ಕರ್ನಾಟಕ ಬಂದ್‌ಗೆ ಸಿಗದ ನಿರೀಕ್ಷಿತ ಬೆಂಬಲ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ಯಾವ ಊರಲ್ಲಿ ಪ್ರತಿಕ್ರಿಯೆ ಹೇಗಿತ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕ ಬಂದ್‌ಗೆ ಸಿಗದ ನಿರೀಕ್ಷಿತ ಬೆಂಬಲ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ಯಾವ ಊರಲ್ಲಿ ಪ್ರತಿಕ್ರಿಯೆ ಹೇಗಿತ್ತು

ಕರ್ನಾಟಕ ಬಂದ್‌ಗೆ ಸಿಗದ ನಿರೀಕ್ಷಿತ ಬೆಂಬಲ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ಯಾವ ಊರಲ್ಲಿ ಪ್ರತಿಕ್ರಿಯೆ ಹೇಗಿತ್ತು

  • Karnataka Bandh: ಕರ್ನಾಟಕದಲ್ಲಿ ಶನಿವಾರ ಕರೆಯಲಾಗಿದ್ದ ಬಂದ್‌ಗೆ ಬಹುತೇಕ ಬೆಂಗಳೂರು,ಮಂಗಳೂರು ಸಹಿತ ಪ್ರಮುಖ ಊರುಗಳಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಎಲ್ಲೆಡೆ ಪ್ರತಿಭಟನೆಗಳು ನಡೆದವು.

ಮೈಸೂರು ಪ್ರವಾಸಿಗರ ನಗರಿ. ವಾರಾಂತ್ಯ ರಜೆ ಇದ್ದುದರಿಂದ ಪ್ರವಾಸಿಗರು ಅರಮನೆಗೆ ಆಗಮಿಸಿದರೂ ಸಂಖ್ಯೆ ಕೊಂಚ ಕಡಿಮೆಯೇ ಇತ್ತು.
icon

(1 / 13)

(Sriram)

ಬೆಂಗಳೂರಿನಲ್ಲಿ ಟೌನ್‌ ಹಾಲ್‌ ವೇಳೆ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾರಾ ಗೋವಿಂದು ಮತ್ತಿತರರು ಪೊಲೀಸರು ಬಂಧಿಸಿದರು.
icon

(2 / 13)

(Asianet Suvarna)

ಚಿಕ್ಕಮಗಳೂರಿನ ಬಸ್‌ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರ ಹಾಕಿದರು.
icon

(3 / 13)

(prajavani)

ಬೆಳಗಾವಿಯ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
icon

(4 / 13)

ರಾಯಚೂರಿನಲ್ಲಿ ಬಂದ್‌ಗೆ ನಿರೀಕ್ಷಿತ ಬೆಂಬಲ ಇರಲಿಲ್ಲ.ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆ ಇತ್ತು.
icon

(5 / 13)

ಮಂಗಳೂರು ನಗರದಲ್ಲಿ ಬಂದ್‌ನ ಬಿಸಿ ಇರಲಿಲ್ಲ.ಬೆಳಿಗ್ಗೆಯಿಂದಲೇ ನಗರದಲ್ಲಿ ವಾಹನ ಸಂಚಾರ ಯಥಾರೀತಿಯಾಗಿತ್ತು.
icon

(6 / 13)

(The Hindu)

ಬೆಂಗಳೂರು ನಗರದಲ್ಲಿ ಬಂದ್‌ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನಿಂದಲೇ ಭಾರೀ ಪೊಲೀಸ್‌ ಭದ್ರತೆ ಹಾಕಲಾಗಿತ್ತು.
icon

(7 / 13)

ಬೆಂಗಳೂರಿನ ಟೌನ್‌ ಹಾಲ್‌ ಬಳಿ ಹೋರಾಟ ನಡೆಸಿದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
icon

(8 / 13)

(Sudhakar Jain)

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಬಂದ್‌ಗೆ ಪೊಲೀಸ್‌ ಭದ್ರತೆಯನ್ನು ಹಾಕಲಾಗಿತ್ತು.
icon

(9 / 13)

ಉತ್ತರ ಕರ್ನಾಟಕದ ಕೇಂದ್ರವಾದ ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮನ ವೃತ್ತದಲ್ಲಿ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
icon

(10 / 13)

ಬಳ್ಳಾರಿ ನಗರದ ಪ್ರಮುಖ ವೃತ್ತದ ಭಾಗದಲ್ಲಿ ಬಂದ್‌ಗೆ ಬೆಂಬಲ ಇರದೇ ವಾಹನ ಸಂಚಾರ ಯಥಾರೀತಿಯಾಗಿತ್ತು.
icon

(11 / 13)

ಬಳ್ಳಾರಿ ನಗರದ ಪ್ರಮುಖ ವೃತ್ತದ ಭಾಗದಲ್ಲಿ ಬಂದ್‌ಗೆ ಬೆಂಬಲ ಇರದೇ ವಾಹನ ಸಂಚಾರ ಯಥಾರೀತಿಯಾಗಿತ್ತು.

ಕರ್ನಾಟಕದ ಗಡಿ ಜಿಲ್ಲೆ ಬೀಧರ್‌ ಬಸ್‌ ನಿಲ್ದಾನದಲ್ಲಿ ಪ್ರಯಾಣಿಕರ ಸಂಚಾರ ದಿನದಂತೆಯೇ ಇರುವುದು ಕಂಡು ಬಂದಿತು.
icon

(12 / 13)

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ಶನಿವಾರದ ಬಂದ್‌ ದಿನವೂ ಸಂಚರಿಸಿದವು.
icon

(13 / 13)

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ಶನಿವಾರದ ಬಂದ್‌ ದಿನವೂ ಸಂಚರಿಸಿದವು.
(south first)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು