ಮಿಸ್‌ ಯೂ ಮಗನೇ, ನೀನೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀಯಾ, ರಾಕೇಶ್‌ ಪೂಜಾರಿ ಬಗ್ಗೆ ನಟಿ ರಕ್ಷಿತಾ ಭಾವುಕ ಬರಹ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿಸ್‌ ಯೂ ಮಗನೇ, ನೀನೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀಯಾ, ರಾಕೇಶ್‌ ಪೂಜಾರಿ ಬಗ್ಗೆ ನಟಿ ರಕ್ಷಿತಾ ಭಾವುಕ ಬರಹ

ಮಿಸ್‌ ಯೂ ಮಗನೇ, ನೀನೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀಯಾ, ರಾಕೇಶ್‌ ಪೂಜಾರಿ ಬಗ್ಗೆ ನಟಿ ರಕ್ಷಿತಾ ಭಾವುಕ ಬರಹ

ನಟ, ಕಾಮಿಡಿ ಕಿಲಾಡಿ ರಾಕೇಶ್‌ ಪೂಜಾರಿ ಸಾವು ಕಿರುತೆರೆ, ಸಿನಿಮಾ ರಂಗ ಸೇರಿದಂತೆ ಕರುನಾಡಿಗೆ ಶಾಕ್‌ ನೀಡಿದೆ. ನಿನ್ನೆಯವರೆಗೂ ನಗುತ್ತಾ, ನಗಿಸುತ್ತಲೇ ಇದ್ದ ರಾಕೇಶ್‌ ಇಂದು ನಗಿಸಲಾರದಷ್ಟು ದೂರ ತೆರಳಿದ್ದಾರೆ. ರಾಕೇಶ್‌ ಬಗ್ಗೆ ನಟಿ, ಕಾಮಿಡಿ ಕಿಲಾಡಿ ಜಡ್ಜ್‌ ರಕ್ಷಿತಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ರಾಕೇಶ್‌ ಪೂಜಾರಿ ತುಳು ಸಿನಿಮಾರಂಗದ ಮೂಲಕ ಹೆಸರು ಗಳಿಸಿ, ಕನ್ನಡದ ಪ್ರಸಿದ್ಧ ರಿಯಾಲಿಟಿ ಷೋ ಕಾಮಿಡಿ ಕಿಲಾಡಿಯಲ್ಲಿ ಮಿಂಚಿ, ಕಾಮಿಡಿ ಕಿಲಾಡಿ ಸೀಸನ್‌ 3ರ ಪಟ್ಟವನ್ನು ಗಿಟ್ಟಿಸಿಕೊಂಡವರು. ಮಾತಿನಲ್ಲೇ ನಗುವಿನ ಅಲೆ ಹರಿಸುತ್ತಿದ್ದ ಈ ಪ್ರತಿಭಾನ್ವಿತ ನಟ ಇಂದು (ಮೇ 12) ಇಹಲೋಕ ತ್ಯಜಿಸಿದ್ದಾರೆ.
icon

(1 / 8)

ಗೆಳೆಯನ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಕ್ಕು, ನಲಿದಿದ್ದ ರಾಕೇಶ್‌ ಕ್ಷಣ ಮಾತ್ರದಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ತೀವ್ರ ಹೃದಯಾಘಾತದಿಂದ ರಾಕೇಶ್‌ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇವರಿಗೆ ಲೋ ಬಿಪಿ ಸಮಸ್ಯೆ ಕೂಡ ಇತ್ತು ಎನ್ನಲಾಗುತ್ತಿದೆ.
icon

(2 / 8)

ತನ್ನ ಹಾಸ್ಯ ಚಟಾಕಿಯ ಮೂಲಕ ಕರುನಾಡನ್ನು ನಕ್ಕು ನಗಿಸುತ್ತಿದ್ದ ರಾಕೇಶ್‌ ಪೂಜಾರಿ ಸಾವು ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಇವರ ಸಾವಿಗೆ ಕನ್ನಡ ಜನತೆ ಸೇರಿದಂತೆ ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ನಟಿ, ಕಾಮಿಡಿ ಕಿಲಾಡಿ ತೀರ್ಪುಗಾರರಾಗಿದ್ದ ರಕ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್‌ ಹಾಕಿಕೊಂಡು ರಾಕೇಶ್‌ ಬಗ್ಗೆ ಬರೆದುಕೊಂಡಿದ್ದಾರೆ.
icon

(3 / 8)

ಸದಾ ನಗುತ್ತಲೇ ಇರುವ ರಾಕೇಶಾ, ನನ್ನ ನೆಚ್ಚಿನ ರಾಕೇಶಾ, ಅತ್ಯಂತ ಪ್ರೀತಿ, ಮೃದು ಹೃದಯಿ ವ್ಯಕ್ತಿ, ನಮ್ಮ ರಾಕೇಶಾ, ಮಿಸ್‌ ಯು ಮಗನೇ ಎಂದು ರಾಕೇಶ್‌ ಪೋಟೊ ಪೋಸ್ಟ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ ರಕ್ಷಿತಾ.
icon

(4 / 8)

ಕಾಮಿಡಿ ಕಿಲಾಡಿ ಷೋ ಮುಗಿದ ಬಳಿಕವೂ ರಕ್ಷಿತಾ ಅವರ ಜೊತೆ ರಾಕೇಶ್‌ ಆತ್ಮೀಯ ಒಡನಾಟ ಹೊಂದಿದ್ದರು. ನನ್ನ ನೆಚ್ಚಿನ ಕಾಮಿಡಿ ಕಿಲಾಡಿ ನಮ್ಮ ಜೊತೆಗೆ ರಾಕೇಶ್‌ ಇರುವ ಫೋಟೊ ಹಂಚಿಕೊಂಡಿದ್ದಾರೆ ರಕ್ಷಿತಾ.
icon

(5 / 8)

ನಟ ದರ್ಶನ್‌ ರಾಕೇಶ್‌ ಅವರನ್ನು ಅಪ್ಪಿಕೊಂಡಿರುವ ಫೋಟೊ ಕೂಡ ರಕ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನಲ್ಲಿ ಹಾಕಿಕೊಂಡಿದ್ದಾರೆ.
icon

(6 / 8)

ನಾನು ಇನ್ನು ಎಂದೆಂದಿಗೂ ರಾಕೇಶನ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಕಾಮಿಡಿ ಕಿಲಾಡಿ ಷೋ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಆದರೆ ಇದರಲ್ಲಿ ಭಾಗವಹಿಸಿದ ಎಲ್ಲರಿಗಿಂತ ರಾಕೇಶ ನನಗೆ ತುಂಬಾ ವಿಶೇಷವಾಗಿದ್ದ, ಅವನು ಬಹಳ ಸುಂದರ ವ್ಯಕ್ತಿತ್ವದವನು. ಅವನು ಪ್ರತಿಭಾವಂತ. ರಾಕೇಶ ನೀನು ನಮ್ಮೆಲ್ಲರ ಹೃದಯದಲ್ಲಿ ಯಾವಾಗಲೂ ಇರುತ್ತೀಯಾ. ಎಲ್ಲರೂ ನಿನ್ನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಾರೆ. ನೀನು ನಮ್ಮೆಲ್ಲರ ಹೃದಯದಲ್ಲಿ ನಗು ಮೂಡಿಸಿದವರು, ಥ್ಯಾಂಕ್‌ ಯು ರಾಕೇಶ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ರಕ್ಷಿತಾ.
icon

(7 / 8)

ರಾಕೇಶ್‌ ಸಾವಿಗೆ ಕಂಬನಿ ಮಿಡಿದಿರುವ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
icon

(8 / 8)

ರಾಕೇಶ್‌ ಸಾವಿಗೆ ಕಂಬನಿ ಮಿಡಿದಿರುವ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು