ಮನ ಮೆಚ್ಚಿದ ಹುಡುಗನ ಜೊತೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ಕಿರುತೆರೆ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೊಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನ ಮೆಚ್ಚಿದ ಹುಡುಗನ ಜೊತೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ಕಿರುತೆರೆ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೊಸ್

ಮನ ಮೆಚ್ಚಿದ ಹುಡುಗನ ಜೊತೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ಕಿರುತೆರೆ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೊಸ್

  • ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಒಂಟಿ ಬದುಕಿಗೆ ಬೈ ಹೇಳಿ ಜಂಟಿಯಾಗಿದ್ದಾರೆ. ಅನುಕೂಲ್ ಮಿಶ್ರಾ ಕೈ ಹಿಡಿಯಲಿರುವ ವೈಷ್ಣವಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಇವರ ನಿಶ್ಚಿತಾರ್ಥದ ಫೋಟೊಗಳು ಇಲ್ಲಿವೆ.

ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮನ ಮೆಚ್ಚಿದ ಹುಡುಗ ಅನುಕೂಲ್ ಮಿಶ್ರಾ ಜೊತೆ ಉಂಗುರ ಬದಲಿಸಿಕೊಳ್ಳುವ ಮೂಲಕ ಒಂಟಿ ಬದುಕಿಗೆ ಗುಡ್‌ ಬೈ ಹೇಳಿದ್ದಾರೆ. ವಾಯುಪಡೆಯಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಕೈ ಹಿಡಿಯಲಿದ್ದಾರೆ ಕನ್ನಡ ಕಿರುತೆರೆಯ ಸೀತಾ.
icon

(1 / 8)

ವೈಷ್ಣವಿ–ಅನುಕೂಲ್‌ ಜೋಡಿಯ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿತು. ಅನುಕೂಲ್ ಹಾಗೂ ವೈಷ್ಣವಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಪೋಷಕರ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿಯ ನಿಶ್ಚಿತಾರ್ಥದಲ್ಲಿ ನಟಿ ಅಮೂಲ್ಯ ಕುಟುಂಬ, ಅಗ್ನಿಸಾಕ್ಷಿ ಹಾಗೂ ಸೀತಾರಾಮ ಧಾರಾವಾಹಿಯ ನಟ–ನಟಿಯರು ಭಾಗವಹಿಸಿದ್ದರು.
icon

(2 / 8)

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ವೈಷ್ಣವಿ ಗೌಡ ಎಂಗೇಜ್‌ಮೆಂಟ್‌ನಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದ ಪ್ರಮುಖರು ಭಾಗವಹಿಸಿದ್ದರು. ಚಿತ್ಕಾಲಾ ಬಿರಾದಾರ್‌, ಇಶಿತಾ ವರ್ಷ, ಮುಖ್ಯಮಂತ್ರಿ ಚಂದ್ರು ಮೊದಲಾದವರು ವೈಷ್ಣವಿ ಎಂಗೇಜ್‌ಮೆಂಟ್‌ನಲ್ಲಿ ಭಾಗವಹಿಸಿದ್ದರು. ಇವರ ಎಂಗೇಟ್‌ಮೆಂಟ್‌ ಫೋಟೊಗಳನ್ನು ಚಿತ್ಕಳಾ ಬಿರಾದಾರ್‌, ಇಶಿತಾ ವರ್ಷ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
icon

(3 / 8)

ಸೀತಾರಾಮ ಧಾರಾವಾಹಿ ತಂಡ ಕೂಡ ವೈಷ್ಣವಿ ಗೌಡ ಎಂಗೇಜ್‌ಮೆಂಟ್‌ನಲ್ಲಿ ಭಾಗವಹಿಸಿತ್ತು. ಪೂಜಾ ಲೋಕೇಶ್, ಸಿಹಿ ಅಲಿಯಾಸ್ ರಿತು ಸಿಂಗ್, ಜ್ಯೋತಿ ಕಿರಣ್‌ ಮೊದಲಾದವರು ಸೀತೆಯ ನಿಶ್ಚಿತಾರ್ಥದ ಭಾಗವಾಗಿದ್ದರು. ನಿರೂಪಕಿ ಚೈತ್ರಾ ವಾಸುದೇವನ್ ಕೂಡ ವೈಷ್ಣವಿ ಎಂಗೇಜ್‌ಮೆಂಟ್‌ಗೆ ಬಂದಿದ್ದರು.
icon

(4 / 8)

ವೈಷ್ಣವಿ ಗೌಡ ಆಪ್ತ ಸ್ನೇಹಿತೆ, ನಟಿ ಅಮೂಲ್ಯ ಕೂಡ ಪತಿ ಜಗದೀಶ್ ಹಾಗೂ ಅವಳಿ ಮಕ್ಕಳ ಜೊತೆ ವೈಷ್ಣವಿ ಎಂಗೇಜ್‌ಮೆಂಟ್‌ನಲ್ಲಿ ಭಾಗವಹಿಸಿದ್ದರು.
icon

(5 / 8)

ನಿಶ್ಚಿತಾರ್ಥದಲ್ಲಿ ಕೆನೆ ಬಣ್ಣದ ಲೆಹೆಂಗಾ ಧರಿಸಿದ ವೈಷ್ಣವಿ ಬಹಳ ಮುದ್ದಾಗಿ ಕಾಣುತ್ತಿದ್ದರು. ವೈಷ್ಣವಿ–ಅನುಕೂಲ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ವೈಷ್ಣವ್ ಉತ್ತರ ಭಾರತ ಮೂಲದವರಾಗಿದ್ದು, ಹಿಂದಿಯಲ್ಲೇ ಪ್ರಪೋಸ್ ಮಾಡುವ ಮೂಲಕ ಉಂಗುರ ತೊಡಿಸಿದ್ದಾರೆ.
icon

(6 / 8)

ಸುಂದರ ದೀಪಗಳ ಬೆಳಕಿನ ನಡುವೆ ಆಪ್ತರು, ಸಂಬಂಧಿಕರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಿಸಿಕೊಂಡು ಹೊಸ ಬದುಕಿಗೆ ಹೆಜ್ಜೆ ಇಟ್ಟಿದೆ.
icon

(7 / 8)

ವಿಧಿಯೇ ನಮಗಾಗಿ ನಮಗಾಗಿ ಒಂದು ಪರಿಪೂರ್ಣ ಪ್ರೇಮಕಥೆ ಬರೆದಿದೆ ಎಂದು ಶೀರ್ಷಿಕೆ ಬರೆದುಕೊಳ್ಳುವ ಮೂಲಕ ಎಂಗೇಜ್‌ಮೆಂಟ್‌ನ ಫೋಟೊಗಳ ಗುಚ್ಛವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ವೈಷ್ಣವಿ.
icon

(8 / 8)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು