ಸೀತಾ ರಾಮ ಸೀರಿಯಲ್ ಮೇಘಶ್ಯಾಮ್ ನಿಜವಾದ ಹೆಸರೇನು, ಇವರ ಪತ್ನಿ ಯಾರು, ನಟಿಸಿದ ಸಿನಿಮಾ, ಸೀರಿಯಲ್‌ಗಳ್ಯಾವವು?
- Seetha Rama Serial Meghashyam aka Arjuna: ಸೀತಾ ರಾಮ ಸೀರಿಯಲ್‌ನಲ್ಲಿ ಮೇಘಶ್ಯಾಮ್ ಪಾತ್ರ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈಗ ಇದೇ ಶ್ಯಾಮ್‌ನ ರಿಯಲ್ ಹೆಸರೇನು? ಇವರ ಪತ್ನಿ ಹೇಗಿದ್ದಾರೆ. ಈ ಹಿಂದೆ ಯಾವೆಲ್ಲ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಿದ್ದಾರೆ? ಇದೆಲ್ಲದರ ಮಾಹಿತಿ ಇಲ್ಲಿದೆ.
- Seetha Rama Serial Meghashyam aka Arjuna: ಸೀತಾ ರಾಮ ಸೀರಿಯಲ್‌ನಲ್ಲಿ ಮೇಘಶ್ಯಾಮ್ ಪಾತ್ರ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈಗ ಇದೇ ಶ್ಯಾಮ್‌ನ ರಿಯಲ್ ಹೆಸರೇನು? ಇವರ ಪತ್ನಿ ಹೇಗಿದ್ದಾರೆ. ಈ ಹಿಂದೆ ಯಾವೆಲ್ಲ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಿದ್ದಾರೆ? ಇದೆಲ್ಲದರ ಮಾಹಿತಿ ಇಲ್ಲಿದೆ.
(1 / 7)
ಜೀ ಕನ್ನಡದಲ್ಲಿ ಸದ್ಯ ನೋಡುಗರಿಂದ ಮೆಚ್ಚುಗೆ ಪಡೆದ ಸೀರಿಯಲ್‌ಗಳಲ್ಲಿ ಸೀತಾ ರಾಮ ಸೀರಿಯಲ್ ಸಹ ಒಂದು. ಈ ಸೀರಿಯಲ್‌ನಲ್ಲಿ ಇದೀಗ ಡಾ. ಮೇಘಶ್ಯಾಮ್ ಪಾತ್ರವೂ ನೋಡುಗರ ಗಮನ ಸೆಳೆದಿದೆ.
(Instagram\ Arjuna BR)(2 / 7)
ಬಾಡಿಗೆ ತಾಯ್ತನದ ಮೂಲಕ ಸೀತಾ ಬಳಿ ಶ್ಯಾಮ್ ಮತ್ತು ಶಾಲಿನಿ ಮಗು ಮಾಡಿಕೊಂಡಿದ್ದರು. ಆದರೆ, ಪತ್ನಿ ಶಾಲಿನಿಯ ಕುತಂತ್ರದಿಂದ ಆ ಮಗು ಶ್ಯಾಮ್ ಕೈ ಸೇರಿರಲಿಲ್ಲ.
(3 / 7)
ಈಗ ಇದೇ ಬಾಡಿಗೆ ತಾಯಿ ಮತ್ತು ಮಗುವಿನ ಹುಡುಕಾಟಕ್ಕೆ ಇಳಿದಿದ್ದಾನೆ ಶ್ಯಾಮ್. ಸ್ನೇಹಿತ ರಾಮ್ ಸಹ ಶ್ಯಾಮ್ ಜತೆ ಮಗು ಹುಡುಕಾಟದಲ್ಲಿ ಸಹಾಯ ಮಾಡುತ್ತಿದ್ದಾನೆ.
(4 / 7)
ಈಗ ಇದೇ ಮೇಘಶ್ಯಾಮ್ ಪಾತ್ರಧಾರಿ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೊಣ. ಕನ್ನಡ ಕಿರುತೆರೆಯಲ್ಲಿ ಹತ್ತಾರು ಸೀರಿಯಲ್‌ಗಳಲ್ಲಿ ಈ ನಟ ಬಣ್ಣ ಹಚ್ಚಿದ್ದಾರೆ. ಇವರ ನಿಜವಾದ ಹೆಸರು ನಾಗಾರ್ಜುನ್. ಸ್ಕ್ರೀನ್ ನೇಮ್ ಆಗಿ ಅರ್ಜುನ್ ಎಂದು ಬದಲಿಸಿಕೊಂಡಿದ್ದಾರೆ.
(5 / 7)
ಕಿರುತೆರೆ ಮಾತ್ರವಲ್ಲದೆ, ಅಮರಾವತಿ ಸಿನಿಮಾದಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಆಗಿದ್ದ ಅರ್ಜುನ್, ಶುದ್ಧಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕೆಜಿಎಫ್ 2 ಚಿತ್ರದಲ್ಲಿ ಸಿಬಿಐ ಆಫೀಸರ್ ಆಗಿದ್ದರು. ಸದ್ಯ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
(6 / 7)
ಟಿ.ಎಸ್ ನಾಗಾಭರಣ ಅವರ ಮಗಳು ಜಾನಕಿ, ಮತ್ತೆ ಮಾಯಾಮೃಗದಲ್ಲಿ ನಟಿಸಿದ್ದಾರೆ. ಸುಬ್ಬಲಕ್ಷ್ಮೀ ಸಂಸಾರದಲ್ಲಿಯೂ ಬಣ್ಣ ಹಚ್ಚಿದ್ದರು.
ಇತರ ಗ್ಯಾಲರಿಗಳು