Annayya Serial: ವಕೀಲಿಕೆ ವೃತ್ತಿ ಬಿಟ್ಟು ನಟನೆಗಿಳಿದ ಅಣ್ಣಯ್ಯ ಸೀರಿಯಲ್‌ ಶಿವಣ್ಣ; ನಟ ವಿಕಾಶ್‌ ಉತ್ತಯ್ಯ ಎಲ್ಲಿಯವ್ರು, ಏನ್‌ ಕಥೆ?-kannada television news zee kannada annayya serial shivanna aka vikash uthaiah biography vikash uthaiah education mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ವಕೀಲಿಕೆ ವೃತ್ತಿ ಬಿಟ್ಟು ನಟನೆಗಿಳಿದ ಅಣ್ಣಯ್ಯ ಸೀರಿಯಲ್‌ ಶಿವಣ್ಣ; ನಟ ವಿಕಾಶ್‌ ಉತ್ತಯ್ಯ ಎಲ್ಲಿಯವ್ರು, ಏನ್‌ ಕಥೆ?

Annayya Serial: ವಕೀಲಿಕೆ ವೃತ್ತಿ ಬಿಟ್ಟು ನಟನೆಗಿಳಿದ ಅಣ್ಣಯ್ಯ ಸೀರಿಯಲ್‌ ಶಿವಣ್ಣ; ನಟ ವಿಕಾಶ್‌ ಉತ್ತಯ್ಯ ಎಲ್ಲಿಯವ್ರು, ಏನ್‌ ಕಥೆ?

  • ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ ನೋಡುಗರ ಗಮನ ಸೆಳೆಯುತ್ತಿದೆ. ಬಹುತಾರಾಗಣದ ಈ ಧಾರಾವಾಹಿಯಲ್ಲಿ ನಾಲ್ವರು ತಂಗಿಯರ ನೆಚ್ಚಿನ ಅಣ್ಣನಾಗಿ ಶಿವಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಕಾಶ್‌ ಉತ್ತಯ್ಯ.  ಇದಕ್ಕೂ ಮುನ್ನ ಕಿರುಚಿತ್ರ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ ವಿಕಾಶ್‌. ಅಷ್ಟೇ ಅಲ್ಲ ನಟನೆಗೋಸ್ಕರ ದೊಡ್ಡ ಕೆಲಸವನ್ನೂ ಬಿಟ್ಟು ಬಂದಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿರುವ ಅಣ್ಣಯ್ಯ ಧಾರಾವಾಹಿಯನ್ನ ನಟ ಪ್ರಮೋದ್‌ ಶೆಟ್ಟಿ- ಸುಪ್ರಿತಾ ಶೆಟ್ಟಿ ದಂಪತಿ ನಿರ್ಮಾಣ ಮಾಡುತ್ತಿದೆ. ಇದೇ ಸೀರಿಯಲ್‌ಗೆ ನಾಯಕನಾಗಿ ವಿಕಾಶ್‌ ಉತ್ತಯ್ಯ ನಟಿಸುತ್ತಿದ್ದಾರೆ. 
icon

(1 / 7)

ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿರುವ ಅಣ್ಣಯ್ಯ ಧಾರಾವಾಹಿಯನ್ನ ನಟ ಪ್ರಮೋದ್‌ ಶೆಟ್ಟಿ- ಸುಪ್ರಿತಾ ಶೆಟ್ಟಿ ದಂಪತಿ ನಿರ್ಮಾಣ ಮಾಡುತ್ತಿದೆ. ಇದೇ ಸೀರಿಯಲ್‌ಗೆ ನಾಯಕನಾಗಿ ವಿಕಾಶ್‌ ಉತ್ತಯ್ಯ ನಟಿಸುತ್ತಿದ್ದಾರೆ. (image\ vikash uthaiah instagram)

ಮೂಲತಃ ಕೊಡಗಿನವರಾದ ವಿಕಾಶ್‌ ಉತ್ತಯ್ಯ, ಈ ಹಿಂದೆ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾ, ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ವಿಕಾಶ್‌ ಅವರಿಗಿದೆ. 
icon

(2 / 7)

ಮೂಲತಃ ಕೊಡಗಿನವರಾದ ವಿಕಾಶ್‌ ಉತ್ತಯ್ಯ, ಈ ಹಿಂದೆ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾ, ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ವಿಕಾಶ್‌ ಅವರಿಗಿದೆ. 

ನಟನೆ ಜತೆಗೆ ವೃತ್ತಿಯಲ್ಲಿ ವಕೀಲರಾಗಿರುವ ವಿಕಾಶ್‌, ಬೆಂಗಳೂರಿನ ಹೈಕೋರ್ಟ್‌ನಲ್ಲಿ ಒಂದಷ್ಟು ಕೆಲಸ ಮಾಡಿದ್ದಾರೆ. ಆದರೆ, ಬಣ್ಣದ ಲೋಕದ ಮೇಲಿನ ವ್ಯಾಮೋಹ ಮತ್ತೆ ಅಲ್ಲಿಗೆ ಕರೆತಂದಿದೆ. 
icon

(3 / 7)

ನಟನೆ ಜತೆಗೆ ವೃತ್ತಿಯಲ್ಲಿ ವಕೀಲರಾಗಿರುವ ವಿಕಾಶ್‌, ಬೆಂಗಳೂರಿನ ಹೈಕೋರ್ಟ್‌ನಲ್ಲಿ ಒಂದಷ್ಟು ಕೆಲಸ ಮಾಡಿದ್ದಾರೆ. ಆದರೆ, ಬಣ್ಣದ ಲೋಕದ ಮೇಲಿನ ವ್ಯಾಮೋಹ ಮತ್ತೆ ಅಲ್ಲಿಗೆ ಕರೆತಂದಿದೆ. 

ಬಣ್ಣದ ಲೋಕದ ವೃತ್ತಿಜೀವನದ ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸಿದ ವಿಕಾಶ್‌, ಮನೋಜ್‌ ಪಿ ನಡುಲಮನೆ ನಿರ್ದೇಶನದ ಮೇರಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಜತೆಗೆ ಆನ ಚಿತ್ರದಲ್ಲಿಯೂ ನಟಿಸಿದ್ದರು. 
icon

(4 / 7)

ಬಣ್ಣದ ಲೋಕದ ವೃತ್ತಿಜೀವನದ ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸಿದ ವಿಕಾಶ್‌, ಮನೋಜ್‌ ಪಿ ನಡುಲಮನೆ ನಿರ್ದೇಶನದ ಮೇರಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಜತೆಗೆ ಆನ ಚಿತ್ರದಲ್ಲಿಯೂ ನಟಿಸಿದ್ದರು. 

ಬರೀ ಸಿನಿಮಾ ಮಾತ್ರವಲ್ಲದೆ ಅದರ ಜತೆಗೆ ಈ ಹಿಂದೆ ಕನಸಿನ ಮಳೆಯಾದಳು ಮತ್ತು ದ್ವಂದ್ವ ದ್ವಯಂ ಎಂಬ ಕಿರುಚಿತ್ರದಲ್ಲಿಯೂ ವಿಕಾಶ್‌ ಉತ್ತಯ್ಯ ನಟಿಸಿದ್ದಾರೆ. 
icon

(5 / 7)

ಬರೀ ಸಿನಿಮಾ ಮಾತ್ರವಲ್ಲದೆ ಅದರ ಜತೆಗೆ ಈ ಹಿಂದೆ ಕನಸಿನ ಮಳೆಯಾದಳು ಮತ್ತು ದ್ವಂದ್ವ ದ್ವಯಂ ಎಂಬ ಕಿರುಚಿತ್ರದಲ್ಲಿಯೂ ವಿಕಾಶ್‌ ಉತ್ತಯ್ಯ ನಟಿಸಿದ್ದಾರೆ. 

ಇದೀಗ ಅಣ್ಣಯ್ಯ ಸೀರಿಯಲ್‌ ಮೂಲಕ ಕಿರುತೆರೆಗೂ ಕಾಲಿರಿಸಿದ್ದಾರೆ. ಮುಗ್ಧ ಶಿವಣ್ಣ ತನ್ನ ತಂಗಿಯರ ಪಾಲಿಗೆ ಹೇಗೆ ರಕ್ಷಾ ಕವಚವಾಗಿ ನಿಂತಿದ್ದಾನೆ ಎಂಬುದೇ ಈ ಸೀರಿಯಲ್‌ ಕಥೆ.
icon

(6 / 7)

ಇದೀಗ ಅಣ್ಣಯ್ಯ ಸೀರಿಯಲ್‌ ಮೂಲಕ ಕಿರುತೆರೆಗೂ ಕಾಲಿರಿಸಿದ್ದಾರೆ. ಮುಗ್ಧ ಶಿವಣ್ಣ ತನ್ನ ತಂಗಿಯರ ಪಾಲಿಗೆ ಹೇಗೆ ರಕ್ಷಾ ಕವಚವಾಗಿ ನಿಂತಿದ್ದಾನೆ ಎಂಬುದೇ ಈ ಸೀರಿಯಲ್‌ ಕಥೆ.

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7;30ಕ್ಕೆ ಅಣ್ಣಯ್ಯ ಪ್ರಸಾರವಾಗುತ್ತಿದೆ.
icon

(7 / 7)

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7;30ಕ್ಕೆ ಅಣ್ಣಯ್ಯ ಪ್ರಸಾರವಾಗುತ್ತಿದೆ.

ಇತರ ಗ್ಯಾಲರಿಗಳು