ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Simple Weddings: ಸಿಂಪಲ್‌ ಮದುವೆಗೆ ಸೈ ಎಂದ 8 ಬಾಲಿವುಡ್‌ ನಟಿಯರು: ಸಾಲಗೀಲ ಮಾಡ್ಕೊಂಡು ದುಬಾರಿ ಮದುವೆ ಮಾಡೋರಿಗೆ ಮಾದರಿ

Simple weddings: ಸಿಂಪಲ್‌ ಮದುವೆಗೆ ಸೈ ಎಂದ 8 ಬಾಲಿವುಡ್‌ ನಟಿಯರು: ಸಾಲಗೀಲ ಮಾಡ್ಕೊಂಡು ದುಬಾರಿ ಮದುವೆ ಮಾಡೋರಿಗೆ ಮಾದರಿ

  • ಬಾಲಿವುಡ್‌ ನಟ-ನಟಿಯರು ತಮ್ಮ ವಿವಾಹವನ್ನು ಅದ್ಧೂರಿಯಾಗಿ, ದುಂದುವೆಚ್ಚದಿಂದ ಮಾಡುತ್ತಾರೆ ಎಂದು ಸಾಕಷ್ಟು ಜನರು ಅಂದುಕೊಳ್ಳಬಹುದು. ಆದರರೆ, ಈ 8 ನಟಿಯರು ಇತರರಿಗಿಂತ ಭಿನ್ನವಾಗಿ ತಮ್ಮ ವಿವಾಹ ಕಾರ್ಯಕ್ರಮವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ತಮ್ಮ ಕಟ್ಟಡದ ಕಾಂಪೌಂಡ್‌ ಎದುರು ವಿವಾಹವಾದರು. ಮಿಸ್ ಇಂಡಿಯಾ ವಿಜೇತ-ನಟ 2021 ರಲ್ಲಿ ಉದ್ಯಮಿಯನ್ನು ವಿವಾಹವಾದರು. ಅಲಂಕಾರಕ್ಕಾಗಿ ಪರಿಸರ ಸ್ನೇಹಿ ಸುಸ್ಥಿರ ಆಯ್ಕೆಗಳನ್ನು ಮಾತ್ರ ಆರಿಸಿಕೊಂಡರು. ಮದುವೆಯಲ್ಲಿಹತ್ತಿರದ ಕುಟುಂಬ ಸದಸ್ಯರು ಮಾತ್ರ ಇದ್ದರು. 
icon

(1 / 8)

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ  ಬಾಲಿವುಡ್‌ನಲ್ಲಿ ಅತ್ಯಂತ ಸಿಂಪಲ್‌ ಆಗಿ ವಿವಾಹವಾದರು. ಯಾವುದೇ ದುಬಾರಿ ಹೋಟೆಲ್‌, ಅಥವಾ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಳ್ಳದೆ, ನವದೆಹಲಿಯ ಗುರುದ್ವಾರದಲ್ಲಿ ಸುಂದರವಾದ ಆನಂದ್ ಕರಜ್ ಸಮಾರಂಭದಲ್ಲಿ ವಿವಾಹವಾದರು. ನೇಹಾ ಬ್ಲಶ್ ಪಿಂಕ್ ಸಲ್ವಾರ್ ಕುರ್ತಾ ಧರಿಸಿದ್ದರೆ, ಅಂಗದ್ ಬಿಳಿ ಶೆರ್ವಾನಿ ಮತ್ತು ಗುಲಾಬಿ ಪಗ್ ಧರಿಸಿದ್ದರು.
icon

(2 / 8)

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2022ರಲ್ಲಿ ಮುಂಬೈನ ತಮ್ಮ ಮನೆಯಲ್ಲಿ ಅತ್ಯಂತ ಕನಿಷ್ಠ ಖರ್ಚಿನಲ್ಲಿ ವಿವಾಹವಾದರು. ತಮ್ಮ ಮನೆಯ ಬಾಲ್ಕನಿಯಲ್ಲಿ ಹಾರ ಬದಲಾಯಿಸಿಕೊಂಡರು. ವಿವಾಹಪೂರ್ವ ಕಾರ್ಯಕ್ರಮಗಳೂ ಮನೆಯಲ್ಲೇ ನಡೆದವು.
icon

(3 / 8)

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರು ಕೂಡ ಹೆಚ್ಚು ಜನರನ್ನು ಕರೆಯದೆ ಆಡಂಬರವಿಲ್ಲದೆ ವಿವಾಹವಾದರು. ತಮ್ಮ ಅರಮನೆಯಂತಹ ಮನೆಯಲ್ಲಿ ಇವರು ವಿವಾಹವಾದರು. 
icon

(4 / 8)

ಮಸಾಬಾ ಗುಪ್ತಾ 2023 ರಲ್ಲಿ ಸತ್ಯದೀಪ್ ಮಿಶ್ರಾ ಅವರನ್ನು ಸರಳ ಕಾರ್ಯಕ್ರಮದಲ್ಲಿ ವಿವಾಹವಾದರು. ಮದುವೆ ಸಮಯದಲ್ಲಿ ತಾಯಿ ನೀನಾ ಗುಪ್ತಾ ಮತ್ತು ಅವರ ತಂದೆ ವಿವಿಯನ್ ರಿಚರ್ಡ್ಸ್ ಮತ್ತಿತ್ತರರು ಮಾತ್ರ ಇದ್ದರು.
icon

(5 / 8)

ಯಾಮಿ ಗೌತಮ್ ಮತ್ತು ಆದಿತ್ಯ ಧರ್ 2022 ರಲ್ಲಿ ರಹಸ್ಯ ವಿವಾಹವಾದರು. ಅಂದರೆ, ಹಿಮಾಲಯದ ತಮ್ಮ ಊರಿನಲ್ಲಿ ಇವರು ವಿವಾಹದ ಸಂಗತಿ ಯಾರಿಗೂ ತಿಳಿಯಲಿಲ್ಲ.ನಟ ಮತ್ತು ನಿರ್ದೇಶಕರು ಯಾವುದೇ ಸೆಲೆಬ್ರಿಟಿ ಸ್ನೇಹಿತರಿಗೂ ತಿಳಿಸದೆ ವಿವಾಹವಾದರು. ಇತ್ತೀಚೆಗೆ ಈ ದಂಪತಿಗೆ ಗಂಡು ಮಗು ಜನಿಸಿದೆ. 
icon

(6 / 8)

ರಿಯಾ ಕಪೂರ್  ನಿರ್ಮಾಪಕ ಕರಣ್ ಬೂಲಾನಿ ಅವರ ಜತೆ ಮನೆಯಲ್ಲಿಯೇ ವಿವಾಹವಾದರು. ಯಾವುದೇ ಕನ್ವೆನ್ಷನ್‌ ಹಾಲ್‌ ಬುಕ್‌ ಮಾಡದೆ ಮನೆಯಲ್ಲಿಯೇ ಸಿಂಪಲ್‌ ಆಗಿ ವಿವಾಹವಾದರು.  ಹತ್ತಿರದ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.
icon

(7 / 8)

ನಟಿ ಸ್ವರಾ ಭಾಸ್ಕರ್ ಕಳೆದ ವರ್ಷ ಫೆಬ್ರವರಿಯಲ್ಲಿ ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಕಾನೂನು ಪ್ರಕಾರ ಮದುವೆ ರಿಜಿಸ್ಟ್ರೇಷನ್‌ ಮಾಡಿಕೊಂಡು ಕುಟುಂಬದ ಜತೆ ಅರತಕ್ಷತೆ ಕಾರ್ಯಕ್ರಮ ಮಾಡಿಕೊಂಡರು. ಇವರಿಗೆ ಈಗ ರಾಬಿಯಾ ಎಂಬ ಮಗಳಿದ್ದಾಳೆ. 
icon

(8 / 8)

ಇತರ ಗ್ಯಾಲರಿಗಳು