ಸೈಕಾಗೋದೆ... ಸೈಕಾದೆ ಅಂತ ಬೋಲ್ಡ್‌ ಡಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಬಾಳು ಬೆಳಗುಂದಿ-ಗಗನಾ; ಕಾಮೆಂಟ್‌ನಲ್ಲಿ ಪ್ರೇಕ್ಷಕರ ಕಿಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೈಕಾಗೋದೆ... ಸೈಕಾದೆ ಅಂತ ಬೋಲ್ಡ್‌ ಡಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಬಾಳು ಬೆಳಗುಂದಿ-ಗಗನಾ; ಕಾಮೆಂಟ್‌ನಲ್ಲಿ ಪ್ರೇಕ್ಷಕರ ಕಿಡಿ

ಸೈಕಾಗೋದೆ... ಸೈಕಾದೆ ಅಂತ ಬೋಲ್ಡ್‌ ಡಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಬಾಳು ಬೆಳಗುಂದಿ-ಗಗನಾ; ಕಾಮೆಂಟ್‌ನಲ್ಲಿ ಪ್ರೇಕ್ಷಕರ ಕಿಡಿ

  • ಕಳೆದ ವಾರಾಂತ್ಯ ಜೀ ಕನ್ನಡದಲ್ಲಿ ಪ್ರಸಾರವಾದ ಸರಿಗಮಪ ಹಾಗೂ ಭರ್ಜರಿ ಬ್ಯಾಚುಲರ್ಸ್ ಮಹಾಸಂಗಮದಲ್ಲಿ ಬಾಳು ಬೆಳಗುಂದಿ ಹಾಗೂ ಗಗನಾ ಮಾಡಿದ ಬೋಲ್ಡ್ ಡಾನ್ಸ್‌ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಕಾಮೆಂಟ್ ಮೂಲಕ ಪ್ರೇಕ್ಷಕರು ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ.

ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಷೋಗಳಾದ ಸರಿಗಮಪ ಹಾಗೂ ಭರ್ಜರಿ ಬ್ಯಾಚುಲರ್ಸ್‌ನ ಮಹಾಸಂಗಮ ಕಳೆದ ವಾರಾಂತ್ಯ ಪ್ರಸಾರವಾಗಿತ್ತು. ಸರಿಗಮಪ ಶೋ ಸ್ಪರ್ಧಿಗಳು ಹಾಡಿ ರಂಜಿಸುವುದಷ್ಟೇ ಅಲ್ಲ, ಭರ್ಜರಿ ಬ್ಯಾಚುಲರ್ಸ್‌ ಸ್ಪರ್ಧಿಗಳ ಜತೆ ಸೇರಿ ಡಾನ್ಸನ್ನೂ ಮಾಡಿದ್ದಾರೆ. ಎರಡೂ ಶೋಗಳ ಸ್ಪರ್ಧಿಗಳ ಜತೆಗೆ ತೀರ್ಪುಗಾರರೂ ಕಳೆದ ವಾರಾಂತ್ಯದಲ್ಲಿ ಒಂದೇ ಕಡೆ ಕಾಣಿಸಿಕೊಂಡು ಎಂಜಾಯ್‌ ಮಾಡಿದ್ದಾರೆ. ಸ್ಪರ್ಧಿಗಳು ಮೈಚಳಿ ಬಿಟ್ಟು ರೊಮ್ಯಾಂಟಿಕ್‌ ಹಾಡುಗಳಿಗೆ ಹೆಜ್ಜೆ ಹಾಕಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಬಾಳು ಬೆಳಗುಂದಿ ಮತ್ತು ಗಗನಾ ಡಾನ್ಸ್ ಬಗ್ಗೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ. ಮಾತ್ರವಲ್ಲ ಕಾಮೆಂಟ್ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
icon

(1 / 8)

ಭೀಮ ಸಿನಿಮಾದ ‘ಸೈಕಾಗೋದೆ... ಸೈಕಾದೆ‘ ಹಾಡಿಗೆ ಸಖತ್ ಬೋಲ್ಡ್ ಆಗಿ ಡಾನ್ಸ್ ಮಾಡಿದ್ದರು ಸರಿಗಮಪ ಸ್ಪರ್ಧಿಯ ಬಾಳು ಬೆಳಗುಂದಿ ಹಾಗೂ ಭರ್ಜರಿ ಬ್ಯಾಚುಲರ್ಸ್‌ನ ಗಗನಾ ಭಾರಿ. ಇವರ ಕುಣಿತ ನೋಡಿ ಸರಿಗಪಮ ಸ್ಪರ್ಧಿಗಳ ಜತೆಗೆ ಭರ್ಜರಿ ಬ್ಯಾಚುಲರ್ಸ್‌ ಶೋನ ಸ್ಪರ್ಧಿಗಳೂ ಹುಬ್ಬೇರಿಸಿದ್ದಾರೆ. ತೀರ್ಪುಗಾರರೂ ಇವರಿಬ್ಬರ ಕೆಮಿಸ್ಟ್ರಿ ನೋಡಿ ನಿಬ್ಬೆರಗಾಗಿದ್ದಾರೆ. ಮಾದಕವಾಗಿ ಈ ಜೋಡಿ ಹೆಜ್ಜೆ ಹಾಕುತ್ತಿದ್ದರೆ, ಇತ್ತ ವೇದಿಕೆ ಆಚೀಚೆ ಇದ್ದವರೆಲ್ಲ ಬೆರಗುಗಣ್ಣಿನಿಂದಲೇ ಅವರನ್ನೇ ನೋಡುತ್ತಿದ್ದಾರೆ. ಆಂಕರ್‌ ಅನುಶ್ರೀ ಬಾಯಿ ಮೇಲೆ ಕೈಯಿಟ್ಟುಕೊಂಡರೆ, ರಚಿತಾ ರಾಮ್‌ ಸಹ ಕಣ್ಣರಳಿಸಿ ಡಾನ್ಸ್‌ ಕಣ್ತುಂಬಿಕೊಂಡಿದ್ದಾರೆ.
icon

(2 / 8)

ಡಾನ್ಸ್ ಆರಂಭದಿಂದ ಅಂತ್ಯದವರೆಗೆ ಮಾದಕವಾಗಿದ್ದು, ಕೊನೆಯ ದೃಶ್ಯವಂತೂ ಸಖತ್ ಬೋಲ್ಡ್ ಆಗಿದ್ದು, ಯಾವುದೇ ಸಿನಿಮಾ ಹಾಡನ್ನೂ ಮೀರಿಸುವಂತಿತ್ತು. ಆ ದೃಶ್ಯ ನೋಡಿದ ಸರಿಗಮಪದ ತೀರ್ಪುಗಾರರಾದ ಅರ್ಜುನ್‌ ಜನ್ಯ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ನಾನೇನು ನೋಡಿಲ್ಲ ಎಂದಿದ್ದರು. ಬಾಳು ಬೆಳಗುಂದಿ ಡಾನ್ಸ್ ಮುಗಿದ ಬಳಿಕ ಅವರಿಗೆ ಪ್ರದಕ್ಷಿಣೆ ಹಾಕಿದ ಆ್ಯಂಕರ್ ಅನುಶ್ರೀ ಅದ್ಭುತ ಪರ್ಫಾಮೆನ್ಸ್ ಎಂದಿದ್ದಾರೆ. ಇತ್ತ ಜಡ್ಜ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಹ ಮಾತನಾಡಿ, ಬಾಳು ಬೆಳಗುಂದಿ, ಇವತ್ತು ನಿಮ್ಮ ಬಾಳು ಬೆಳಗ್ತು ಎಂದಿದ್ದಾರೆ.
icon

(3 / 8)

ಆದರೆ ಇವರ ಡಾನ್ಸ್ ಪರ್ಫಾಮೆನ್ಸ್ ಈಗ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಇವರ ಬೋಲ್ಡ್ ಡಾನ್ಸ್ ವೀಕ್ಷಕರಿಗೆ ಸಹ್ಯವಾದಂತೆ ಕಾಣಿಸಲಿಲ್ಲ. ಮಾತ್ರವಲ್ಲ ಈ ಡಾನ್ಸ್ ಕಂಡವರು ಸರಿಗಮಪ ಬಗ್ಗೆ ನಮಗಿದ್ದ ಗೌರವವೂ ಹೋಯ್ತು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಟಿಆರ್‌ಪಿಗೋಸ್ಕರ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಚಾನೆಲ್ ಅನ್ನು ಕೂಡ ಪರೋಕ್ಷವಾಗಿ ದೂರಿದ್ದಾರೆ ಜನ.
icon

(4 / 8)

