದಾನೆ. 
icon

(6 / 8)

ಈ ನಡುವೆ ವಿಲ್‌ನಲ್ಲಿನ ವಿಚಾರವೂ ಲಾಯರ್‌ ಸಮ್ಮುಖದಲ್ಲಿಯೇ ಬಹಿರಂಗವಾಗಿದೆ. ನನ್ನ ಸಂಪೂರ್ಣ ಆಸ್ತಿ ನನ್ನ ಮಗ ಶ್ರೀರಾಮ್‌ಗೆ ಸಿಗಬೇಕು. ಇದರಲ್ಲಿ ಬೇರೆ ಯಾರಿಗೂ ಈ ಆಸ್ತಿ ಸೇರ ಕೂಡದು. ಬೇಕಿದ್ದರೆ ರಾಮ್‌ ತನ್ನ ಹೆಂಡತಿ ಮಕ್ಕಳಿಗೆ ಈ ಆಸ್ತಿ ನೀಡಬಹುದು ಎಂಬ ಅಂಶ ಹೊರಬಿದ್ದಿದೆ. 
icon

(7 / 8)

ಹಾಗಾದರೆ, ಭಾರ್ಗವಿಯ ಮುಂದಿನ ನಡೆ ಏನು? ಆಸ್ತಿ ಕಬಳಿಸಲು ಅದ್ಯಾವ ಪ್ಲಾನ್‌ ಮಾಡ್ತಾಳೆ ಭಾರ್ಗವಿ? ಅದು ಮುಂದಿನ ಸಂಚಿಕೆಯಲ್ಲಿಯೇ ಗೊತ್ತಾಗಲಿದೆ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು