ಕನ್ನಡ ಸುದ್ದಿ  /  Photo Gallery  /  Kantara Makes History By Becoming First Kannada Film To Win The Special Jury Award And Golden Peacock Award At Iffi Mnk

IFFI 2023: 54ನೇ ಗೋವಾ ಸಿನಿಮೋತ್ಸವದಲ್ಲಿ ಕಾಂತಾರ ಚಿತ್ರಕ್ಕೆ ಸಿಕ್ತು ಸ್ಪೆಷಲ್‌ ಅವಾರ್ಡ್‌

  • ಕಳೆದ ವರ್ಷ ಕಾಂತಾರ ಸಿನಿಮಾ ಪ್ರಚಾರಕ್ಕಾಗಿ ಗೋವಾ ಸಿನಿಮೋತ್ಸವಕ್ಕೆ ಭೇಟಿ ನೀಡಿದ್ದ ರಿಷಬ್‌, ಈ ಸಲ ಅದೇ ಸಿನಿಮಾಕ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ.

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. 
icon

(1 / 7)

16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 420 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿ ಹೊಸ ದಾಖಲೆ ಬರೆದಿತ್ತು.
icon

(2 / 7)

ಇದೇ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗುತ್ತಿದ್ದಂತೆ, ಎರಡನೇ ಭಾಗಕ್ಕೂ ಬೇಡಿಕೆ ಹೆಚ್ಚಾಗಿತ್ತು. ಅದರಂತೆ, ನ. 28ರಂದು ಚಿತ್ರದ ಮುಹೂರ್ತ ನೆರವೇರಿ, ಫಸ್ಟ್‌ ಲುಕ್‌ ಬಿಡುಗಡೆ ಆಗಿತ್ತು. 
icon

(3 / 7)

ಇದೀಗ (International Film Festival of India 2023) 54ನೇ ಐಎಫ್‌ಎಫ್‌ಐದಲ್ಲಿ ವಿಶೇಷ ಪ್ರಶಸ್ತಿಯನ್ನೂ ಪಡೆದುಕೊಂಡಿದೆ ಕಾಂತಾರ ಸಿನಿಮಾ. 
icon

(4 / 7)

ಇದೇ ಗೋವಾ ಸಿನಿಮೋತ್ಸವದಲ್ಲಿ ಕಾಂತಾರ ಚಿತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿಯೂ ಸಿಕ್ಕಿದ್ದು, ತಂಡದ ಖುಷಿಯನ್ನು ಹೆಚ್ಚಿಸಿದೆ. 
icon

(5 / 7)

ಈ ನಡುವೆ ಸಿಲ್ವರ್‌ ಪಿಕಾಕ್‌ ಅವಾರ್ಡ್‌ಗೂ ಕಾಂತಾರ ಸಿನಿಮಾ ನಾಮಿನೇಷನ್‌ ಆಗಿತ್ತು. ಅದರಂತೆ ಈ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೂ ಕಾಂತಾರ ಪಾತ್ರವಾಗಿದೆ.
icon

(6 / 7)

ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ "ಕಾಂತಾರ" ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ.
icon

(7 / 7)

ಇತರ ಗ್ಯಾಲರಿಗಳು