Ondu Sarala Premakathe: ಕಿರುತೆರೆ ಅಂಗಳಕ್ಕೆ ಬಂತು ‘ಒಂದು ಸರಳ ಪ್ರೇಮ ಕಥೆ’; ಯಾವ ವಾಹಿನಿ, ಪ್ರಸಾರದ ಸಮಯ ಹೀಗಿದೆ
- ಫೆಬ್ರವರಿ 9ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿತ್ತು ವಿನಯ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ನ ಒಂದು ಸರಳ ಪ್ರೇಮಕಥೆ. ಅದಾದ ಬಳಿಕ ಒಟಿಟಿ ಅಂಗಳದಲ್ಲೂ ಮೆಚ್ಚುಗೆ ಗಳಿಸಿತ್ತು. ಈಗ ಇದೇ ಸಿನಿಮಾ ಟಿವಿ ಪರದೆ ಮೇಲೆ ಮೂಡಿಬರಲಿದೆ. ಹಾಗಾದರೆ, ಟಿವಿಯಲ್ಲಿ ಪ್ರಸಾರ ಯಾವಾಗ? ಇಲ್ಲಿದೆ ಮಾಹಿತಿ.

(1 / 6)
'ಒಂದು ಸರಳ ಪ್ರೇಮಕಥೆ' ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
(2 / 6)
ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು ಜನ ಕೊಂಡಾಡುತ್ತಿದ್ದಾರೆ.
(3 / 6)
ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಸಿನಿ ರಸಿಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಚಿತ್ರ ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಹ ಖುಷಿಪಟ್ಟಿದ್ದರು.
(4 / 6)
ಅದಾದ ಬಳಿಕ ಮಾರ್ಚ್ 19ರಂದು ಒಟಿಟಿಯಲ್ಲಿ ಒಂದು ಸರಳ ಪ್ರೇಮಕಥೆ ಸ್ಟ್ರೀಮಿಂಗ್ ಆರಂಭಿಸಿತ್ತು. ಆ ವೇದಿಕೆಯಲ್ಲೂ ಚಿತ್ರ ನೋಡಿ ಇಷ್ಟಪಟ್ಟಿದ್ದರು.
(5 / 6)
ಈಗ ಇದೇ ಸಿನಿಮಾ ಕಿರುತೆರೆ ಪರದೆ ಮೇಲೆ ಮಿಂಚಲು ಬರುತ್ತಿದೆ. ಇಂದು (ಏಪ್ರಿಲ್ 14) ಸ್ಟಾರ್ ಸುವರ್ಣದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಇತರ ಗ್ಯಾಲರಿಗಳು