ಕರ್ನಾಟಕದ 8 ವಿಶ್ವವಿದ್ಯಾನಿಲಯಗಳಿಗೆ ಕಾಯಂ ಕುಲಪತಿಗಳು ಬೇಕಾಗಿದ್ದಾರೆ, ಬೆಂಗಳೂರು, ಧಾರವಾಡ, ಮಂಡ್ಯ , ರಾಯಚೂರು ವಿವಿಗಳಲ್ಲಿ ಪ್ರಭಾರ ಆಡಳಿತ
ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುವ ಪ್ರಮುಖ ವಿಶ್ವವಿದ್ಯಾನಿಲಯಗಳಿಗೆ ಕಾಯಂ ಕುಲಪತಿಗಳಿಲ್ಲ. ಬೆಂಗಳೂರಿನ ಎರಡು, ಧಾರವಾಡ, ಗದಗ, ವಿಜಯಪುರ, ಮಂಡ್ಯ, ರಾಯಚೂರು ವಿಶ್ವವಿದ್ಯಾನಿಲಯಗಳಿಗೆ ಇನ್ನಷ್ಟೇ ಕಾಯಂ ಕುಲಪತಿ ನೇಮಿಸಬೇಕಿದೆ.
(1 / 8)
ಬೆಂಗಳೂರಿನಲ್ಲಿ ನಾಲ್ಕು ವರ್ಷದ ಹಿಂದೆ ರೂಪುಗೊಂಡಿದ್ದ ನೃಪತುಂಗಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಶ್ರೀನಿವಾಸ ಬಳ್ಳಿ ಅವರ ಅವಧಿ ಮುಕ್ತಾಯಗೊಂಡು ಈಗ ಪ್ರೊ. ಫಜೀಹಾ ಸುಲ್ತಾನ ಹಂಗಾಮಿ ಕುಲಪತಿಯಾಗಿದ್ದಾರೆ.
(2 / 8)
ಐದು ವರ್ಷದ ಹಿಂದೆ ರೂಪುಗೊಂಡಿದ್ದ ಬೆಂಗಳೂರು ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾಯಂ ಕುಲಪತಿ ಇಲ್ಲ. ಡಾ.ಗೋಮತಿ ದೇವಿ ಅವರ ಅವಧಿ ಮುಗಿದ ನಂತರ ಇಲ್ಲಿ ಪ್ರೊ.ಉಷಾದೇವಿ ಸಿ ಹಂಗಾಮಿ ಕುಲಪತಿಯಾಗಿದ್ದಾರೆ.
(3 / 8)
ಹಳೆಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲೂ ಪೂರ್ಣಾವಧಿ ಕುಲಪತಿ ಇಲ್ಲ. ಪ್ರೊ.ಕೆ.ಬಿ.ಗುಡಸಿ ಅವರ ಅವಧಿ ಮುಗಿದ ಬಳಿಕ ಇಲ್ಲಿ ಡಾ.ಜಯಶ್ರೀ ಎಸ್. ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
(4 / 8)
ಮಂಡ್ಯ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿದ್ದ ಪ್ರೊ.ಪುಟ್ಟರಾಜು ಅವರ ಅವಧಿ ಮುಗಿದು ಈಗ ಹಂಗಾಮಿ ಕುಲಪತಿಯಾಗಿ ಪ್ರೊ.ಶಿವಚಿತ್ತಪ್ಪ ಅವರು ನಾಲ್ಕು ತಿಂಗಳಿನಿಂದ ಹಂಗಾಮಿ ಕುಲಪತಿಯಾಗಿದ್ದಾರೆ.
(5 / 8)
ರಾಯಚೂರಿನಲ್ಲೂ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಕುಲಪತಿಯಾಗಿದ್ದ ಪ್ರೊ.ಹರೀಶ್ ರಾಮಸ್ವಾಮಿ ಅವರ ಅವಧಿ ಮುಗಿದು ಈಗ ರಾಯಚೂರು ವಿಶ್ವವಿದ್ಯಾಲಯದಲ್ಲಿ ಡಾ.ಸುಯಮೀಂದ್ರ ಎಸ್.ಕುಲಕರ್ಣಿ ಪ್ರಭಾರ ಕುಲಪತಿಯಾಗಿದ್ದಾರೆ.
(6 / 8)
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಒಂದೂವರೆ ದಶಕದ ಹಿಂದೆ ಆರಂಭಗೊಂಡು ಮೂರನೇ ಕುಲಪತಿಯಾಗಿದ್ದ ಪ್ರೊ.ನಾಗೇಶ್ ಬೆಟ್ಟಕೋಟೆ ಅವಧಿ ಮುಗಿದಿದೆ. ಈಗ ಅವರ ಅವಧಿಯನ್ನು ಆರು ತಿಂಗಳವರೆಗೂ ಹಂಗಾಮಿಯಾಗಿ ಬೆಟ್ಟಕೋಟೆ ಅವರೇ ಮುಂದುವರದಿದ್ದಾರೆ.
(7 / 8)
ಗದಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಕೆಎಸ್‌ಆರ್‌ಡಿಪಿಆರ್) ವಿಶ್ವವಿದ್ಯಾನಿಲಯ ಕುಲಪತಿಯಾಗಿದ್ದ ವಿಷ್ಣುಕಾಂತ ಚಟಪಲ್ಲಿ ಅವರ ಅವಧಿ ಮುಗಿದು ಈಗ ಪ್ರೊ.ಡಾ.ಸುರೇಶ ನಾಡಗೌಡರ ಹಂಗಾಮಿ ಕುಲಪತಿಯಾಗಿದ್ದಾರೆ.
ಇತರ ಗ್ಯಾಲರಿಗಳು