ಐಪಿಎಸ್ ರಂಗನಟ: ಮೂರು ದಶಕ ಕರ್ನಾಟಕ ಪೊಲೀಸ್ ಅಧಿಕಾರಿಯಾಗಿ ನಿವೃತ್ತಿ; ಶುರುವಾಗಿದೆ ರಂಗಕಲಾವಿದರ ಪ್ರವೃತ್ತಿ, ಕಾಯ್ಕಿಣಿ ನಾಟಕದಲ್ಲಿ ಅಭಿನಯ
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾದರೂ ಪ್ರವೃತ್ತಿಯಲ್ಲಿ ವಿಭಿನ್ನ ಕಲಾ ಪ್ರತಿಭೆ ಹೊಂದಿರುವವರು ಕರ್ನಾಟಕದಲ್ಲಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕೆಲಸ ಮಾಡಿದ ಗೋಪಾಲ್ ಹೊಸೂರ್ ಅವರೂ ನಾಟಕದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.
(1 / 7)
ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ದಕ್ಷತೆಯಿಂದಲೇ ಹೆಸರು ಮಾಡಿದ್ದ ಗೋಪಾಲ್ ಹೊಸೂರ್ ಅವರ ಹೆಸರನ್ನು ನೀವು ಕೇಳಿರಬಹುದು. ಅವರೀಗ ನಾಟಕವೊಂದರಲ್ಲಿ ಅಭಿನಯಿಸಿ ತಮ್ಮ ಕಲಾವಂತಿಕೆಯನ್ನೂ ಮರೆದಿದ್ದಾರೆ.
(2 / 7)
ಗೋಪಾಲ್ ಹೊಸೂರು ಅವರು ಅಂದು ವೀರಪ್ಪನ್ ಕಾರ್ಯಾಚರಣೆಯ ಹೊತ್ತಿನಲ್ಲಿ ಗುಂಡೇಟು ತಿಂದರೂ ಎದೆಗುಂದದೆ ಬದುಕುಳಿದು ಪೊಲೀಸ್ ಇಲಾಖೆಯ ಮುಖ್ಯ ಹುದ್ದೆಗಳಲ್ಲಿ ಸೇವೆಸಲ್ಲಿಸಿ,2013 ರಲ್ಲಿ ರಾಜ್ಯಗುಪ್ತದಳ ಇಲಾಖೆಯನ್ನು ಮುನ್ನಡೆಸಿ ನಿವೃತ್ತಿಹೊಂದಿದವರು.
(3 / 7)
ಕಾರಾಗೃಹ ಇಲಾಖೆಯ ಐಜಿಪಿಯಾಗಿದ್ದಾಗ ಗೋಪಾಲ್ ಹೊಸೂರ್ ಅವರು ಕೈದಿಗಳಲ್ಲೂ ರಂಗ ಕಲಾವಿದರು ಇರುವುದನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದರು. ಈಗ ಅವರೇ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಜತೆಗಿರುವನು ಚಂದಿರ ನಾಟಕದಲ್ಲಿ ಖಾಜಿಯ ಪಾತ್ರದಲ್ಲಿ ಕಾಣಿಸಿಕೊಂಡರು.
(4 / 7)
ಗೋಪಾಲ್ ಹೊಸೂರ್ ಅವರು ಹಲವು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದವರು. ಹಲವು ಸಿಎಂಗಳ ಕಾಲದಲ್ಲಿ ಗುಪ್ತಚರ ಇಲಾಖೆಯನ್ನು ನಿಭಾಯಿಸಿ ವಿಶ್ವಾಸ ಪಡೆದವರು. ಪೊಲೀಸ್ ವೃತ್ತಿಯಾಚೆಗೂ ಒಳ್ಳೆಯದನ್ನು ಬೆಂಬಲಿಸುತ್ತಾ ಬಂದವರು.
(5 / 7)
ಮೈಸೂರಿನಲ್ಲಿ ಖ್ಯಾತ ಕಲಾವಿದ, ರಂಗಾಯಣದಲ್ಲಿದ್ದ ಹುಲುಗಪ್ಪ ಕಟ್ಟಿಮನಿ ಅವರು ಸಂಕಲ್ಪ ಎನ್ನುವ ತಂಡ ಕಟ್ಟಿಕೊಂಡು ಬರೀ ಕೈದಿಗಳಿಗೆ ನಾಟಕವನ್ನು ಮಾಡಲು ಮುಂದಾದಾಗ ಬೆನ್ನಿಗೆ ನಿಂತವರು ಗೋಪಾಲ್ ಹೊಸೂರ್ ಅವರೇ.
(6 / 7)
ಎಂತದೋ ಸನ್ನಿವೇಶದಲ್ಲಿ ಅಪರಾಧವೆಸಗಿ ಜೈಲು ಸೇರಿದ ಹಲವರಲ್ಲಿ ಕಲಾವಿದನೂ ಇರುತ್ತಾನೆ ಎನ್ನುವ ಆಶಯದೊಂದಿಗೆ ಜೈಲುಹಕ್ಕಿಗಳ ರಂಗಯಾನವನ್ನು ಹುಲುಗಪ್ಪ ಕಟ್ಟಿಮನಿ ಆರಂಭಿಸಿದಾಗ ಇದು ಯಶಸ್ವಿಗೊಳ್ಳಲು ಬೆಂಬಲಕ್ಕೆ ನಿಂತವರೇ ಗೋಪಾಲ್ ಹೊಸೂರು.
ಇತರ ಗ್ಯಾಲರಿಗಳು