ಗಿಲ್ಲಿ ಇಲ್ಲದ ಗಗನ ಎಲ್ಲಿ ಕಾಂತ ಎನ್ನುತ್ತಾ ಭರ್ಜರಿ ಬ್ಯಾಚುಲರ್ಸ್‌ಗೆ ಎಂಟ್ರಿ ಕೊಟ್ಟ ಗಿಲ್ಲಿ ನಟ; ಪಂಚ್ ಡೈಲಾಗ್‌ಗೆ ನಕ್ಕು ಸುಸ್ತಾದ ವೇದಿಕೆ
- Gilli Nata: ‘ಗಿಲ್ಲಿ ಇಲ್ಲದ ಗಗನ ಎಲ್ಲಿ ಕಾಂತ‘ ಎನ್ನುತ್ತಾ ಉಪೇಂದ್ರ ಸ್ಟೈಲ್‌ನಲ್ಲಿ ಭರ್ಜರಿ ಬ್ಯಾಚುಲರ್ ವೇದಿಕೆಗೆ ಸಖತ್ ಎಂಟ್ರಿ ಕೊಟ್ಟಿದ್ದಾರೆ ಗಿಲ್ಲಿ ನಟ. ಉಪೇಂದ್ರ ಅವರ ರಕ್ತಕಣ್ಣೀರು ಸಿನಿಮಾ ಸ್ಟೈಲ್‌ನಲ್ಲಿ ವೇದಿಕೆ ಮೇಲೆ ಬಂದ ಗಿಲ್ಲಿ ಪಂಚಿಂಗ್ ಡೈಲಾಗ್‌ಗಳನ್ನು ಹೇಳಿ ನಗಿಸಿದ್ದಾರೆ, ಜೊತೆಗೆ ಗಗನಾಳ ಕಾಲೆಳೆದಿದ್ದಾರೆ.
- Gilli Nata: ‘ಗಿಲ್ಲಿ ಇಲ್ಲದ ಗಗನ ಎಲ್ಲಿ ಕಾಂತ‘ ಎನ್ನುತ್ತಾ ಉಪೇಂದ್ರ ಸ್ಟೈಲ್‌ನಲ್ಲಿ ಭರ್ಜರಿ ಬ್ಯಾಚುಲರ್ ವೇದಿಕೆಗೆ ಸಖತ್ ಎಂಟ್ರಿ ಕೊಟ್ಟಿದ್ದಾರೆ ಗಿಲ್ಲಿ ನಟ. ಉಪೇಂದ್ರ ಅವರ ರಕ್ತಕಣ್ಣೀರು ಸಿನಿಮಾ ಸ್ಟೈಲ್‌ನಲ್ಲಿ ವೇದಿಕೆ ಮೇಲೆ ಬಂದ ಗಿಲ್ಲಿ ಪಂಚಿಂಗ್ ಡೈಲಾಗ್‌ಗಳನ್ನು ಹೇಳಿ ನಗಿಸಿದ್ದಾರೆ, ಜೊತೆಗೆ ಗಗನಾಳ ಕಾಲೆಳೆದಿದ್ದಾರೆ.
(1 / 8)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ ಸೀಸನ್ 2 ರಿಯಾಲಿಟಿ ಷೋನಲ್ಲಿ ಈ ಕನ್ನಡದ ಪ್ರಸಿದ್ಧ ರೊಮ್ಯಾಂಟಿಕ್ ಗೀತೆಗಳಿಗೆ ಜೋಡಿಗಳು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ. ಭರ್ಜರಿ ಬ್ಯಾಚುಲರ್ ಸೀಸನ್ 2ನಲ್ಲಿ ಡ್ರೋಣ್ ಪ್ರತಾಪ್ ಹಾಗೂ ಗಗನಾ ಭಾರಿ ಜೋಡಿಯಾಗಿದ್ದಾರೆ. ಈ ಜೋಡಿ ಈ ವಾರದ ವಿಶೇಷ ರೌಂಡ್‌ನಲ್ಲಿ ಸುಂದರಿ ಸುಂದರಿ ಎನ್ನುವ ಹಾಡಿಗೆ ಹೆಜ್ಜೆ ಹಾಕಿದೆ.
(2 / 8)
ಡ್ರೋನ್ ಪ್ರತಾಪ್ ಹಾಗೂ ಗಗನಾ ಭಾರಿ ಡಾನ್ಸ್ ಮೆಚ್ಚಿಕೊಂಡಿರುವ ತೀರ್ಪುಗಾರರು ಬೆಸ್ಟ್ ಪರ್ಫಾಮೆನ್ಸ್ ಎಂದು ಹೊಗಳಿದ್ದಾರೆ. ಮಾತ್ರವಲ್ಲ ಗಗನಾ ಕೂಡ ಡ್ರೋನ್ ಪ್ರತಾಪ್‌ರನ್ನು ಹಾಡಿ ಹೊಗಳುತ್ತಾರೆ. ಪ್ರತಾಪ್ ಮಲ್ಟಿಟ್ಯಾಲೆಂಟೆಡ್. ಅವರ ಬಳಿ ಎಲ್ಲಾ ರೀತಿಯ ಪ್ರತಿಭೆಗಳೂ ಇವೆ ಎಂದು ಗಗನಾ ಮನಸಾರೆ ಹೊಗಳುತ್ತಾರೆ. ಆ ಹೊತ್ತಿಗೆ ರಕ್ತಕಣ್ಣೀರು ಸ್ಟೈಲ್‌ನಲ್ಲಿ ಸ್ಟೇಜ್ ಮೇಲೆ ಎಂಟ್ರಿ ಕೊಡ್ತಾರೆ ಗಿಲ್ಲಿ ನಟ.
(3 / 8)
ಗಿಲ್ಲಿ ನಟ ವೇದಿಕೆ ಮೇಲೆ ಬಂದ್ರು ಅಂದ್ರೆ ಖಂಡಿತ ನಗುವಿಗೆ ಕೊರತೆ ಇಲ್ಲ. ಗಿಲ್ಲಿ ನಟನಿಗೆ ಮೊದಲಿನಿಂದಲೂ ಗಗನಾ ಭಾರಿ ಮೇಲೆ ಒಲವು. ಇದೀಗ ‘ಗಿಲ್ಲಿ ಇಲ್ಲದ ಗಗನ ಎಲ್ಲಿ ಕಾಂತ‘ ಎನ್ನುತ್ತಾ ಭರ್ಜರಿ ಬ್ಯಾಚುಲರ್ ವೇದಿಕೆಗೆ ಎಂಟ್ರಿ ಕೊಟ್ಟದ್ದಾರೆ ಗಿಲ್ಲಿ. ರಕ್ತಕಣ್ಣೀರು ಗೆಟ್‌ಅಪ್‌ನಲ್ಲಿ ಗಿಲ್ಲಿ ಎಂಟ್ರಿ ನೋಡಿ ವೇದಿಕೆ ಮೇಲಿರುವ ತೀರ್ಪುಗಾರರು, ಸ್ಪರ್ಧಿಗಳು ಹಾಗೂ ಆ್ಯಂಕರ್ ನಿರಂಜನ್ ಶಾಕ್ ಆಗುವ ಜೊತೆ ಅವನ ಡೈಲಾಗ್‌ಗೆ ನಗಲು ಶುರು ಮಾಡುತ್ತಾರೆ.
(4 / 8)
ಕೈಯಲ್ಲೊಂದು ಎಲೆಕೋಸು, ಬಾಯಲ್ಲಿ ಸಿಗಾರ್ ಇಟ್ಟು ಬರುವ ಗಿಲ್ಲಿ ರಕ್ತಕಣ್ಣೀರು ಸ್ಟೈಲ್‌ನಲ್ಲಿ ಡೈಲಾಗ್ ಹೇಳಲು ಶುರು ಮಾಡುತ್ತಾರೆ. ಪಂಚಿಂಗ್ ಡೈಲಾಗ್ ಹೇಳುವ ಗಿಲ್ಲಿ ನಟ ವೇದಿಕೆ ಮೇಲೆ ನಗುವಿನ ಹೊಳೆಯನ್ನೇ ಹರಿಸುತ್ತಾರೆ. ‘ಗಿಲ್ಲಿ ಇಲ್ಲದ ಗಗನ ಎಲ್ಲಿ ಕಾಂತ. ನೋಡೋಕ್ ಮಾತ್ರ ಸ್ವಲ್ಪ ಸಿಲ್ಲಿ ಆಗಿದ್ರೂ, ಪಂಚ್ ಅನ್ನು ನಮ್ ಸ್ಟೇಜ್ ಮೇಲೆ ಚೆಲ್ಲಿ ಗಲ್ಲಿಯಿಂದ ದಿಲ್ಲಿವರೆಗೂ ಮೈಲಿಗಲ್ಲನ್ನು ನೆಟ್ಟಿರುವ ಗಿಲ್ಲಿ ಮಂಡ್ಯದ ಗಂಡು‘ ಎಂದು ಡೈಲಾಗ್ ಹೇಳುವ ಮೂಲಕ ಗಗನಾ ಎಲ್ಲೋ ಅಲ್ಲಿ ಗಿಲ್ಲಿ ಇರ್ತಾರೆ ಎಂದಿದ್ದಾರೆ.
(5 / 8)
‘ಈ ಗಗನಾಳನ್ನು ಇಂಪ್ರೆಸ್ ಮಾಡಲು ಪ್ರತಾಪನ ಡ್ರೋನು ಬೇಕಾಗಿಲ್ಲ, ಬಾಳು ಬೆಳಗುಂದಿಯ ಡಾನ್ಸು ಏನೇನಲ್ಲ, ಕವನ ಕವಿತೆಗಳು ಬೇಕಾಗೇ ಇಲ್ಲ‘ ಎಂದು ಪಂಚ್ ಮೇಲೆ ಪಂಚ್ ಡೈಲಾಗ್ ಹೊಡೆದು ನಕ್ಕು ನಗಿಸಿದ್ದಾರೆ ಗಿಲ್ಲಿ.
(6 / 8)
ಗಿಲ್ಲಿ ನಟ ಸ್ಟೇಜ್ ಮೇಲೆ ಪಂಚ್ ಮೇಲೆ ಪಂಚ್ ಡೈಲಾಗ್ ಹೊಡಿತಾ ಇದ್ರೆ ವೇದಿಕೆ ಮೇಲಿದ್ದ ತೀರ್ಪುಗಾರರು, ಸ್ಪರ್ಧಿಗಳು ಹಾಗೂ ಆ್ಯಂಕರ್ ನಿರಂಜನ್ ನಕ್ಕು ನಕ್ಕು ಸುಸ್ತಾಗಿದ್ದಾರೆ.
(7 / 8)
ಇದೇ ವೇದಿಕೆ ಮೇಲೆ ಗಿಲ್ಲಿ ಬಳಿಯಿಂದ ದೂರ ಓಡುವ ಗಗನ ದೃಷ್ಟರನ್ನು ಕಂಡರೆ ದೂರ ಇರಬೇಕು ಎಂದು ಹೇಳಿದ್ದು ವೀಕ್ಷಕರಿಗೆ ಅಸಮಾಧಾನ ತಂದಿದೆ. ಈ ಪ್ರೋಮೊ ನೋಡಿರುವವರು ಗಗನಾಳ ಮಾತು ಕೇಳಿ ಆಕ್ರೋಶ ಹೊರ ಹಾಕಿದ್ದಾರೆ. ನೀನು ಕರ್ನಾಟಕಕ್ಕೆ ಪರಿಚಯ ಆಗಲು ಗಿಲ್ಲಿಯೇ ಕಾರಣ ಮರಿಬೇಡಿ ಅಂತ ಗಗನಾಳನ್ನು ಉದ್ದೇಶಿಸಿ ಕಾಮೆಂಟ್ ಹಾಕಿದ್ದಾರೆ.
ಇತರ ಗ್ಯಾಲರಿಗಳು