ಮೇ 17-18ರಂದು ಸಿಂಧನೂರಿನಲ್ಲಿ 11ನೇ ಮೇ ಸಾಹಿತ್ಯ ಮೇಳ; ಸಾವಿರಾರು ಚಿಂತಕರು, ಸಾಹಿತಿಗಳು ಭಾಗಿ
ಮೇ 17 ಹಾಗೂ 18ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 11ನೇ ಮೇ ಸಾಹಿತ್ಯ ಮೇಳ ನಡೆಯಲಿದೆ. ಸಮ್ಮೇಳನಕ್ಕೆ ಅಂತಿಮ ಹಂತದ ತಯಾರಿ ನಡೆಯುತ್ತಿವೆ. 'ಅಸಮಾನ ಭಾರತ, ಸಮಾನತೆಗಾಗಿ ಸಂಘರ್ಷ' ಎಂಬ ಥೀಮ್ ಅಡಿಯಲ್ಲಿ ನಡೆಯುವ ಸಾಹಿತ್ಯ ಮೇಳದಲ್ಲಿ ಸಾವಿರಾರು ಪ್ರತಿನಿಧಿಗಳು ಭಾಗವಹಿಸಿಲಿದ್ದಾರೆ. ಅಶೋಕನ ಶಿಲಾಶಾಸನವಿರುವ ನಾಡಿಗೆ ಬರುವಂತೆ ಆಯೋಜಕರು ತಿಳಿಸಿದ್ದಾರೆ.
(1 / 7)
ಸಾವಿರಾರು ಜನ ರಾಜ್ಯ ಮತ್ತು ಹೊರರಾಜ್ಯದ ಚಿಂತಕರು, ಸಾಹಿತಿಗಳು, ಸಾಹಿತ್ಯಾಸಕ್ತರು, ಹೋರಾಟಗಾರರು, ಕಾರ್ಯಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
(3 / 7)
ಅದೇ ದಿನ ಮಧ್ಯಾಹ್ನ ರಂಗಪ್ರಸ್ತುತಿ 'ನಾ ಯಾರು' ನಡೆಯಲಿದೆ. 'ಅಸಮಾನತೆ ಮತ್ತು ಸಂಘರ್ಷ: ಹೊರಳು ನೋಟ' ವಿಷಯವಾಗಿ ಮೊದಲ ಗೋಷ್ಠಿ ನಡೆಯಲಿದೆ. ಆ ಬಳಿಕ 'ದಮನದ ಸ್ವರೂಪಗಳು' ಹಾಗೂ 'ಹೋರಾಟಗಾರ ಜೀವಗಳೊಂದಿಗೆ ಸಂವಾದ' ಗೋಷ್ಠಿಗಳು ನಡೆಯಲಿವೆ.
(4 / 7)
ಸಂಜೆಯ ನಂತರ 'ನನ್ನ ಹಾಡು ನನ್ನ ಬದುಕು' ಗೋಷ್ಠಿ ನಡೆದರೆ, ಆ ಬಳಿಕ ಕವಿಗೋಷ್ಠಿ ನಡೆಯಲಿದೆ. ಎರಡನೇ ದಿನವಾದ ಮೇ 18ರಂದು ಬೆಳಗ್ಗೆ ಎರಡನೇ ಕವಿಗೋಷ್ಠಿ ನಡೆಯಲಿದೆ.
(5 / 7)
ನಂತರ 'ಅಭಿವೃದ್ಧಿಯ ಸತ್ಯ-ಮಿಥ್ಯೆ', 'ದಮನ: ಅನುಭವವಾಗಿ', 'ಐಕ್ಯ ಚಳವಳಿ: ಯಾತಕ್ಕಾಗಿ, ಯಾರ ಜೊತೆ', ಈ ಮೂರು ಗೋಷ್ಠಿಗಳು ನಡೆಯಲಿದೆ. ಸಂಜೆ 4 ಗಂಟೆಯ ನಂತರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರಲಿದೆ.
(6 / 7)
ಕಾರ್ಯಕ್ರಮದಲ್ಲಿ ಒಟ್ಟು 8 ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸದಾಶಿವ ಸೊರಟೂರ, ಸಬೀಹ ಭೂಮಿಗೌಡ, ರಾಜಪ್ಪ ಮಾಸ್ಟರ್, ಅಂಬೂಬಾಯಿ ಮಾಳಗೆ ಸೇರಿದಂತೆ ಹಲವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
(7 / 7)
ಸಾಹಿತ್ಯ ಸಮ್ಮೇಳನದಲ್ಲಿ ಭಾರತದ ಇವತ್ತಿನ ಜನಪರ ಚಿಂತನೆಯ ಮುಖ್ಯ ಲೇಖಕರು ಹಾಗೂ ಚಿಂತಕರಾದ ಮುಂಬೈಯ ರಾಮ ಪುನಿಯಾನಿ, ಹರಿಯಾಣದ ಶಂಸುಲ್ ಇಸ್ಲಾಮ್, ಅಂಬೇಡ್ಕರ್ ವಾದಿ ದಲಿತ ಮಹಿಳಾ ಚಳವಳಿಯಲ್ಲಿ ಸಕ್ರಿಯವಾಗಿರುವ ಔರಂಗಾಬಾದ್‌ನ ಮಾಲತಿ ವರಾಳೆ, ಹೈದರಾಬಾದ್‌ನ ವೇಣುಗೋಪಾಲ, ದಾರ್ಜೀಲಿಂಗ್‌ನ ಕವಿ ಮನೋಜ ಬೋಗಾಟಿ ಅವರು ಪಾಲ್ಗೊಳ್ಳುತ್ತಿದ್ದಾರೆ. (All Photos: ಬಸೂ/Facebook)
ಇತರ ಗ್ಯಾಲರಿಗಳು