ಪತ್ರದ ಮೂಲಕ ತನ್ನ ಸಾವಿಗೆ ಭಾರ್ಗವಿಯೇ ಕಾರಣ ಎಂದ ಸಿಹಿ! ಅಶೋಕನ ಮೂಲಕ ರಾಮನ ಕೈ ಸೇರಿತು ಸಿಹಿ ಬರಹ
ಜೀ ಕನ್ನಡದ ಸೀತಾ ರಾಮ ಧಾರಾವಾಹಿಯಲ್ಲೀಗ ಬಿಗ್ ಟ್ವಿಸ್ಟ್ ಎದುರಾಗಿದೆ. ಅಶೋಕನಿಗೆ ಸಿಹಿ ಆತ್ಮ ಇರುವುದು ಸುಬ್ಬಿ ಮೂಲಕ ಅರಿವಿಗೆ ಬಂದಿದೆ. ಅಷ್ಟೇ ಅಲ್ಲ, ತನ್ನ ಸಾವಿಗೆ ಕಾರಣ ಯಾರು ಎಂಬುದನ್ನೂ ಸಿಹಿ ಪತ್ರದ ಮೂಲಕ ವಿವರಿಸಿದ್ದಾಳೆ. ಆ ಪತ್ರ ಅಶೋಕನ ಮೂಲಕ ರಾಮನ ಕೈ ಸೇರಿದೆ. ಅಲ್ಲಿಗೆ ʻಆಪರೇಷನ್ ಭಾರ್ಗವಿ ಚಿಕ್ಕಿʼ ಶುರುವಾಗಿದೆ.
(1 / 7)
ಸೀತಾ ರಾಮ ಧಾರಾವಾಹಿ ಅಂತ್ಯದ ಸನಿಹ ಬಂದಂತಿದೆ. ಇನ್ನೇನು ಭಾರ್ಗವಿಯ ಇನ್ನೊಂದು ಮುಖ ಎಲ್ಲರ ಮುಂದೆ ಕಳಚುವ ಸಮಯ ಹತ್ತಿರ ಬಂದಿದೆ.
(Zee Kannada)(2 / 7)
ಇಲ್ಲಿಯವರೆಗೂ ಸಿಹಿಯ ಆತ್ಮ ಇರುವುದು ಕೇವಲ ಸುಬ್ಬಿಗೆ ಮಾತ್ರ ಗೊತ್ತಿತ್ತು. ಇದೀಗ ಆ ಆತ್ಮ ಇರುವುದು ಅಶೋಕನ ಅರಿವಿಗೆ ಬಂದಿದೆ. ಅಶೋಕನಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾಳೆ.
(3 / 7)
ಈ ನಡುವೆ ಸಿಹಿಯ ಸಾವಿಗೆ ಕಾರಣ ಏನೆಂಬುದು ಇದೀಗ ಮುನ್ನೆಲೆಗೆ ಬಂದಿದೆ. ಈ ವಿಚಾರವನ್ನು ಸ್ವತಃ ಸಿಹಿ, ಸುಬ್ಬಿಯ ಮೂಲಕ ಅಶೋಕನ ಗಮನಕ್ಕೆ ತಂದಿದ್ದಾಳೆ.
(4 / 7)
ಸಿಹಿಯದ್ದು ಆಕ್ಸಿಡೆಂಟ್ ಅಲ್ಲ ಎಂಬ ವಿಚಾರ ರಾಮ್‌ಗೆ ಹೇಳಿದ್ರೆ ಆತ ನಂಬಲ್ಲ. ಹಾಗಾಗಿ ಏಣು ಮಾಡಬೇಕು ಎಂದಾಗ, ಸಿಹಿಯೇ ತನ್ನ ಕೈಯಾರೆ ಪತ್ರವೊಂದನ್ನು ಬರೆದಿದ್ದಾಳೆ.
(5 / 7)
ಆ ಪತ್ರದಲ್ಲಿ ಹೀಗೆ ಬರೆದಿದ್ದಾಳೆ. ನಾನು ಆಕ್ಸಿಡೆಂಟ್ ಆಗಿ ಸತ್ತಿಲ್ಲ. ನನ್ನನ್ನ ಬೇಕು ಅಂತ ಸಾಯ್ಸಿದ್ದಾರೆ. ನನ್ನ ಸಾವಿಗೆ ಕಾರಣ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ ಎಂದಿದ್ದಾಳೆ.
(6 / 7)
ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಎಂದು ಅಶೋಕ್ ರಾಮನಿಗೆ ಹೇಳುತ್ತಾನೆ. ಆದರೆ, ಆ ಬಗ್ಗೆ ಮಾತನಾಡುವ ಮನಸ್ಸಿಲ್ಲದೆ ಹೊರಡುತ್ತಾನೆ ರಾಮ್. ಬಳಿಕ ಸಿಹಿ ಸಾವಿನ ಬಗ್ಗೆ ಎಂದಾಗ ನಿಲ್ಲುತ್ತಾನೆ. ಅಶೋಕನ ಕೈಯಲ್ಲಿನ ಪತ್ರ ಓದುತ್ತಾನೆ.
ಇತರ ಗ್ಯಾಲರಿಗಳು