ಸಚಿವ ಸಂಪುಟದಲ್ಲಿ ವಿಜಯಪುರಕ್ಕೆ ಬಂಪರ್ ನಿರ್ಣಯ, ಆಲಮಟ್ಟಿ ಕುಡಿಯುವ ನೀರಿನ ಮಾರ್ಗದ ಪೈಪ್‌ಲೈನ್ ಬದಲಾವಣೆ, 50 ಕೋಟಿ ರೂ.ವೆಚ್ಚ
- ಬರದ ನಾಡು ಎಂದೇ ಹೆಸರಾದ ವಿಜಯಪುರ ಜಿಲ್ಲೆಯ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದರಲ್ಲಿ ವಿಜಯಪುರ ನಗರ ನೀರು ಸರಬರಾಜು ಪೈಪ್‌ಲೈನ್ ಬದಲಾವಣೆಯೂ ಸೇರಿದೆ.
- ಬರದ ನಾಡು ಎಂದೇ ಹೆಸರಾದ ವಿಜಯಪುರ ಜಿಲ್ಲೆಯ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದರಲ್ಲಿ ವಿಜಯಪುರ ನಗರ ನೀರು ಸರಬರಾಜು ಪೈಪ್‌ಲೈನ್ ಬದಲಾವಣೆಯೂ ಸೇರಿದೆ.
(2 / 6)
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ರಾಜ್ಯದ ಪ್ರಮುಖ ಜಲಾಶಯಗಳನ್ನು ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ವಿಶೇಷ ಒತ್ತು ಕೊಟ್ಟು ನಿರ್ವಹಣೆ ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಸಚಿವ ಸಂಪುಟ ಅನುಮೋದಿಸಿದೆ
(3 / 6)
ಮುಖ್ಯವಾಗಿ ವಿಜಯಪುರ ನಗರಕ್ಕೆ ಆಲಮಟ್ಟಿಯಿಂದ ಸುಸೂತ್ರವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಗಳಲ್ಲಿ ಭಾರೀ ಬದಲಾವಣೆ ಮಾಡುವುದಕ್ಕೂ ಒಪ್ಪಿಗೆ ಕೊಡಲಾಗಿದೆ.
(4 / 6)
ವಿಜಯಪುರ ಜಿಲ್ಲೆಯಲ್ಲಿ ವಿಯಜಪುರ ನಗರಕ್ಕೆ ಆಲಮಟ್ಟಿಯಿಂದ ಪಿಎಸ್‌ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ 50.13 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
(5 / 6)
ವಿಜಯಪುರ ಸೇರಿದಂತೆ ಕುಡಿಯುವ ನೀರಿಗೆ ಆಗುವ ಸಮಸ್ಯೆಗಳ ಕುರಿತಂತೆ ಹಾಗೂ ಜಲಾಶಯಗಳಿಂದ ನೀರು ಬಿಡುಗಡೆ ನಿರ್ವಹಣೆ ಮಾಡಲು ಸಮಿತಿಯು ವಿವರಗಳನ್ನು ಪರಿಶೀಲಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ
ಇತರ ಗ್ಯಾಲರಿಗಳು