ಎರಡನೇ ಮದುವೆಗೆ ರೆಡಿ, ಭಾವಿ ಪತಿ ಜಗದೀಪ್‌ ಜತೆಗಿನ ಫೋಟೋ ಹಂಚಿಕೊಂಡ ನಿರೂಪಕಿ ಚೈತ್ರಾ ವಾಸುದೇವನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎರಡನೇ ಮದುವೆಗೆ ರೆಡಿ, ಭಾವಿ ಪತಿ ಜಗದೀಪ್‌ ಜತೆಗಿನ ಫೋಟೋ ಹಂಚಿಕೊಂಡ ನಿರೂಪಕಿ ಚೈತ್ರಾ ವಾಸುದೇವನ್

ಎರಡನೇ ಮದುವೆಗೆ ರೆಡಿ, ಭಾವಿ ಪತಿ ಜಗದೀಪ್‌ ಜತೆಗಿನ ಫೋಟೋ ಹಂಚಿಕೊಂಡ ನಿರೂಪಕಿ ಚೈತ್ರಾ ವಾಸುದೇವನ್

  • Chaitra Vasudevan: 2023ರಲ್ಲಿ ಮೊದಲ ಪತಿ ಸತ್ಯ ನಾಯ್ಡುಗೆ ವಿಚ್ಛೇದನ ನೀಡಿ ಆ ಬಂಧದಿಂದ ಹೊರಬಂದಿದ್ದರು ನಿರೂಪಕಿ ಚೈತ್ರಾ ವಾಸುದೇವನ್.‌ ಇದೀಗ ಎರಡನೇ ಮದುವೆಯ ಖುಷಿಯಲ್ಲಿದ್ದಾರೆ. ಜಗದೀಪ್‌ ಎಂಬುವವರನ್ನು ಇನ್ನೇನು ಶೀಘ್ರದಲ್ಲಿ ವರಿಸಲಿದ್ದಾರೆ ಚೈತ್ರಾ. ಅದಕ್ಕೂ ಮುನ್ನ ಇವನೇ ನನ್ನ ಹುಡುಗ ಎಂದು ಭಾವಿ ಪತಿಯನ್ನು ಪರಿಚಯಿಸಿದ್ದಾರ.

ಸೋಷಿಯಲ್‌ ಮೀಡಿಯಾದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಹೊಸ ವಿಡಿಯೋ ಜತೆ ಸಿಹಿಸುದ್ದಿ ತಿಳಿಸಿದ್ದರು ಕನ್ನಡದ ಚೆಂದದ ನಿರೂಪಕಿ ಚೈತ್ರಾ ವಾಸುದೇವನ್‌. 
icon

(1 / 9)

(Instagram)

ನಿರೂಪಣೆಯಿಂದ ಕರುನಾಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಚೈತ್ರಾ, ಎರಡನೇ ಮದುವೆ ಆಗುತ್ತಿರುವ ಮತ್ತು ಆ ಹುಡುಗನ ಜತೆಗೆ ಉಂಗುರ ಬದಲಿಸಿಕೊಂಡು ಸಂಭ್ರಮಿಸಿದ್ದ ಕಿರು ವಿಡಿಯೋ ಶೇರ್‌ ಮಾಡಿದ್ದರು.
icon

(2 / 9)

ಈಗ ಆ ಹುಡುಗ ಯಾರು ಎಂಬುದನ್ನು, ದೇವರ ಸನ್ನಿಧಿಯಲ್ಲಿ ಒಟ್ಟಿಗೆ ನಿಂತ ಫೋಟೋವನ್ನು ಹಂಚಿಕೊಂಡು, ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
icon

(3 / 9)

2023ರಲ್ಲಿ ಮೊದಲ ಪತಿ ಸತ್ಯ ನಾಯ್ಡುಗೆ ವಿಚ್ಛೇದನ ನೀಡಿ ಆ ಬಂಧದಿಂದ ಹೊರಬಂದಿದ್ದ ಚೈತ್ರಾ, ಕಳೆದ ವರ್ಷವೇ ಎರಡನೇ ಮದುವೆ ಬಗ್ಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಶೋನಲ್ಲಿ ಹೇಳಿಕೊಂಡಿದ್ದರು.
icon

(4 / 9)

ಈಗ ಅದೇ ಹುಡುಗನ ಫೋಟೋ ಶೇರ್‌ ಮಾಡಿದ್ದಾರೆ. ಜಗದೀಪ್‌ ಎಂಬುವವರನ್ನು ಚೈತ್ರಾ ಎರಡನೇ ಮದುವೆ ಆಗಲಿದ್ದಾರೆ. 
icon

(5 / 9)

ಈ ಜಗದೀಪ್‌ ಎಲ್ಲಿಯವರು, ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. 
icon

(6 / 9)

"ಪ್ರೀತಿಯಿಂದ ತುಂಬಿದ ಜೀವನಕ್ಕೆ ಹೆಜ್ಜೆ ಇಡುತ್ತಿದ್ದೇನೆ" ಎಂಬ ಕ್ಯಾಪ್ಶನ್‌ ಮೂಲಕ ಸಿಹಿ ಸುದ್ದಿ ನೀಡಿದ ಚೈತ್ರಾಗೆ, ನೆಟ್ಟಿಗರು ತುಂಬ ಹೃದಯದಿಂದ ಶುಭ ಕೋರುತ್ತಿದ್ದಾರೆ.
icon

(7 / 9)

ಸದ್ಯ ಕೆಲ ಮೂಲಗಳ ಮಾಹಿತಿ ಪ್ರಕಾರ, ಮಾರ್ಚ್‌ನಲ್ಲಿ ಸರಳವಾಗಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲಿದೆ ಎನ್ನಲಾಗುತ್ತಿದೆ. 
icon

(8 / 9)

ಸೋಷಿಯಲ್‌ ಮೀಡಿಯಾದಲ್ಲಿ ಇಣುಕಿದರೆ, ಜಗದೀಪ್‌ ಎಲ್‌ ಓರ್ವ ಫಿಟ್‌ನೆಸ್‌ ಐಕಾನ್‌. ಅಪ್ಪಟ ಆರ್‌ಸಿಬಿ ಫ್ಯಾನ್‌ ಎಂಬುದೂ ಕಾಣಸಿಗುತ್ತದೆ. 
icon

(9 / 9)

ಇತರ ಗ್ಯಾಲರಿಗಳು