ಮುಖದಲ್ಲಿ ಮೊದಲಿನ ಚಾರ್ಮ್ ಇಲ್ಲ, ವಯಸ್ಸೂ ಆಯ್ತು; ಸೀತಾ ರಾಮ ಸೀರಿಯಲ್ ವೈಷ್ಣವಿ ಗೌಡ ಫೋಟೋಸ್ ನೋಡಿ ಫ್ಯಾನ್ಸ್ ಬೇಸರ
- Seetha Rama Serial: ಸೀತಾ ರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಒಂದಿಲ್ಲೊಂದು ಫೋಟೋ ಗೊಂಚಲುಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಕಾಲರ್ ಇರೋ ಕಡು ನೀಲಿ ಬಣ್ಣದ ರವಿಕೆ ಮತ್ತು ಬಂಗಾರದ ದಡಿಯ ಸೀರೆ ಧರಿಸಿ ಪೋಸ್ ಕೊಟ್ಟಿದ್ದಾರೆ.

(1 / 7)
ಕಿರುತೆರೆಯಲ್ಲಿ ಸ್ಟಾರ್ ನಟಿಯಾಗಿ ಮುಂಚೂಣಿಯಲ್ಲಿದ್ದಾರೆ ವೈಷ್ಣವಿ ಗೌಡ. ಸದ್ಯ ಜೀ ಕನ್ನಡದಲ್ಲಿ ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. (instagram/ Vaishnavi gowda)
(2 / 7)
ಸಿಂಗಲ್ ಪೇರಂಟ್ ತಾಯಿಯ ಸಮಸ್ಯೆಗಳು, ಸಮಾಜ ಆಕೆಯನ್ನು ನೋಡುವ ರೀತಿ, ಇದರ ನಡುವೆ ಮೊಳಕೆಯೊಡೆಯುವ ಪ್ರೀತಿ.. ಹೀಗೆ ನೋಡಿಸಿಕೊಂಡು ಹೊರಟಿದೆ ಸೀತಾ ರಾಮ ಸೀರಿಯಲ್.
(3 / 7)
ಸೀತಾ ರಾಮ ಸೀರಿಯಲ್‌ನಲ್ಲಿ ಸದ್ಯ ರಾಮ ಮತ್ತು ಸೀತಾ ಮದುವೆಯ ವಿಚಾರ ಚರ್ಚೆಯಲ್ಲಿದೆ. ಸೀತಾಳಿಗೆ ಮಗು ಇರುವ ವಿಚಾರ ಸೂರ್ಯಪ್ರಕಾಶ್‌ಗೂ ಗೊತ್ತಾಗಿದೆ.
(4 / 7)
ಮಗು ಇದ್ದರೂ ಪರವಾಗಿಲ್ಲ ಎಂದು ಸೀತೆಯನ್ನು ಮನೆ ಸೊಸೆಯಾಗಿ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದಾನೆ ಸೂರ್ಯಪ್ರಕಾಶ್.
(5 / 7)
ಇನ್ನೊಂದು ಕಡೆ ಭಾರ್ಗವಿ ಮಾತ್ರ ಶತಾಯ ಗತಾಯ ಈ ಮದುವೆ ತಪ್ಪಿಸುವ ನಿಟ್ಟಿನಲ್ಲಿ ರಣತಂತ್ರ ಹೆಣೆಯುತ್ತಿದ್ದಾಳೆ. ಮುಂದೇನಾಗುತ್ತೋ ಎಂಬ ಕುತೂಹಲವೂ ಮೂಡಿದೆ.
(6 / 7)
ಈಗ ಸೀರಿಯಲ್ ಬದಿಗಿಟ್ಟರೆ, ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋ ಹಂಚಿಕೊಂಡಿರುವ ವೈಷ್ಣವಿ ಗೌಡ, ಸೀರೆಯಲ್ಲಿ ಮಿಂಚಿದ್ದಾರೆ. ಹೀಗೆ ಫೋಟೋ ಹಂಚಿಕೊಂಡಿದ್ದೇ ತಡ, ಕೆಲವರು ಚೆಂದ ಎಂದು ಫೋಟೋಗಳಿಗೆ ಕಾಮೆಂಟ್ ಹಾಕಿದ್ರೆ, ಇನ್ನು ಕೆಲವರು ನೀವು ಮೊದಲಿನ ವೈಷ್ಣವಿ ಅಲ್ಲ ಎನ್ನುತ್ತಿದ್ದಾರೆ.
ಇತರ ಗ್ಯಾಲರಿಗಳು