ಇತ್ತೀಚೆಗಷ್ಟೇ ಶುರುವಾದ ಹೊಸ ಧಾರಾವಾಹಿ ಶೀಘ್ರದಲ್ಲಿಯೇ ಮುಕ್ತಾಯ!? ಶುರುವಾಯ್ತು ಕೊನೇ ಸಂಚಿಕೆಗಳ ಶೂಟಿಂಗ್
- ಕನ್ನಡ ಕಿರುತೆರೆ ವೀಕ್ಷಕರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಇತ್ತೀಚೆಗಷ್ಟೇ ಶುರುವಾಗಿದ್ದ ಸೀರಿಯಲ್‌ವೊಂದು ಇದೀಗ ಅಂತ್ಯದ ಮುನ್ಸೂಚನೆ ನೀಡಿದೆ. ಅಂದರೆ, ಸದ್ದಿಲ್ಲದೆ, ತನ್ನ ಕೊನೇ ಸಂಚಿಕೆಗಳನ್ನು ಚಿತ್ರೀಕರಣ ಮಾಡುತ್ತಿದೆ. ಈ ಮೂಲಕ ಮುಂದಿನ ಎರಡ್ಮೂರು ವಾರಗಳಲ್ಲಿ ಹೊಸ ಸೀರಿಯಲ್ ಶುರುವಾದಷ್ಟೇ ಬೇಗ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಯಾವುದದು?
- ಕನ್ನಡ ಕಿರುತೆರೆ ವೀಕ್ಷಕರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಇತ್ತೀಚೆಗಷ್ಟೇ ಶುರುವಾಗಿದ್ದ ಸೀರಿಯಲ್‌ವೊಂದು ಇದೀಗ ಅಂತ್ಯದ ಮುನ್ಸೂಚನೆ ನೀಡಿದೆ. ಅಂದರೆ, ಸದ್ದಿಲ್ಲದೆ, ತನ್ನ ಕೊನೇ ಸಂಚಿಕೆಗಳನ್ನು ಚಿತ್ರೀಕರಣ ಮಾಡುತ್ತಿದೆ. ಈ ಮೂಲಕ ಮುಂದಿನ ಎರಡ್ಮೂರು ವಾರಗಳಲ್ಲಿ ಹೊಸ ಸೀರಿಯಲ್ ಶುರುವಾದಷ್ಟೇ ಬೇಗ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಯಾವುದದು?
(1 / 9)
ಕಲರ್ಸ್ ಕನ್ನಡದಲ್ಲಿ ಹಾರರ್ ಪ್ರೇಮಕಥೆಯ ʻನೂರು ಜನ್ಮಕೂʼ ಸೀರಿಯಲ್ ಕಳೆದ ವರ್ಷದ ಡಿಸೆಂಬರ್ 24ರಂದು ಪ್ರಸಾರ ಆರಂಭಿಸಿತ್ತು. ಅದಾದ ಮೇಲೆ ಡಿವೋರ್ಸ್ ಲಾಯರ್ ಮದುವೆ ಕಥೆಯಾದ ʻವಧುʼ ಮತ್ತು ʻಯಜಮಾನʼ ಧಾರಾವಾಹಿಗಳು ಬಿಗ್ ಬಾಸ್ ಮುಗಿಯುತ್ತಿದ್ದಂತೆ ಪ್ರಸಾರ ಆರಂಭಿಸಿದ್ದವು. ಈ ಸೀರಿಯಲ್‌ಗಳ ಆಗಮನದ ಹಿನ್ನೆಲೆಯಲ್ಲಿ ಕೆಲವು ಸೀರಿಯಲ್‌ಗಳು ಅಂತ್ಯವಾದವು, ಇನ್ನು ಕೆಲವು ಸಮಯದಲ್ಲಿ ಏರುಪೇರಾದವು.
(Image\ Jio Hotstar)(2 / 9)
ಕಲರ್ಸ್ ಕನ್ನಡದ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ವಧು ಮತ್ತು ಯಜಮಾನ ಸೀರಿಯಲ್‌ಗಳಿಗೆ, ವೀಕ್ಷಕ ಪ್ರಭು ಮರುಳಾಗಲಿಲ್ಲ. ಅದಕ್ಕೂ ಮೊದಲು ಬಂದಿದ್ದ ನೂರು ಜನ್ಮಕೂ ಧಾರಾವಾಹಿಯೂ ನಿರಾಸೆ ಮೂಡಿಸಿತು. ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಈ ಸೀರಿಯಲ್‌ಗಳಿಗೆ ದಕ್ಕಲಿಲ್ಲ.
