ಕರ್ನಾಟಕ ಬಜೆಟ್ 2024; ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸಿಕ್ಕ ಅನುದಾನವೆಷ್ಟು; ಇಲ್ಲಿದೆ ಒಂದು ಕಿರುನೋಟ
ಕರ್ನಾಟಕ ಬಜೆಟ್ 2024: ಫೆ.16 ರಂದು ಕರ್ನಾಟಕ ಬಜೆಟ್ ಮಂಡನೆಯಾಗಲಿದೆ. ಈ ನಡುವೆ, ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸಿಕ್ಕ ಅನುದಾನವೆಷ್ಟು?, ಇಲ್ಲಿದೆ ಒಂದು ಕಿರುನೋಟ.
(1 / 7)
ಕರ್ನಾಟಕ ಬಜೆಟ್ 2024 ಮಂಡನೆಗೆ ಇಂದು ಬಿಟ್ಟರೆ ಇನ್ನೊಂದು ದಿನ ಬಾಕಿ ಇದೆ. ಈ ಹೊತ್ತಿನಲ್ಲಿ ವಿಧಾನಸಭಾ ಚುನಾವಣೆ ಬಳಿಕ ಮಂಡನೆಯಾದ ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸರ್ಕಾರ ಮೀಸಲಿಟ್ಟ ಅನುದಾನ ಮತ್ತು ವಿವರಗಳ ಕಿರುನೋಟ ಹೀಗಿದೆ ನೋಡಿ.
(2 / 7)
ಕರ್ನಾಟಕ ಬಜೆಟ್ 2023: ಗೃಹಜ್ಯೋತಿ ಯೋಜನೆಗೆ ವಾರ್ಷಿಕ 13,910 ಕೋಟಿ ರೂಪಾಯಿ ವೆಚ್ಚ. 2 ಕೋಟಿಗೂ ಹೆಚ್ಚು ಗೃಹ ಬಳಕೆದಾರರು.
(3 / 7)
ಕರ್ನಾಟಕ ಬಜೆಟ್ 2023: ಗೃಹಲಕ್ಷ್ಮಿ ಯೋಜನೆ- ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ ನೀಡುವ ಯೋಜನೆ. ವಾರ್ಷಿಕ 30,000 ಕೋಟಿ ವೆಚ್ಚ ಅಂದಾಜು. 1.30 ಕೋಟಿ ಮಹಿಳೆಯರು ಇದರ ಫಲಾನುಭವಿಗಳು.
(4 / 7)
ಸುದ್ದಿ ಫಟಾಫಟ್ ಅಪ್ಡೇಟ್ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(5 / 7)
ಕರ್ನಾಟಕ ಬಜೆಟ್ 2023: ಶಕ್ತಿ ಯೋಜನೆ - ಇದು ಆಯ್ದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಲು ಅವಕಾಶ ಒದಗಿಸುವಂಥ ಯೋಜನೆ. ನಿತ್ಯವೂ 50-60 ಲಕ್ಷ ಫಲಾನುಭವಿಗಳು. ವಾರ್ಷಿಕ 4,000 ಕೋಟಿ ರೂಪಾಯಿ ವೆಚ್ಚ.
(6 / 7)
ಕರ್ನಾಟಕ ಬಜೆಟ್ 2023: ಯುವನಿಧಿ ಯೋಜನೆಯಲ್ಲಿ ಪದವೀಧರರಿಗೆ 3,000 ರೂಪಾಯಿ, ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ. 3.7 ಲಕ್ಷ ಯುವಜನರಿಗೆ ಪ್ರಯೋಜನ.
ಇತರ ಗ್ಯಾಲರಿಗಳು