Gagan Chinnappa: ರೀಲ್ ಅಷ್ಟೇ ಅಲ್ಲ ರಿಯಲ್ ಲೈಫ್‌ನಲ್ಲೂ ಸೀತಾ ರಾಮ ನಟನ ಬಾಳಲ್ಲಿ ಬ್ರೇಕ್‌ಅಪ್ ಬಿರುಗಾಳಿ; ಯಾರು ಆ ಹುಡುಗಿ?
- Seetha Rama Serial Gagan Chinnappa: ಸೀತಾ ರಾಮ ಸೀರಿಯಲ್ ಮೂಲಕ ನಾಡಿನ ವೀಕ್ಷಕರ ಗಮನ ಸೆಳೆದಿದ್ದಾರೆ ನಟ ಗಗನ್ ಚಿನ್ನಪ್ಪ. ಧಾರಾವಾಹಿಯಲ್ಲಿ ಹೆಸರಿಗೆ ತಕ್ಕಂತೆ ರಾಮನ ಗುಣವುಳ್ಳವನಾಗಿಯೇ ಗಗನ್ ಕಾಣಿಸಿಕೊಂಡಿದ್ದಾರೆ. ಇದೀಗ ಸೀರಿಯಲ್ ಹೊರತುಪಡಿಸಿ, ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ, ನಿಜ ಜೀವನದಲ್ಲೂ ಇವರಿಗೆ ಪ್ರೀತಿ ಕೈಕೊಟ್ಟಿದೆ!
- Seetha Rama Serial Gagan Chinnappa: ಸೀತಾ ರಾಮ ಸೀರಿಯಲ್ ಮೂಲಕ ನಾಡಿನ ವೀಕ್ಷಕರ ಗಮನ ಸೆಳೆದಿದ್ದಾರೆ ನಟ ಗಗನ್ ಚಿನ್ನಪ್ಪ. ಧಾರಾವಾಹಿಯಲ್ಲಿ ಹೆಸರಿಗೆ ತಕ್ಕಂತೆ ರಾಮನ ಗುಣವುಳ್ಳವನಾಗಿಯೇ ಗಗನ್ ಕಾಣಿಸಿಕೊಂಡಿದ್ದಾರೆ. ಇದೀಗ ಸೀರಿಯಲ್ ಹೊರತುಪಡಿಸಿ, ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ, ನಿಜ ಜೀವನದಲ್ಲೂ ಇವರಿಗೆ ಪ್ರೀತಿ ಕೈಕೊಟ್ಟಿದೆ!
(1 / 9)
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ರಾಮ ಸೀರಿಯಲ್ ಸದ್ಯ ನೋಡುಗರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.(instagram/ Gagan chinnappa)
(2 / 9)
ಸೀತಾಗೆ ತನ್ನ ಪ್ರೀತಿಯನ್ನು ಹೇಳಿ, ಆಕೆಯಿಂದಲೂ ಒಪ್ಪಿಗೆ ಪಡೆದುಕೊಂಡಿದ್ದಾನೆ ರಾಮ. ಇದೀಗ ಸೀರಿಯಲ್‌ನಲ್ಲಿ ಪ್ರೇಮಾಯಣದ ರಂಗು ಚೆಲ್ಲಿದೆ.
(3 / 9)
ಈ ಸೀರಿಯಲ್‌ನಲ್ಲಿ ರಾಮ್‌ಗೆ ಹಳೇ ಪ್ರೀತಿ ಕೈಕೊಟ್ಟಿದೆ. ಚಾಂದಿನಿ ಜತೆಗೆ ಬ್ರೇಕ್‌ಅಪ್ ಆದ ವಿಚಾರ ಈಗಾಗಲೇ ಬಹಿರಂಗವಾಗಿದೆ. ನಿಜಜೀವನದಲ್ಲೂ ರಾಮ್ ಪಾತ್ರಧಾರಿಗೂ ಬ್ರೇಕ್ ಅಪ್ ಆಗಿದೆ ಅಂದರೆ ನಂಬ್ತೀರಾ?
(4 / 9)
ಹೌದು ಎನ್ನುತ್ತಾರೆ ರಾಮ್, ಸಂದರ್ಶನವೊಂದರಲ್ಲಿ ಮಾತನಾಡಿದ ಗಗನ್ ಚಿನ್ನಪ್ಪ, ತಮ್ಮ ಲವ್ ಮತ್ತು ಬ್ರೇಕ್‌ಅಪ್ ವಿಚಾರವನ್ನು ಹೇಳಿಕೊಂಡಿದ್ದಾರೆ. ಆ ಹುಡುಗಿಯ ಹೆಸರನ್ನೂ ರಿವೀಲ್ ಮಾಡಿದ್ದಾರೆ.
(5 / 9)
ಈ ಹಿಂದೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದರೂ, ಸೀತಾ ರಾಮ ಸೀರಿಯಲ್ ಪ್ರಸಾರ ಆರಂಭವಾದ ಬಳಿಕ ಹೆಚ್ಚು ಮುನ್ನೆಲೆಗೆ ಬಂದಿದ್ದಾರೆ ನಟ ಗಗನ್ ಚಿನ್ನಪ್ಪ.
(6 / 9)
ನೋಡಲು ಸಖತ್ ಸ್ಟೈಲಿಶ್ ಆಗಿರೋ ಗಗನ್ ಚಿನ್ನಪ್ಪ, ನಟನೆ ಸಲುವಾಗಿ ವಿದೇಶದಲ್ಲಿನ ಕೆಲಸ ಬಿಟ್ಟು ಬಣ್ಣದ ಲೋಕಕ್ಕೆ ಆಗಮಿಸಿದ್ದಾರೆ.
(7 / 9)
ಹೀಗಿರುವ ಇದೇ ನಟ ಇದೀಗ ತಮ್ಮ ಮಾಜಿ ಪ್ರೇಯಸಿ ಬಗ್ಗೆಯೂ ಮಾತನಾಡಿದ್ದಾರೆ. ನನಗೂ ಲವ್ವಾಗಿತ್ತು, ಆದರೆ ಅದು ಬ್ರೇಕ್‌ಅಪ್ ಆಯ್ತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಗಗನ್.
(8 / 9)
ಅದು 2021ರ ಸಮಯ. ಪ್ರಾರ್ಥನಾ ಜತೆ ಡೇಟಿಂಗ್‌ನಲ್ಲಿದ್ದೆ. ಆದರೆ, ಅದು ಮುಂದುವರಿಯಲಿಲ್ಲ. ನಂತರ ಅದು ಬ್ರೇಕಪ್ ಆಯ್ತು. ಇದೇ ವಿಚಾರವನ್ನು ನಾನು ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದೆ. ಆಗ ನಾನು ಇಷ್ಟೊಂದು ಪೇಮಸ್ ಆಗಿರಲಿಲ್ಲ. ಅಂದಿನ ಆ ನೋಟ್ ಇದೀಗ ವೈರಲ್ ಆಗುತ್ತಿದೆ ಎಂದಿದ್ದಾರೆ.
ಇತರ ಗ್ಯಾಲರಿಗಳು