ಬಹುತೇಕರು ಈ ರೀತಿ ಡಾನ್ಸ್‌ ಮಾಡಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಮನೆಯಲ್ಲಿ ಮಕ್ಕಳ ಜತೆಗೆ ಈ ಶೋ ನೋಡುತ್ತಿದ್ದೇವೆ. ನಿಜಕ್ಕೂ ಮುಜುಗರವಾಯ್ತು ಎಂದು ಕೆಲವರು ಹೇಳಿದರೆ, ಥೂ, ಅಸಹ್ಯ ಆಗುತ್ತೆ ಛೇ ಛೇ ಛೇ ಛೇ.. ಎಂದೂ ಕಾಮೆಂಟ್‌ ಹಾಕಿದ್ದಾರೆ.
icon

(5 / 8)

‘ಮಕ್ಕಳು ಇರುವ ಈ ಸ್ಟೇಜ್ ಮೇಲೆ ಇತರ ಅಸಭ್ಯ ಡ್ಯಾನ್ಸ್ ಬೇಕಾಗಿತ್ತಾ ಥೋ.. ಎಲ್ಲಾ ಟಿಆರ್‌ಪಿಗಾಗಿ. ಸ ರಿ ಗ ಮ ಪ ಶೋಗೆ ಒಂದು ಮರ್ಯಾದೆ ಇತ್ತು ಅದನ್ನು ಕಳೆದುಬಿಟ್ರಲ್ರೊ ಎಂದೂ ಬೇಸರ ಹೊರಹಾಕುತ್ತಿದ್ದಾರೆ. ಈ ಸ್ಟೇಜ್ ಮರ್ಯಾದೆ ಜೊತೆ ಗಗನ ಅವಳ ಮರ್ಯಾದೆನೂ ಹರಾಜ್ ಆಯ್ತು.. ತುಂಬಾನೆ ಜಾಸ್ತಿ ಆಯ್ತು, ತುಂಬಾ ಕೆಟ್ಟದಾಗಿದೆ‘ ಎಂದೆಲ್ಲಾ ಹಲವರು ವೀಕ್ಷಕರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
icon

(6 / 8)

‘ಕುಟುಂಬ ಸಮೇತ ನೋಡೋ ಕಾರ್ಯಕ್ರಮ ಇದು ರಾಘವೇಂದ್ರ ಹುಣಸೂರ್ ಅವರೇ, ಇದು ಫ್ಯಾಮಿಲಿ ಶೋ ಅಂತ ಮರ್ತಿದೀರಾ ಹೆಂಗೆ ಏನ್ ಕರ್ಮ ಗುರು‘ ಎಂದು ರಾಘವೇಂದ್ರ ಹುಣಸೂರ್ ಮೇಲೆ ಕೋಪ ತೋರಿದ್ದು ಮಾತ್ರವಲ್ಲ ‘ಗಿಲ್ಲಿ ಬಂದು ಗಾಳಿಪಟ ಹಾರಿಸಲಿಲ್ಲ, ಪ್ರತಾಪ್ ಬಂದು ಡ್ರೋನ್ ಹಾರಿಸಲಿಲ್ಲ, ಬಾಳು ಬಂದು ಬಾಳು ಕೊಡ್ತಾ ಇದ್ದಾನೆ‘ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ.
icon

(7 / 8)

‘ಒಟ್ಟಿನಲ್ಲಿ ಇಬ್ರಿಗೂ ಏನು ಡ್ಯಾನ್ಸ್ ಬರಲ್ಲ. ಅಸಹ್ಯ ಡಾನ್ಸ್ ಮಾಡಿದಕ್ಕೆ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಾ ಅಂತಾರಲ್ಲ ಎಂಥ ಷೋ ಇದು‘, ‘ಥೋ ಎನ್ರೋ, ಫ್ಯಾಮಿಲಿ ಷೋ ನಾ ನಿಮ್ ಜನ್ಮಕ್ಕೆ ನಿಮ್ ಟಿಆರ್‌ಪಿಗೆ ಇಷ್ಟೊಂದ್ ಅಸಹ್ಯ ಡ್ಯಾನ್ಸ್‘ ಎಂದು ಟಿಆರ್‌ಪಿಗೋಸ್ಕರ ಹೀಗೆಲ್ಲಾ ಅಸಭ್ಯವಾಗಿ ತೋರಿಸಬೇಡಿ ಎಂದಿದ್ದಾರೆ.
icon

(8 / 8)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು