ಕನ್ನಡ ಸೀರಿಯಲ್‌ ಜಗತ್ತಿನಲ್ಲೊಂದು ಕಾಕತಾಳೀಯ ಘಟನೆ: 2 ಧಾರಾವಾಹಿ, ಒಬ್ಬರೇ ಅಪ್ಪ! ಇದು ಮಲ್ಲಿ ವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ಸೀರಿಯಲ್‌ ಜಗತ್ತಿನಲ್ಲೊಂದು ಕಾಕತಾಳೀಯ ಘಟನೆ: 2 ಧಾರಾವಾಹಿ, ಒಬ್ಬರೇ ಅಪ್ಪ! ಇದು ಮಲ್ಲಿ ವಿಷ್ಯ

ಕನ್ನಡ ಸೀರಿಯಲ್‌ ಜಗತ್ತಿನಲ್ಲೊಂದು ಕಾಕತಾಳೀಯ ಘಟನೆ: 2 ಧಾರಾವಾಹಿ, ಒಬ್ಬರೇ ಅಪ್ಪ! ಇದು ಮಲ್ಲಿ ವಿಷ್ಯ

  • Kannada Television Serials: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಮತ್ತು ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ಗಳಿಗೆ ಒಂದು ನಂಟಿದೆ. ಅದು ಮಲ್ಲಿ. ಅಮೃತಧಾರೆ ಧಾರಾವಾಹಿಯಲ್ಲಿ ಅಕ್ಕೋರೆ ಅಕ್ಕೋರೆ ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಮಲ್ಲಿ ಈಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನ ನಾಯಕಿ.

Kannada Television Serials: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಮತ್ತು ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ಗಳಿಗೆ ಒಂದು ನಂಟಿದೆ. ಅದು ಮಲ್ಲಿ. ಅಮೃತಧಾರೆ ಧಾರಾವಾಹಿಯಲ್ಲಿ ಅಕ್ಕೋರೆ ಅಕ್ಕೋರೆ ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಮಲ್ಲಿ ಈಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನ ನಾಯಕಿ.  ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಟ್ವಿಸ್ಟ್‌ ಘಟಿಸಿದೆ. ರಾಜೇಂದ್ರ ಭೂಪತಿಯ ಮಗಳೇ ಮಲ್ಲಿ  ಎಂಬ ವಿಷಯ ಗೌತಮ್‌ಗೆ ಗೊತ್ತಾಗಿದೆ. ಜೈದೇವ್‌ ಭೂಪತಿಯ ಅಳಿಯನಾಗುತ್ತಿದ್ದಾನೆ. ಏಕೆಂದರೆ, ಭೂಪತಿಯ ಮಗಳೇ ಈ ಮಲ್ಲಿ.
icon

(1 / 10)

ಮಲ್ಲಿ ಎಂದಾಗ ನೆನಪಾಗುವುದು ರಾಧಾ ಭಗವತಿ. ಅಕ್ಕೋರೆ ಅಕ್ಕೋರೆ ಎಂದು ಕರೆಯುತ್ತಿದ್ದ ಈ ಮಲ್ಲಿಯ ಪಾತ್ರಕ್ಕೆ ಜೀವ ತುಂಬಿದಾಕೆ ಈ ಭಗವತಿ. ಆದರೆ, ಇತ್ತೀಚೆಗೆ ಕಲರ್ಸ್‌ ಕನ್ನಡದಲ್ಲಿ ಹೊಸ ಸೀರಿಯಲ್‌ ಆರಂಭವಾಗಿತ್ತು. ಆ ಸೀರಿಯಲ್‌ ಹೆಸರು ಭಾರ್ಗವಿ ಎಲ್‌ಎಲ್‌ಬಿ. 
icon

(2 / 10)

(Instagram)

ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನ ನಾಯಕಿಯಾಗಿ ಮಲ್ಲಿ ಅಂದ್ರೆ ರಾಧಾ ಭಗವತಿ ಆಯ್ಕೆಯಾಗಿದ್ದರು. ಈಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಭಾರ್ಗವಿಯಾಗಿ ಕಿರುತೆರೆ ಪ್ರೇಕ್ಷಕರ ಪ್ರೀತಿಗಳಿಸುತ್ತಿದ್ದಾರೆ ರಾಧಾ ಭಗವತಿ. ಅಲ್ಲಿ ಆಕೆಯ ತಂದೆಯ ಪಾತ್ರದಲ್ಲಿ ಇರುವುದು ಹನುಮಂತೇ ಗೌಡ. 
icon

(3 / 10)

ತನ್ನ ತಂದೆಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಎಲ್‌ಎಲ್‌ಬಿ ಓದಿ ಕೋರ್ಟ್‌ನಲ್ಲಿ ವಾದ ಮಂಡಿಸುವ ಪಾತ್ರ ಭಾರ್ಗವಿಯದ್ದು. ತಂದೆಯ ಪಾತ್ರದಲ್ಲಿರುವ ಇದೇ ಹನುಮಂತೇ ಗೌಡ ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿಯಾಗಿದ್ದಾರೆ. 
icon

(4 / 10)

ರಾಜೇಂದ್ರ ಭೂಪತಿಗೆ ಮಲ್ಲಿ ಮಗಳೆಂಬ ಸಂಗತಿ ಗೊತ್ತಿಲ್ಲ. ಮಲ್ಲಿಗೆ ಮಾತ್ರವಲ್ಲ, ಇಂದು ಪ್ರೊಮೊ ಬಿಡುಗಡೆಯಾಗುವ ತನಕ ಯಾರಿಗೂ ಗೊತ್ತಿರಲಿಲ್ಲ. ಆದರೆ, ಭೂಪತಿ ಕಳೆದುಕೊಂಡಿರುವ ಮಗಳು "ಮಲ್ಲಿ" ಎಂಬ ಸಂಗತಿ ಇಂದಿನ ಸಂಚಿಕೆಯಲ್ಲಿ ಗೌತಮ್‌ಗೆ ಗೊತ್ತಾಗುತ್ತದೆ. 
icon

(5 / 10)

ಹೀಗಾಗಿ ಎರಡು ಸೀರಿಯಲ್‌ನಲ್ಲಿ "ಮಲ್ಲಿ"ಗೆ ಅಪ್ಪ ಒಬ್ಬರೇ ಎನ್ನಬಹುದು. ಆದರೆ, ಹೀಗೆ ಹೇಳಲು ತಾಂತ್ರಿಕವಾಗಿ ಒಂದು ಅಡ್ಡಿ ಇದೆ. ರಾಧಾ ಭಗವತಿ ಈಗ ಅಮೃತಧಾರೆ ಧಾರಾವಾಹಿಯಲ್ಲಿ ಇಲ್ಲ. ರಾಧಾ ಭಗವತಿ ಬದಲು ಇನ್ಮುಂದೆ  ಶಿವಮೊಗ್ಗದ ಅನ್ವಿತಾ ಸಾಗರ್‌ ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
icon

(6 / 10)

ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ನೋಡುತ್ತಿರುವಾಗ ಭಾರ್ಗವಿ ಮುಖವನ್ನು ನೋಡುತ್ತ ನಿಮಗೆ ಮಲ್ಲಿ ನೆನಪಾದರೆ ಮತ್ತು ಅಮೃತಧಾರೆ ಧಾರಾವಾಹಿ ಮಲ್ಲಿ ನೋಡುತ್ತಿರುವಾಗ ರಾಧಾ ನೆನಪಾದರೆ ಈ ಪಾತ್ರಗಳ ತಂದೆಯ ಕಥೆ "ಬೇರೆಬೇರೆಯಾಗಿದ್ದರೂ" ತಂದೆಯ ಪಾತ್ರದಾರಿ "ಒಬ್ಬರೇ" ಆಗಿರುವುದರಿಂದ ಪ್ರೇಕ್ಷಕರಿಗೆ ಏನೋ ಕನೆಕ್ಟ್‌ ಆಗಬಹುದು.
icon

(7 / 10)

ಬಣ್ಣ ಬಣ್ಣದ ಬದುಕು, ಸ್ನೇಹಚಕ್ರ, ಮಾಯಾಕನ್ನಡಿ, ಜೀವನ ಯಜ್ಞ ವಿರಾಟ ಪರ್ವ ಹಾಗೂ ತುಳು ಸಿನಿಮಾಗಳಾದ ದಂಡ್, ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್, ತುಡರ್‌ ಸೇರಿ ಹಲವು ಸಿನಿಮಾಗಳಲ್ಲಿ ಅನ್ವಿತಾ ಸಾಗರ್‌ ನಟಿಸಿದ್ದಾರೆ. ಇನ್ಮುಂದೆ ಮಲ್ಲಿ ಪಾತ್ರದಲ್ಲಿ ಅಮೃತಧಾರೆಯಲ್ಲಿ ಮಿಂಚಲಿದ್ದಾರೆ. ಇಲ್ಲಿಯವರೆಗೆ ಅಜ್ಜನ ಪ್ರೀತಿಯ ಮೊಮ್ಮಗಳು ಆಗಿದ್ದ ಮಲ್ಲಿ ಭೂಪತಿಯ ಮಗಳಾಗಲಿದ್ದಾಳೆ. 
icon

(8 / 10)

ರಾಜೇಂದ್ರ ಭೂಪತಿ ತನ್ನ ಮಗಳು ಸತ್ತು ಹೋಗಿದ್ದಾಳೆ ಎಂದುಕೊಂಡಿದ್ದಾನೆ. ಅದೇ ಕೋಪದಲ್ಲಿ ಗೌತಮ್‌ ದಿವಾನ್‌ ಮೇಲೆ ಹಗೆ ಸಾಧಿಸುತ್ತಿದ್ದಾನೆ. ಇದೀಗ ಮಲ್ಲಿಯನ್ನು ನೋಡಲು ಗೌತಮ್‌ ಬಂದಿದ್ದಾರೆ. ಅವರ ಕಣ್ಣಿಗೆ ಹಳೆಯ ಪೋಟೋಗಳು ಕಾಣಿಸಿವೆ.  ಮಲ್ಲಿಯೇ ತನ್ನ ಮಗಳು ಎಂದು ಗೊತ್ತಾದ ಸಂದರ್ಭದಲ್ಲಿ ಭೂಪತಿಯ ಕೋಪ ಬೆಣ್ಣೆಯಂತೆ ಕರಗಬಹುದು. ಗೌತಮ್‌ ದಿವಾನ್‌ ಮತ್ತು ಭೂಪತಿ ಮತ್ತೆ ಫ್ರೆಂಡ್ಸ್‌ ಆಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(10 / 10)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು