Kargil Vijay Diwas: ಸ್ಕ್ರೀನ್ ಮೇಲೆ ಕಾರ್ಗಿಲ್ ಯುದ್ಧವನ್ನು ತೋರಿಸಿದ ಬಾಲಿವುಡ್ನ 5 ಸಿನಿಮಾಗಳಿವು...
- ಇಂದು ಕಾರ್ಗಿಲ್ ವಿಜಯ ದಿವಸ. 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್‌ನಲ್ಲಿ ನಡೆದ ಯುದ್ಧದ ಗೆಲುವಿನ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಹೋರಾಟವನ್ನು ತೋರಿಸುವ ಸಿನಿಮಾಗಳು ಸಾಕಷ್ಟಿವೆ. ಈ ಪೈಕಿ ಸ್ಕ್ರೀನ್ ಮೇಲೆ ಕಾರ್ಗಿಲ್ ಯುದ್ಧವನ್ನು ಬಿಂಬಿಸಿದ ಬಾಲಿವುಡ್ನ 5 ಸಿನಿಮಾಗಳು ಯಾವುವೆಂದು ನೋಡೋಣ ಬನ್ನಿ...
- ಇಂದು ಕಾರ್ಗಿಲ್ ವಿಜಯ ದಿವಸ. 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್‌ನಲ್ಲಿ ನಡೆದ ಯುದ್ಧದ ಗೆಲುವಿನ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಹೋರಾಟವನ್ನು ತೋರಿಸುವ ಸಿನಿಮಾಗಳು ಸಾಕಷ್ಟಿವೆ. ಈ ಪೈಕಿ ಸ್ಕ್ರೀನ್ ಮೇಲೆ ಕಾರ್ಗಿಲ್ ಯುದ್ಧವನ್ನು ಬಿಂಬಿಸಿದ ಬಾಲಿವುಡ್ನ 5 ಸಿನಿಮಾಗಳು ಯಾವುವೆಂದು ನೋಡೋಣ ಬನ್ನಿ...
(1 / 6)
'ಎಲ್ಒಸಿ: ಕಾರ್ಗಿಲ್' (2003): ನಾಲ್ಕು ಗಂಟೆ ಹದಿನೈದು ನಿಮಿಷಗಳ ಬೃಹತ್ ಅವಧಿಯ ಈ ಚಿತ್ರವು ಕಾರ್ಗಿಲ್ ಯುದ್ಧವನ್ನು ಅತ್ಯಂತ ವಿವರವಾಗಿ ತೋರಿಸಿದ ಸಿನಿಮಾವಾಗಿದೆ. ಜೆಪಿ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಮೂಡಿಬಂದ ಈ ಚಿತ್ರವನ್ನು ಜೆಪಿ ದತ್ತಾ ನಿರ್ಮಿಸಿ ನಿರ್ದೇಶಿಸಿದ್ದಾರೆ. ಸಂಜಯ್ ದತ್, ಅಭಿಷೇಕ್ ಬಚ್ಚನ್, ಸುನೀಲ್ ಶೆಟ್ಟಿ, ಅಜಯ್ ದೇವಗನ್, ಸಂಜಯ್ ಕಪೂರ್, ಮನೋಜ್ ಬಾಜಪೇಯಿ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(2 / 6)
'ಟಾಂಗೋ ಚಾರ್ಲಿ' (2005): ಈ ಚಲನಚಿತ್ರವು ಪೊಲೀಸ್ ನೇಮಕಾತಿಯ ಪ್ರಯಾಣವನ್ನು ಆಧರಿಸಿದೆ ಮತ್ತು ಕಾರ್ಗಿಲ್ ಯುದ್ಧ, ಯುದ್ಧವನ್ನು ಗೆಲ್ಲಲು ಭಾರತೀಯ ಸೈನಿಕರು ಎದುರಿಸಿದ ತೊಂದರೆಗಳನ್ನು ತೋರಿಸುತ್ತದೆ. ಮಣಿಶಂಕರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಬಾಬಿ ಡಿಯೋಲ್ ನಟಿಸಿದ್ದಾರೆ.
(3 / 6)
‘ಲಕ್ಷ್ಯ’ (2004): ಫರ್ಹಾನ್ ಅಖ್ತರ್ ನಿರ್ದೇಶಿಸಿದ ಮತ್ತು ಹೃತಿಕ್ ರೋಷನ್ ನಟಿಸಿದ ಈ ಸಿನಿಮಾವು ಕಾರ್ಗಿಲ್ ಯುದ್ಧದ ಕಾಲ್ಪನಿಕ ಚಿತ್ರಣವಾಗಿದೆ. ಗುರಿಯಿಲ್ಲದ ಒರ್ವ ಯುವಕ ನಂತರ ಸೇನಾಧಿಕಾರಿಯಾಗುವ ಕಥೆ ಇದಾಗಿದೆ. ಚಿತ್ರದ ಸೆಕೆಂಡ್ ಹಾಫ್, ನಾಯಕ ಮತ್ತು ಅವರ ತಂಡವು ಪಾಕಿಸ್ತಾನಿ ಸೈನಿಕರನ್ನು ಹೇಗೆ ಸದೆಬಡಿಯುತ್ತಾರೆ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ.
(4 / 6)
'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' (2020): ಜಾನ್ವಿ ಕಪೂರ್ ಅಭಿನಯದ ಈ ಸಿನಿಮಾವು ಕಾರ್ಗಿಲ್‌ನಿಂದ ಗಾಯಗೊಂಡ ಅಧಿಕಾರಿಗಳನ್ನು ಸ್ಥಳಾಂತರಿಸಿದ ಮತ್ತು ಯುದ್ಧದ ಸಮಯದಲ್ಲಿ ಕಣ್ಗಾವಲಿಗೆ ಸಹಾಯವನ್ನು ಒದಗಿಸಿದ ಮೊದಲ ಭಾರತೀಯ ಮಹಿಳಾ ವಾಯುಪಡೆಯ ಪೈಲಟ್‌ಗಳಲ್ಲಿ ಒಬ್ಬರಾದ ಗುಂಜನ್ ಸಕ್ಸೇನಾ ಅವರ ಕಥೆಯನ್ನು ಕೇಂದ್ರೀಕರಿಸಿದೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(5 / 6)
'ಶೇರ್ ಷಾ' (2021): ಈ ಚಲನಚಿತ್ರವು ಕಾರ್ಗಿಲ್ ಯುದ್ಧದ ಸಮಯದಲ್ಲಿ ತಮ್ಮ ಶೌರ್ಯಕ್ಕಾಗಿ ಮರಣೋತ್ತರ ಪರಮವೀರ ಚಕ್ರವನ್ನು ಪಡೆದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನವನ್ನು ತೋರಿಸುತ್ತದೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ಬಾತ್ರಾ ಪಾತ್ರದಲ್ಲಿ ಮತ್ತು ಕಿಯಾರಾ ಅಡ್ವಾಣಿ ಡಿಂಪಲ್ ಚೀಮಾ (ಬಾತ್ರಾ ಪ್ರಿಯತಮೆ) ಪಾತ್ರದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು