Karnataka Family politics: ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲೂ ಕುಟುಂಬ ರಾಜಕಾರಣ; ಡಿಕೆಶಿ ಪುತ್ರಿ, ಬೊಮ್ಮಾಯಿ ಪುತ್ರ, ತುಕಾರಾಂ ಪತ್ನಿ
- ಕುಟುಂಬ ರಾಜಕಾರಣ ಈಗ ಎಲ್ಲಾ ಪಕ್ಷದಲ್ಲೂ ಸಾಮಾನ್ಯ. ಲೋಕಸಭೆ ಚುನಾವಣೆ ಬಳಿಕ ಈಗ ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳ ಮೂರು ಪಕ್ಷದಲ್ಲೂ ಕುಟುಂಬ ರಾಜಕಾರಣದ ನಂಟು ಇದೆ. ಟಿಕೆಟ್ ಕೇಳುವವರೂ ಕುಟುಂಬದವರೇ ಇದ್ದಾರೆ.
- ಕುಟುಂಬ ರಾಜಕಾರಣ ಈಗ ಎಲ್ಲಾ ಪಕ್ಷದಲ್ಲೂ ಸಾಮಾನ್ಯ. ಲೋಕಸಭೆ ಚುನಾವಣೆ ಬಳಿಕ ಈಗ ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳ ಮೂರು ಪಕ್ಷದಲ್ಲೂ ಕುಟುಂಬ ರಾಜಕಾರಣದ ನಂಟು ಇದೆ. ಟಿಕೆಟ್ ಕೇಳುವವರೂ ಕುಟುಂಬದವರೇ ಇದ್ದಾರೆ.
(1 / 8)
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜಕೀಯ ಪಕ್ಷಗಳ ಕುಟುಂಬದವರ ಹೆಸರು ಕೇಳಿ ಬಂದಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿಸಿಎಂ ಡಿಕೆಶಿ ಅವರ ಪುತ್ರಿ ಐಶ್ವರ್ಯ ಹೆಗ್ಡೆ,ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ, ಸಂಡೂರರಿನಲ್ಲಿ ಕಾಂಗ್ರೆಸ್‌ನಿಂದ ಸಂಸದ ತುಕಾರಾಂ ಪುತ್ರಿ ಸೌಪರ್ಣಿಕಾ( ಚೈತನ್ಯ) ಹೆಸರು ಚಾಲ್ತಿಯಲ್ಲಿದೆ.
(2 / 8)
ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪುತ್ರಿ, ಯುವ ಉದ್ಯಮಿಯಾಗಿರುವ ಐಶ್ವರ್ಯ ಹೆಗ್ಡೆ ಅವರ ಹೆಸರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕೇಳಿ ಬಂದಿದೆ, ಐಶ್ವರ್ಯ ಆಗಾಗ ಕ್ಷೇತ್ರ ಪ್ರವಾಸ ಕೂಡ ಮಾಡಿ ಬಂದಿದ್ದಾರೆ.
(3 / 8)
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ಹಾಗೂ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ನಿಖಿಲ್ ಇಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷಿಸುವ ಸಾಧ್ಯತೆಯಿದೆ.
(4 / 8)
ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಹೆಸರು ಕಾಂಗ್ರೆಸ್ ಪಟ್ಟಿಯಲ್ಲಿ ಪ್ರಬಲವಾಗಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದವರಿಗೆ ಇಲ್ಲಿಂದ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದಾರೆ.
(5 / 8)
ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಡದೇ ಇರುವ ಸನ್ನಿವೇಶ ಎದುರಾದರೆ ಕುಮಾರಸ್ವಾಮಿ ಅವರ ಪತ್ನಿ,ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲೂ ಬಹುದು. ಮಧುಗಿರಿ, ರಾಮನಗರದಿಂದ ಶಾಸಕರಾಗಿದ್ದ ಅನಿತಾ ಅವರು ಹತ್ತು ವರ್ಷದ ಹಿಂದೆ ಚನ್ನಪಟ್ಟಣ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
(6 / 8)
ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ಮಾಜಿ ಸಿಎಂ ಹಾಗೂ ಹಾವೇರಿ ಗದಗ ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ, ಯುವ ಉದ್ಯಮಿ ಭರತ್ ಬೊಮ್ಮಾಯಿ ಪರ ಬಿಜೆಪಿ ಟಿಕೆಟ್‌ಎ ಬ್ಯಾಟ್ ಬೀಸಿದ್ದಾರೆ. ಭರತ್‌ಗೆ ಟಿಕೆಟ್ ಸಿಕ್ಕರೆ ಎಸ್.ಆರ್.ಬೊಮ್ಮಾಯಿ, ಬಿ.ಎಸ್.ಬೊಮ್ಮಾಯಿ ಅವರ ನಂತರ ಮೂರನೇ ತಲೆಮಾರಿನ ಸದಸ್ಯ ರಾಜಕಾರಣ ಪ್ರವೇಶಿಸಿದಂತಾಗಲಿದೆ.
(7 / 8)
ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಅವರ ಹೆಸರು ಕೇಳಿ ಬಂದಿದೆ. ಈ ಹಿಂದೆ ನಾಲ್ಕು ಬಾರಿ ತುಕಾರಾಂ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.
ಇತರ ಗ್ಯಾಲರಿಗಳು