ಬೆಂಗಳೂರು: ಲಾರಿ ಪಲ್ಟಿ, ಬಿಎಂಟಿಸಿ ಬಸ್ ಕೆಟ್ಟು ನಿಂತು ನಿಧಾನಗತಿಯ ಸಂಚಾರ, ಇತ್ತೀಚಿನ 4 ಸಂಚಾರ ಸಲಹೆಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು: ಲಾರಿ ಪಲ್ಟಿ, ಬಿಎಂಟಿಸಿ ಬಸ್ ಕೆಟ್ಟು ನಿಂತು ನಿಧಾನಗತಿಯ ಸಂಚಾರ, ಇತ್ತೀಚಿನ 4 ಸಂಚಾರ ಸಲಹೆಗಳು ಹೀಗಿವೆ

ಬೆಂಗಳೂರು: ಲಾರಿ ಪಲ್ಟಿ, ಬಿಎಂಟಿಸಿ ಬಸ್ ಕೆಟ್ಟು ನಿಂತು ನಿಧಾನಗತಿಯ ಸಂಚಾರ, ಇತ್ತೀಚಿನ 4 ಸಂಚಾರ ಸಲಹೆಗಳು ಹೀಗಿವೆ

ಬೆಂಗಳೂರು ಮಹಾನಗರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಅಲ್ಲಲ್ಲಿ ಮರ ಬಿದ್ದು, ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಇಂದು (ಮೇ 10) ಲಾರಿ ಪಲ್ಟಿಯಾಗಿ, ಬಿಎಂಟಿಸಿ ಬಸ್ ಕೆಟ್ಟು ನಿಂತು ಒಂದೆರಡು ಕಡೆ ನಿಧಾನಗತಿಯ ಸಂಚಾರವಿದೆ. ಇತ್ತೀಚಿನ 4 ಸಂಚಾರ ಸಲಹೆಗಳು ಹೀಗಿವೆ. 

ಬೆಂಗಳೂರು ಮಹಾನಗರದ ನಾಲ್ಕು ಬೇರೆ ಬೇರೆ ಕಡೆಗಳಲ್ಲಿ ಇಂದು (ಮೇ 10) ಬೇರೆ ಬೇರೆ ಕಾರಣಗಳಿಗೆ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಒಂದೆಡೆ ಲಾರಿ ಕೆಟ್ಟು ನಿಂತಿದ್ದರೆ, ಇನ್ನೊಂದೆಡೆ ಮಳೆ ನೀರು, ಮತ್ತೊಂದು ಕಡೆ ಲಾರಿ ಪಲ್ಟಿಯಾಗಿದೆ. ಮಗದೊಂದು ಕಡೆ ಬಿಎಂಟಿಸಿ ಬಸ್ ಕೆಟ್ಟು ನಿಂತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
icon

(1 / 5)

ಬೆಂಗಳೂರು ಸಂಚಾರ ಸಲಹೆ 1 ಮಾರತಹಳ್ಳಿ ಮೇಲ್ಸೇತುವೆ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದು, ಕಾಡುಬೀಸನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
icon

(2 / 5)

ಬೆಂಗಳೂರು ಸಂಚಾರ ಸಲಹೆ 2: ಜೈಮುನಿ ರಾವ್ ವೃತ್ತದ ಬಳಿ ನೀರು ನಿಂತಿರುವುದರಿಂದ, ವೀರೇಶ್ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
icon

(3 / 5)

ಬೆಂಗಳೂರು ಸಂಚಾರ ಸಲಹೆ 3 : ಔಟರ್ ರಿಂಗ್ ರೋಡ್ ರಾಮಮೂರ್ತಿನಗರ ಕಡೆಯಿಂದ ಹೆಬ್ಬಾಳ ಕಡೆಗೆ ಹೋಗುವ ಮಾರ್ಗದಲ್ಲಿ ರಿಂಗ್ ರಸ್ತೆಯ ಹೊರಮಾವು ನಂದಿ ಟೊಯೋಟಾ ಶೋರೂಮ್ ಹತ್ತಿರ ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದಿರುವುದರಿಂದ ಹೆಬ್ಬಾಳ ಕಡೆಗೆ ಸಂಚಾರ ನಿಧಾನಗತಿಯಲ್ಲಿರುತ್ತದೆ ಎಂದು ಕೆ ಆರ್‌ ಪುರ ಸಂಚಾರ ಪೊಲೀಸರು ತಿಳಿಸಿದ್ದಾರೆ.
icon

(4 / 5)

ಬೆಂಗಳೂರು ಸಂಚಾರ ಸಲಹೆ 4:  ಎಂ.ಎಂ.ಟಿ ಜಂಕ್ಷನ್ ಕಡೆಯಿಂದ ಕೆ.ಆರ್. ಪುರ ರೈಲು ನಿಲ್ದಾಣ, ವೈಟ್‌ಫೀಲ್ಡ್‌, ಮಹದೇವಪುರ ಕಡೆಗೆ ಹೋಗುವ ಮಾರ್ಗದಲ್ಲಿ ಬಿಎಂಟಿಸಿ ಬಸ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿರುವುದರಿಂದ ವೈಟ್‌ಫೀಲ್ಡ್‌, ಮಹದೇವಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುವುದಾಗಿ ಕೆಆರ್ ಪುರ ಸಂಚಾರ ಪೊಲೀಸರು ತಿಳಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು