Seetha Rama Serial: ಇಂಜೆಕ್ಷನ್‌ ಅಂದ್ರೆ ಭಯ, ಸ್ವೀಟ್‌ ಅಂದ್ರೆ ಪಂಚಪ್ರಾಣ; ಕ್ಷಣಾರ್ಧದಲ್ಲಿ ನಕಲಿ ಸಿಹಿಯ ಸತ್ಯ ಅರಿತ ಭಾರ್ಗವಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಇಂಜೆಕ್ಷನ್‌ ಅಂದ್ರೆ ಭಯ, ಸ್ವೀಟ್‌ ಅಂದ್ರೆ ಪಂಚಪ್ರಾಣ; ಕ್ಷಣಾರ್ಧದಲ್ಲಿ ನಕಲಿ ಸಿಹಿಯ ಸತ್ಯ ಅರಿತ ಭಾರ್ಗವಿ

Seetha Rama Serial: ಇಂಜೆಕ್ಷನ್‌ ಅಂದ್ರೆ ಭಯ, ಸ್ವೀಟ್‌ ಅಂದ್ರೆ ಪಂಚಪ್ರಾಣ; ಕ್ಷಣಾರ್ಧದಲ್ಲಿ ನಕಲಿ ಸಿಹಿಯ ಸತ್ಯ ಅರಿತ ಭಾರ್ಗವಿ

  • Seetha Rama Serial Feb 14th Episode: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಆಗಮನದಿಂದ ಸೀತಾ ಮತ್ತು ರಾಮ ಸಂಭ್ರಮದಲ್ಲಿದ್ದರೆ, ಭಾರ್ಗವಿ ಮಾತ್ರ ಒಳಗೊಳಗೆ ಕುದಿಯುತ್ತಿದ್ದಾಳೆ. ಮನೆಗೆ ಬಂದ ಈ ಸಿಹಿ ಯಾರು ಎಂಬುದನ್ನು ಪತ್ತೆ ಹಚ್ಚಲು ಪಣತೊಟ್ಟಿರುವ ಭಾರ್ಗವಿ, ಇವಳು ಸಿಹಿಯಲ್ಲ ಎಂಬುದನ್ನು ಒಂದೇ ಚಾನ್ಸ್‌ನಲ್ಲಿಯೇ ಅರಿತಿದ್ದಾಳೆ.

ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಹೊಸ ಟ್ವಿಸ್ಟ್‌ ಎದುರಾಗಿದೆ. ಸಿಹಿ ರೂಪದಲ್ಲಿ ದೇಸಾಯಿ ಮನೆ ಪ್ರವೇಶಿಸಿದ್ದಾಳೆ ಸುಬ್ಬಿ. ಇತ್ತ ಸುಬ್ಬಿಯ ಆಗಮನವಾಗುತ್ತಿದ್ದಂತೆ, ಶತಾಯ ಗತಾಯ ಮನೆಗೆ ಬಂದ ಸಿಹಿಯಂತಿರುವ ಹುಡುಗಿ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದಾಳೆ ಭಾರ್ಗವಿ, ಸಿಂಪಲ್‌ ಟ್ರಿಕ್‌ ಬಳಸಿ ಸತ್ಯ ತಿಳಿದುಕೊಂಡಿದ್ದಾಳೆ ಭಾರ್ಗವಿ. 
icon

(1 / 10)

ಸಿಹಿ ಡಯಾಬಿಟಿಕ್‌ ಪೇಷಂಟ್‌ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಿಪ್ಪ ಶುಗರ್‌ ಇರೋ ಸಿಹಿ, ಯಾವತ್ತೂ ಸ್ವೀಟ್‌ ತಿನ್ನಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡ ಭಾರ್ಗವಿ, ಸಿಹಿ ಬಳಿ ಆಗಮಿಸಿದ್ದಾಳೆ. 
icon

(2 / 10)

ನಿನಗೆ ಕೇಕ್‌ ಅಂದ್ರೆ ಇಷ್ಟ ತಾನೇ.. ಹಾಗಾದ್ರೆ ಕೇಕ್‌ ತರ್ತಿನಿ ತಿನ್ನು ಸಿಹಿ ಎಂದು ಪುಸಲಾಯಿಸಿದ್ದಾಳೆ ಭಾರ್ಗವಿ. ಕೇಕ್‌ ಎನ್ನುತ್ತಿದ್ದಂತೆ ಬಾಯಿ ತೆರೆದಿದ್ದಾಳೆ ಸುಬ್ಬಿ. 
icon

(3 / 10)

ಒಂದು ದೊಡ್ಡ ಪೀಸ್‌ ಕೇಕ್‌ ತಂದು ಸಿಹಿಯ ಮುಂದಿಟ್ಟಿದ್ದಾಳೆ ಭಾರ್ಗವಿ. ಕೇಕ್‌ ನೋಡುತ್ತಿದ್ದಂತೆ, ಸಿಹಿ ರೂಪದಲ್ಲಿದ್ದ ಸುಬ್ಬಿಯ ಬಾಯಲ್ಲಿ ನೀರು ಬಂದಿದೆ. 
icon

(4 / 10)

ಅಲ್ಲೇ ಇದ್ದ ಸಿಹಿ, ಅಯ್ಯೋ ಕೇಕ್‌ ತಿನಬೇಡ ಸುಬ್ಬಿ ಎಂದಿದ್ದಾಳೆ. ಇಲ್ಲ ನಾನು ಕೇಕ್‌ ತಿಂದೇ ತೀರುವೆ ಎಂದಿದ್ದಾಳೆ. 
icon

(5 / 10)

ಸುಬ್ಬಿ ಕೇಕ್‌ ತಿನ್ನುತ್ತಿದ್ದಂತೆ, ತನ್ನ ಪ್ಲಾನ್‌ ವರ್ಕೌಟ್‌ ಆದ ಖುಷಿಯಲ್ಲಿ ಗೆದ್ದು ಬೀಗಿದ್ದಾಳೆ ಭಾರ್ಗವಿ. ಕೇಕ್‌ ಸಿಕ್ಕಿದ್ದೇ ತಡ, ಗಬಗಬನೇ ತಿಂದಿದ್ದಾಳೆ ಸುಬ್ಬಿ. 
icon

(6 / 10)

ಈಗ ಹೇಳು ನೀನು ಇಲ್ಲಿಗೆ ಹೇಗೆ ಬಂದೆ ಎಂದು ಸಿಹಿ ರೂಪದ ಸುಬ್ಬಿಗೆ ಭಾರ್ಗವಿ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಉತ್ತರಿಸಿದ ಸುಬ್ಬಿ, ಶ್ರೀರಾಮ್‌ ದೇಸಾಯಿ ಮತ್ತೆ ಅಶೋಕ್‌ ಸರ್‌ ಬಗ್ಗೆ ಮಾತನಾಡುತ್ತಿದ್ದಂತೆ, ಸೀತಾಳ ಆಗಮನವಾಗಿದೆ. 
icon

(7 / 10)

ಕೇಕ್‌ ಯಾಕೇ ತಿಂತಿದಿಯಾ? ಬಾ ಇಂಜೆಕ್ಷನ್‌ ಕೊಡ್ತಿನಿ ಎಂದಿದ್ದಾಳೆ ಸೀತಮ್ಮ. ಅಷ್ಟೊತ್ತಿಗೆ, ಅಯ್ಯೋ ಇಂಜೆಕ್ಷನ್‌ ಬೇಡ ಎಂದು ಮನೆ ತುಂಬೆಲ್ಲ ಓಡಾಡಿದ್ದಾಳೆ. 
icon

(8 / 10)

ಸಿಹಿಯ ಈ ವರ್ತನೆ ಭಾರ್ಗವಿಗೂ ಅನುಮಾನ ತರಿಸಿದೆ. ಜತೆಗೆ ರಾಮ್‌ ಮತ್ತು ಅಶೋಕ ಇಬ್ಬರಲ್ಲಿದ್ದ ಇದ್ದ ಗುಟ್ಟು ಹೊರ ಬರುವ ಸೂಚನೆ ಸಿಕ್ಕಿದೆ. 
icon

(9 / 10)

ಇತ್ತ ಭಾರ್ಗವಿ ಒಂದೇ ಒಂದು ಕೇಕ್‌ ಪೀಸ್‌ನಿಂದ ಈ ಹುಡುಗಿ ಸಿಹಿ ಅಲ್ಲ ಎಂಬುದನ್ನು ಅರಿತಿದ್ದಾಳೆ. ಅಲ್ಲಿಗೆ ಭಾರ್ಗವಿಯ ಮುಂದಿನ ಪ್ಲಾನ್‌ ಏನಿರಬಹುದು? ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
icon

(10 / 10)

Manjunath Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು