ಸಿಬಿಐ ನಿರ್ದೇಶಕರಾಗಿ ಪ್ರವೀಣ್‌ ಸೂದ್‌ಗೆ ಒಂದು ವರ್ಷ ವಿಸ್ತರಣೆ: ಐಪಿಎಸ್‌ ಅಧಿಕಾರಿಯಾಗಿ ಸುದೀರ್ಘ 40 ವರ್ಷ ಸೇವೆ ದಾಖಲೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಬಿಐ ನಿರ್ದೇಶಕರಾಗಿ ಪ್ರವೀಣ್‌ ಸೂದ್‌ಗೆ ಒಂದು ವರ್ಷ ವಿಸ್ತರಣೆ: ಐಪಿಎಸ್‌ ಅಧಿಕಾರಿಯಾಗಿ ಸುದೀರ್ಘ 40 ವರ್ಷ ಸೇವೆ ದಾಖಲೆ

ಸಿಬಿಐ ನಿರ್ದೇಶಕರಾಗಿ ಪ್ರವೀಣ್‌ ಸೂದ್‌ಗೆ ಒಂದು ವರ್ಷ ವಿಸ್ತರಣೆ: ಐಪಿಎಸ್‌ ಅಧಿಕಾರಿಯಾಗಿ ಸುದೀರ್ಘ 40 ವರ್ಷ ಸೇವೆ ದಾಖಲೆ

ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ಪ್ರವೀಣ್‌ ಸೂದ್‌ ಅವರು ಸದ್ಯ ಸಿಬಿಐ ನಿರ್ದೇಶಕರಾಗಿದ್ದು ಅವರ ಸೇವೆಯನ್ನು ಇನ್ನು ಒಂದು ವರ್ಷ ಕಾಲ ವಿಸ್ತರಣೆ ಮಾಡಲಾಗಿದೆ.

ಕರ್ನಾಟಕ ಕೇಡರ್‌ನ 1986 ನೇ ಬ್ಯಾಚ್‌ನ ಅಧಿಕಾರಿಯಾದ ಪ್ರವೀಣ್‌ ಸೂದ್‌ ಅವರು ಸಿಬಿಐ ನಿರ್ದೇಶಕರಾಗಿ ಇನ್ನೂ ಒಂದು ವರ್ಷ ಮುಂದುವರಿಯಲಿದ್ದಾರೆ.
icon

(1 / 9)

22 ವರ್ಷಕ್ಕೆ ಐಪಿಎಸ್‌ ಅಧಿಕಾರಿಯಾಗಿ ನೇಮಕಗೊಂಡು ಕರ್ನಾಟಕದ ನಂಜನಗೂಡು, ಬಳ್ಳಾರಿ, ಮೈಸೂರು. ಬೆಂಗಳೂರು ಸಹಿತ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದವರು ಪ್ರವೀಣ್‌ ಸೂದ್‌.
icon

(2 / 9)

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅವರನ್ನು ಡಿಜಿಪಿ ಹುದ್ದೆಗೆ ನಿಯೋಜನೆ ಮಾಡಲಾಗಿತ್ತು. ಮೂರು ವರ್ಷ ಕಾಲ ಡಿಜಿಪಿಯಾಗಿದ್ದರು.
icon

(3 / 9)

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುತ್ತಲೇ ಅವರು ಕೇಂದ್ರ ಸೇವೆಗೆ ತೆರಳುವ ನಿರ್ಧಾರ ಮಾಡಿದ್ದರು. ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.
icon

(4 / 9)

ಈ ಹಿಂದೆ ಅವರು ಸಿಬಿಐನಲ್ಲಿ ಕೆಲಸ ಮಾಡದೇ ಇದ್ದರೂ ಕರ್ನಾಟಕದಲ್ಲಿ ಹೆಚ್ಚು ವರ್ಷ ವಿಚಕ್ಷಣಾ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಸಿಬಿಐನ ಉನ್ನತ ಹುದ್ದೆಗೆ ನಿಯೋಜಿಸಲಾಗಿತ್ತು.
icon

(5 / 9)

ಸಿಬಿಐ ನಿರ್ದೇಶಕರಾಗಿ ಅವರ ಅವಧಿ ಈಗ ಮುಗಿಯಬೇಕಾಗಿತ್ತಾದರೂ ಎರಡು ವರ್ಷ ವಿವಾದವಿಲ್ಲದೇ ಕೆಲಸ ಮಾಡಿದ್ದಾರೆ ಎನ್ನುವ ಕಾರಣದಿಂದ ಸೇವೆಯನ್ನು ಈಗ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ.
icon

(6 / 9)

ಇನ್ನೂ ವರ್ಷದ ಅವಧಿಯನ್ನೂ ಸೇರಿದಂತೆ ಪ್ರವೀಣ್‌ ಸೂದ್‌ ಅವರು ಪೊಲೀಸ್‌ ಇಲಾಖೆಯಲ್ಲಿಯೇ ನಾಲ್ಕು ದಶಕ ಕೆಲಸ ಮಾಡಿದ ಹಾಗಾಗಲಿದೆ. ಐಪಿಎಸ್‌ ಅಧಿಕಾರಿಯಾಗಿ ನಲವತ್ತು ಕೆಲಸ ಮಾಡಿದ ದಾಖಲೆಯೂ ಆಗಲಿದೆ.
icon

(7 / 9)

ಪ್ರವೀಣ್‌ ಸೂದ್‌ ಅವರ ನೃತ್ಯದಲ್ಲೂ ಸಿದ್ದಹಸ್ತರು. ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿದ್ದಾಗ ಸಾಲ್ಸಾ ನೃತ್ಯವನ್ನು ಕಲಿತಿದ್ದರು. ಸಂಚಾರ ವಿಭಾಗದಲ್ಲಿ ವಿಶೇಷ ಅನುಭವ ಹೊಂದಿದ್ದು ಸುಧಾರಣೆಗೆ ಪ್ರಯತ್ನಿಸಿದ್ದರು.
icon

(8 / 9)

ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿದ್ದಾಗ ಪಾಕಿಸ್ತಾನ ಮೂಲದ ಇಬ್ಬರು ಉಗ್ರರ ಸೆರೆ ಹಿಡಿಯಲು ಇವರೇ ನೇತೃತ್ವ ವಹಿಸಿ ಕೆಲಸ ಮಾಡಿದ್ದರು.
icon

(9 / 9)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು