ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ; ವಿವಾದಗಳಲ್ಲೇ ಮುಳುಗಿದ, ಪ್ರಮುಖ ಜಿಲ್ಲೆಗಳಿಗೂ ಭೇಟಿ ಕೊಡದ ಸಿದ್ದರಾಮಯ್ಯ ಸಂಪುಟದ 10 ಸಚಿವರಿವರು
ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ತಮ್ಮ ಜಿಲ್ಲೆಗೆ ಸೀಮಿತವಾದ ಕೆಲವು ಸಚಿವರಿದ್ದಾರೆ. ಇನ್ನು ಕೆಲವರು ಇಲಾಖೆಗಿಂತ ವಿವಾದಗಳ ಮೂಲಕವೇ ಗಮನ ಸೆಳೆದಿದ್ದಾರೆ. ಅಂತಹ ಸಚಿವರ ಪಟ್ಟಿ ಇಲ್ಲಿದೆ.
(1 / 10)
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಎರಡನೇ ಬಾರಿಗೆ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಈ ಬಾರಿ ವಿವಾದದ ಹೇಳಿಕೆಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಎರಡು ಪ್ರಮುಖ ಖಾತೆ ಜತೆಗೆ ಕಲಬುರಗಿ ಉಸ್ತುವಾರಿ ಸಚಿವ ಸ್ಥಾನ ಹೊಂದಿದ್ದರೂ ನಿರೀಕ್ಷೆಯಷ್ಟು ಕೆಲಸ ಮಾಡಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
(2 / 10)
ಹಿರಿಯ ನಾಯಕ ಕೆ.ಎನ್.ರಾಜಣ್ಣ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಸಹಕಾರ ಇಲಾಖೆ ಜತೆಗೆ ಹಾಸನ ಉಸ್ತುವಾರಿ ಸಚಿವರೂ ಹೌದು. ಎರಡು ವರ್ಷದಲ್ಲಿ ಅವರು ಇಲಾಖೆಗಿಂತ ರಾಜಕೀಯ ಹೇಳಿಕೆಗಳ ಮೂಲಕವೇ ಸುದ್ದಿಯಾದವರು, ಹಿರಿಯ ಸಹಕಾರಿಯಾದರೂ ಸಹಕಾರಿ ಇಲಾಖೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಿಲ್ಲ ಎನ್ನುವ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿದೆ.
(3 / 10)
ಸಿದ್ದರಾಮಯ್ಯ ಸಂಪುಟ ಅತ್ಯಂತ ಹಿರಿಯ ಶಾಸಕರಲ್ಲಿ ಒಬ್ಬರಾದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್ ಅವರು ಎರಡನೇ ಬಾರಿ ಸಚಿವ. ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾಗಿ ಬೆಂಗಳೂರು, ಮೈಸೂರಿಗೆ ಸೀಮಿತರಾದರು. ಕರ್ನಾಟಕದ ಹಲವು ಜಿಲ್ಲೆಗಳಿಗೆ ಈವರೆಗೂ ಭೇಟಿಯನ್ನೇ ನೀಡಿಲ್ಲ ಎನ್ನುವ ಅಭಿಪ್ರಾಯಗಳಿವೆ.
(4 / 10)
ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದ ಶಾಸಕರಾಗಿ. ಈ ಹಿಂದೆ ಸಚಿವರೂ ಆಗಿದ್ದ ಆರ್.ಬಿ.ತಿಮ್ಮಾಪುರ ಅವರು ಅಬಕಾರಿ ಸಚಿವರು. ಇವರು ಕೂಡ ಅಬಕಾರಿ ಇಲಾಖೆ ನಿಭಾವಣೆಯಲ್ಲಿ ನಿರೀಕ್ಷಿತ ಯಶ ಕಾಣಲಿಲ್ಲ ಎನ್ನುವ ಅಭಿಪ್ರಾಯಗಳಿವೆ.
(5 / 10)
ಈಗಾಗಲೇ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವ ಬೆಂಗಳೂರಿನ ಚಾಮರಾಜ ಪೇಟೆ ಶಾಸಕ. ಬಳ್ಳಾರಿ ಹಾಗೂ ವಿಜಯನಗರ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಖಾನ್ ಅವರು ವಸತಿ ಸಚಿವರಾಗಿ ಹೆಚ್ಚು ಕೆಲಸ ಮಾಡುವ ಬದಲು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿವರು.
(6 / 10)
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಣಿ- ತೋಟಗಾರಿಕೆ ಸಚಿವರಾಗಿರುವ ಎಸ್.ಎಸ್.ಮಲ್ಲಿಕಾರ್ಜುನ ಅವರ ಶಾಮನೂರು ಶಿವಶಂಕರಪ್ಪ ಅವರ ಪುತ್ರ. ಈ ಹಿಂದೆ ಸಚಿವರಾಗಿದ್ದರು. ಆದರೆ ಈ ಬಾರಿ ದಾವಣಗೆರೆ ಜಿಲ್ಲೆಗೆ ಅವರ ಕಾರ್ಯವ್ಯಾಪ್ತಿ ಸೀಮಿತವಾಗಿದ್ದು. ಎರಡು ಇಲಾಖೆಗಳ ನಿರ್ವಹಣೆ ಪರಿಣಾಮಕಾರಿಯಾಗಿಲ್ಲ ಎನ್ನುವ ಅಭಿಪ್ರಾಯಗಳಿವೆ.
(7 / 10)
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಹೆಬ್ಬಾಳ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಕೂಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ನಿವೇಶನ ವಿವಾದ ಸೇರಿ ಹಲವು ವಿವಾದಗಳಲ್ಲಿ ಸಿಲುಕಿದವರು. ತಮ್ಮ ಖಾತೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿತ್ತು ಎನ್ನು ಅಭಿಪ್ರಾಯ ಅಧಿಕವಾಗಿದೆ.
(8 / 10)
ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರದವರಾದ, ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಜತೆಗೆ ಕೊಡಗು ಉಸ್ತುವಾರಿ ಸಚಿವ. ಇಲಾಖೆಯಲ್ಲಿ ಹೆಚ್ಚು ಕಡೆ ಪ್ರವಾಸ ಮಾಡಲಿಲ್ಲ. ಕೊಡಗಿಗೂ ಆಗಾಗ ಭೇಟಿ ಕೊಡುವುದು ಬಿಟ್ಟರೆ ಪ್ರಗತಿಗೆ ಒತ್ತು ನೀಡಲಿಲ್ಲ ಎನ್ನುವ ಅಭಿಪ್ರಾಯ ಹೆಚ್ಚಿವೆ.
(9 / 10)
ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಮಾಜಿ ಸಚಿವ ಚೌಡರೆಡ್ಡಿಅವರ ಪುತ್ರ. ಮೊದಲ ಬಾರಿಗೆ ಸಚಿವರಾಗಿದ್ದರೂ ಬಹಳಷ್ಟು ವಿಶ್ವವಿದ್ಯಾನಿಲಯಗಳಿಗೂ ಭೇಟಿ ನೀಡಿಲ್ಲ. ಖಾತೆಯಲ್ಲಿ ನಿರೀಕ್ಷೆಯಷ್ಟು ಕೆಲಸ ಮಾಡಲು ಆಗಿಲ್ಲ ಎನ್ನುವ ಅಭಿಪ್ರಾಯಗಳಿವೆ.
ಇತರ ಗ್ಯಾಲರಿಗಳು