(3 / 9)
ಈ ನಡುವೆ ಪ್ರಸಾರದ ಸ್ಲಾಟ್‌ಗಳ ಬದಲಾವಣೆಯಿಂದಲೂ ಈ ಧಾರಾವಾಹಿಗಳು ಇದೀಗ ಅಡಕತ್ತರಿಯಲ್ಲಿವೆ ಎಂಬ ಮಾತೀಗ ಕಿರುತೆರೆ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದರೆ, ಈಗಷ್ಟೇ ಪ್ರಸಾರ ಆರಂಭಿಸಿದ ಸೀರಿಯಲ್‌ಗಳ ಪೈಕಿ ಒಂದು ಸೀರಿಯಲ್ ಇನ್ನೇನು ಶೀಘ್ರದಲ್ಲಿ ಕೊನೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
(4 / 9)
ಡಿಸೆಂಬರ್ 23ರಂದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆರಂಭಿಸಿ, ಕೇವಲ ಎರಡೇ ತಿಂಗಳಿಗೆ ತನ್ನ ವೀಕ್ಷಕರಿಗೆ ಬೇಸರದ ಸುದ್ದಿ ನೀಡಿತ್ತು ನೂರು ಜನ್ಮಕೂ ಧಾರಾವಾಹಿ. ಪ್ರತಿ ರಾತ್ರಿ 8:30ಕ್ಕೆ ಪ್ರಸಾರವಾಗುತ್ತಿದ್ದ ಈ ಸೀರಿಯಲ್, ಟಿಆರ್‌ಪಿಯಲ್ಲಿ ನಿರೀಕ್ಷಿತ ಗಡಿ ಮುಟ್ಟಲಿಲ್ಲ
(5 / 9)
ಆ ಒಂದು ಕಾರಣಕ್ಕೆ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತಗೊಳಿಸಲಾಗಿತ್ತು. ಮಾರ್ಚ್ 8ರಿಂದ ವಾರಾಂತ್ಯದ ಎರಡು ದಿನಕ್ಕೆ ಶಿಫ್ಟ್ ಆಗಿತ್ತು ನೂರು ಜನ್ಮಕೂ. ಈಗ ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ ಈ ಸೀರಿಯಲ್ ಕೊನೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
(6 / 9)
ಜನವರಿ 27ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ವಧು ಸೀರಿಯಲ್ ಶುರುವಾದರೆ, ರಾತ್ರಿ 10ಕ್ಕೆ ಪ್ರಸಾರ ಆರಂಭಿಸಿತ್ತು ಯಜಮಾನ ಧಾರಾವಾಹಿ. ಈ ಸೀರಿಯಲ್‌ಗಳೂ ಹೈಪ್ ಸೃಷ್ಟಿಸಿದ್ದವು. ಆದರೆ, ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಮಾತ್ರ ಇವುಗಳಿಗೆ ದಕ್ಕಲಿಲ್ಲ.
(7 / 9)
9:30ರ ಬದಲು ರಾತ್ರಿ 10:30ಕ್ಕೆ ಪ್ರಸಾರ ಆರಂಭಿಸಿ ಮತ್ತಷ್ಟು ಅನುಮಾನ ಮೂಡಿಸಿದೆ ವಧು ಸೀರಿಯಲ್. ಹೀಗಿರುವಾಗ ಈ ಸೀರಿಯಲ್‌ಗಳ ಪೈಕಿ ಒಂದು ಧಾರಾವಾಹಿ ಮುಕ್ತಾಯವಾಗಬಹುದು ಎಂದೂ ಹೇಳಲಾಗುತ್ತಿದೆ.
(8 / 9)
ಕಲರ್ಸ್ ಕನ್ನಡದ ನೂರು ಜನ್ಮಕೂ, ವಧು, ಯಜಮಾನ ಸೀರಿಯಲ್‌ಗಳ ಪೈಕಿ ಅದಕ್ಕೂ ಮೊದಲು ಶುರುವಾದ ದೃಷ್ಟಿಬೊಟ್ಟು ಸೀರಿಯಲ್ ಸಹ ಮೋಡಿ ಮಾಡುತ್ತಿಲ್ಲ. ಟಿಆರ್‌ಪಿಯಲ್ಲಿ ಈ ಧಾರಾವಾಹಿ ಕಮಾಲ್ ಮಾಡಿಲ್ಲ.
ಇತರ ಗ್ಯಾಲರಿಗಳು