ಸಾವಿಗೂ ಮುನ್ನ ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದ್ದ ರಾಕೇಶ್ ಪೂಜಾರಿ, ಮರೆಯಾದ ಕಾಮಿಡಿ ಕಿಲಾಡಿ ಕೊನೆಯ ಪೋಸ್ಟ್ ಇದಾಗಿದೆ
ಜೀ ಕನ್ನಡದ ಕಾಮಿಡಿ ಕಿಲಾಡಿ ವಿಜೇತ ರಾಕೇಶ್ ಪೂಜಾರಿ ಲೋ ಬಿಪಿ ಕಾರಣದಿಂದ ನಿಧನರಾಗಿದ್ದಾರೆ. ತನ್ನ ವಿಭಿನ್ನ ಹಾವ ಭಾವ, ಮಾತಿನ ಮೂಲಕ ಕರುನಾಡನ್ನು ನಕ್ಕು ನಗಿಸಿದ್ದ ನಟ ಇಹಲೋಹ ತ್ಯಜಿಸಿದ್ದಾರೆ. ಸಾವಿಗೂ ಮುನ್ನ ರಾಕೇಶ್ ಹಾಕಿದ್ದ ಕೊನೆಯ ಪೋಸ್ಟ್ ಇದಾಗಿದೆ.
(1 / 10)
ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಷೋ ʼಕಾಮಿಡಿ ಕಿಲಾಡಿʼ ಮೂಲಕ ಕರುನಾಡಿಗೆ ಪರಿಚಿತರಾಗಿ ತಮ್ಮ ನಗೆ ಚಟಾಕಿ ಹಾಗೂ ವಿಭಿನ್ನ ಹಾವಭಾವದ ಮೂಲಕ ಜನರನ್ನು ನಕ್ಕು ನಗಿಸಿದ್ದ ರಾಕೇಶ್ ಪೂಜಾರಿ ಇನ್ನಿಲ್ಲ. ಕಾಮಿಡಿ ಕಿಲಾಡಿ ಸೀಸನ್ 3ರ ಪಟ್ಟ ಗಿಟ್ಟಿಸಿಕೊಂಡಿದ್ದ ಉಡುಪಿ ಮೂಲದ ರಾಕೇಶ್ ಪೂಜಾರಿ ಇಂದು (ಮೇ 12) ಬೆಳಗಿನ ಜಾವ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
(2 / 10)
ಲೋ ಬಿಪಿ ಹಾಗೂ ಪಲ್ಸ್ ರೇಟ್ ಕಡಿಮೆಯಾಗಿರುವುದು ಇವರ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಕಾಮಿಡಿ ಕಿಲಾಡಿ ನಂತರ ರಾಕೇಶ್ ಜೀ ಕನ್ನಡದಲ್ಲಿ ಪ್ರಸಾರವಾದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ವಿರೂಪಾಕ್ಷನಾಗಿ ನಟಿಸಿ, ಎಲ್ಲರ ಗಮನ ಸೆಳೆದಿದ್ದರು.
(3 / 10)
ಕಾಮಿಡಿ ಕಿಲಾಡಿ ಪಟ್ಟ ಮುಡಿಗೇರಿಸಿಕೊಂಡ ನಂತರ ಜೀ ಕನ್ನಡದಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರನ್ನು ನಕ್ಕು ನಲಿಸಿದ್ದರು ರಾಕೇಶ್. ಇವರು ವೇದಿಕೆ ಮೇಲೆ ಬಂದರೆ ಜನರ ಮುಖದಲ್ಲೇ ನಗುವಿನ ಅಲೆ ತುಂಬುತ್ತಿತ್ತು.
(4 / 10)
2020 ರಲ್ಲಿ ನಡೆದ ಕಾಮಿಡಿ ಕಿಲಾಡಿಗಳು ಸೀಸನ್ 3ರ ಪಟ್ಟ ಮುಡಿಗೇರಿಸಿಕೊಂಡಿದ್ದ ರಾಕೇಶ್ ಸಿನಿಮಾಗಳಲ್ಲೂ ನಟಿಸಿ ಮಿಂಚಿದ್ದರು.
(5 / 10)
ಕರಾವಳಿಯ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ʼಕಡ್ಲೆ ಬಜಿಲ್ʼ ಕಾರ್ಯಕ್ರಮದ ಮೂಲಕವೂ ರಾಕೇಶ್ ಪೂಜಾರಿ ಮನ ಗೆದಿದ್ದರು. ಆ ಮೂಲಕ ಕರಾವಳಿಯಲ್ಲಿ ಮನೆಮಾತಾದ ನಟ ನಂತರ ಜೀ ಕನ್ನಡದ ಮೂಲಕ ಕರುನಾಡಿಗೆ ಚಿರಪರಿಚಿತರಾಗಿದ್ದರು.
(6 / 10)
ಸಾವಿಗೂ ಮುನ್ನ ನಿನ್ನೆ (ಮೇ 11) ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಕೇಶ್ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿದ್ದರು.
(8 / 10)
ಭಾರತ-ಪಾಕ್ ಸಂಘರ್ಷದಲ್ಲಿ ಹುತಾತ್ಮರಾದ ಯೋಧರೊಬ್ಬರ ಫೋಟೊವನ್ನು ಸ್ಟೇಟಸ್ ಹಾಕಿಕೊಂಡಿರುವ ರಾಕೇಶ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಅವರೇ ಕಾಣದ ಲೋಕಕ್ಕೆ ಮರೆಯಾಗಿದ್ದಾರೆ.
(9 / 10)
ರಾಕೇಶ್ ಸಾವಿನ ಸುದ್ದಿಯನ್ನು ಅವರ ಸ್ನೇಹಿತ, ನಟ ಶಿವರಾಜ್ ಕೆ.ಆರ್. ಪೇಟೆ ಖಚಿತ ಪಡಿಸಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆ ಹೊತ್ತಿಗೆ ರಾಕೇಶ್ ನಿಧನರಾಗಿದ್ದಾಗಿ ಶಿವರಾಜ್ ಕೆಆರ್ ಪೇಟೆ ತಿಳಿಸಿದ್ದಾರೆ.
(10 / 10)
ರಾಕೇಶ್ ಸಾವಿನ ಸುದ್ದಿಯನ್ನು ಕೇಳಿ ಆಘಾತಗೊಂಡಿರುವ ಕಾಮಿಡಿ ಕಿಲಾಡಿ ಷೋ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟಿ ರಕ್ಷಿತಾ ಕಂಬನಿ ಮಿಡಿದಿದ್ದಾರೆ, ನನ್ನಿಷ್ಟದ ಕಾಮಿಡಿ ಕಿಲಾಡಿ ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಫೋಟೊ ಹಂಚಿಕೊಂಡು ಬರೆದುಕೊಂಡಿದ್ದಾರೆ. ರಾಕೇಶ್ ಬಗ್ಗೆ ಸುದೀರ್ಘ ಬರಹ ಬರೆದುಕೊಂಡು ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿರುವ ರಕ್ಷಿತಾ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇತರ ಗ್ಯಾಲರಿಗಳು