ಸೀತಾ ರಾಮ ಧಾರಾವಾಹಿಯ ಸವಿಯಾದ ವಿದಾಯ; 5 ದಿನ, 5 ಸಂಚಿಕೆ, ವೆಬ್‌ಸಿರೀಸ್ ಥರ ದಿನಕ್ಕೊಂದು ಕಥೆ
ಸೀತಾ ರಾಮ ಧಾರಾವಾಹಿ ತನ್ನ ಕೊನೇ ಏಪಿಸೋಡ್‌ಗಳನ್ನು ಮುಗಿಸಿಕೊಂಡಿದೆ. ಇನ್ನೇನು ನಾಳೆಯಿಂದ ಐದು ದಿನಗಳ ಕಾಲ ಅಂತಿಮ ಸಂಚಿಕೆಗಳು ಪ್ರಸಾರವಾಗಲಿವೆ. ದಿನಕ್ಕೊಂದು ಟ್ವಿಸ್ಟ್ ಮೂಲಕ ವೆಬ್‌ಸಿರೀಸ್‌ನಂತೆ ಒಂದೊಂದು ಏಪಿಸೋಡ್‌ಗಳು ಮೂಡಿಬರಲಿವೆ. ಹಾಗಾದರೆ ಸೋಮವಾರದಿಂದ ಶುಕ್ರವಾರದ ವರೆಗೆ ಏನೆಲ್ಲ ಇರಲಿದೆ. ಇಲ್ಲಿದೆ ವಿವರ.
(1 / 7)
ಸೀತಾ ರಾಮ ಧಾರಾವಾಹಿ ಇದೀಗ ಸವಿಯಾದ ವಿದಾಯ ಹೇಳಲು ಹೊರಟಿದೆ. ಈ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದ ಈ ಸೀರಿಯಲ್ ಇನ್ನೊಂದು ವಾರ ಮಾತ್ರ ಪ್ರಸಾರವಾಗಲಿದೆ. ಅದರಂತೆ ನಾಳೆಯಿಂದ ಅಂತಿಮ ಸಂಚಿಕೆಗಳು ಪ್ರಸಾರವಾಗಲಿವೆ.
(2 / 7)
ಈ ಸೀರಿಯಲ್ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಬಚ್ಚಿಟ್ಟ ಸತ್ಯಗಳು ಒಂದೊಂದಾಗಿ ಹೊರಬೀಳಲಿವೆ. ಭಾರ್ಗವಿಯ ಕಳ್ಳಾಟಕ್ಕೂ ಬ್ರೇಕ್ ಬೀಳಲಿದೆ. ಹಾಗಾದರೆ ಮುಂದಿನ ಐದು ದಿನಗಳ ಕಾಲ ಯಾವ ದಿನ ಯಾವ ಸಂಚಿಕೆ ಇರಲಿದೆ ಎಂಬುದನ್ನು ಜೀ ಕನ್ನಡ ಹೊಸ ಪ್ರೋಮೋ ಮೂಲಕ ಬಿಡುಗಡೆ ಮಾಡಿದೆ.
(3 / 7)
ಸೋಮವಾರ ಅವಳಿ ಗುಟ್ಟು ಬಯಲು: ಸೀತಾಗೆ ಅವಳಿ ಮಕ್ಕಳು ಇದ್ದವು ಎಂಬ ಸತ್ಯ ಬಯಲಾಗಲಿದೆ. ಈ ಮೂಲಕ ಸಿಹಿ ಮಾತ್ರ ತನ್ನ ಮಗಳಲ್ಲ ಸುಬ್ಬಿಯೂ ತನ್ನ ಮಗಳೆಂಬ ಸತ್ಯ ಸೀತಾಗೆ ತಿಳಿಯಲಿದೆ.
(4 / 7)
ಮಂಗಳವಾರ ಇಂದ್ರ- ವಾಣಿ ಸಾವಿನ ರಹಸ್ಯ: ಈ ವರೆಗೂ ರಾಮ್‌ನ ತಂದೆ ಇಂದ್ರಜಿತ್ ಮತ್ತು ವಾಣಿ ಸಾವಿನ ಹಿಂದಿನ ಅಸಲಿಯತ್ತೇನು ಎಂಬುದು ಬಯಲಾಗಿರಲಿಲ್ಲ. ಇದೀಗ ಆ ಸತ್ಯವೂ ಹೊರಬೀಳಲಿದೆ.
(5 / 7)
ಬುಧವಾರದ ಸಂಚಿಕೆಯಲ್ಲಿ ಇಂದ್ರ- ವಾಣಿ ಸಾವಿನ ಹಿಂದೆ ಭಾರ್ಗವಿ ಕೈವಾಡ ಇದೆ ಎಂಬ ಸತ್ಯ ಮನೆ ಮಂದಿಗೂ ಗೊತ್ತಾಗಲಿದೆ.
(6 / 7)
ಗುರುವಾರದ ಸಂಚಿಕೆಯಲ್ಲಿ ಕರಾಳ ಸತ್ಯಕ್ಕೆ ಕನ್ನಡಿ: ಈ ನಡುವೆ ಕರಾಳ ಸತ್ಯಕ್ಕೆ ಕನ್ನಡಿ ಎಂಬಂತೆ, ಸೀತಾಳನ್ನು ಕಟ್ಟಡವೊಂದರಲ್ಲಿ ಕೂಡಿ ಹಾಕಿದ ಭಾರ್ಗವಿ, ಸೀತಾಳ ಹತ್ಯೆಗೆ ಸಂಚು ರೂಪಿಸಿದ್ದಾಳೆ.
ಇತರ ಗ್ಯಾಲರಿಗಳು