ಕುಂಬಕೋಣಂನ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್; ಸರ್ವಶತ್ರು ಸಂಹಾರಿಣಿ ದರ್ಶನ ಮಹತ್ವ, ಚಿತ್ರನೋಟ
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜನವರಿ 9) ಸರ್ವಶತ್ರು ಸಂಹಾರಿಣಿ ಎಂದೇ ಪ್ರಸಿದ್ಧಿ ಪಡೆದಿರುವ ಕುಂಬಕೋಣಂ ಅಯ್ಯವಾಡಿ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದರು. ಡಿಕೆ ಶಿವಕುಮಾರ್ ಅವರ ಈ ದೇಗುಲ ಭೇಟಿ ರಾಜಕೀಯವಾಗಿ ಚರ್ಚೆಗೆ ಒಳಗಾಗಿದೆ. ಇಲ್ಲಿದೆ ಚಿತ್ರನೋಟ.
(1 / 8)
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜನವರಿ 9) ತಮಿಳುನಾಡಿನ ಕುಂಭಕೋಣಂ ಸಮೀಪದ ಅಯ್ಯವಾಡಿ ಪ್ರತ್ಯಂಗಿರಾ ದೇವಿ ದರ್ಶನ ಪಡೆದರು. ಉಪಮುಖ್ಯಮಂತ್ರಿ ಹೊಣೆಗಾರಿಕೆ ಜತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಅಧ್ಯಕ್ಷರ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರುವ ಡಿಕೆ ಶಿವಕುಮಾರ್ ಅವರು ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಕಾರಣ, ಅವರ ಈ ದೇಗುಲ ಭೇಟಿ ಮಹತ್ವ ಪಡೆದುಕೊಂಡಿದೆ.
(2 / 8)
ತಮಿಳುನಾಡಿನ ಕುಂಭಕೊಂಣಂಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸ್ಥಳೀಯ ಮೇಯರ್ ಶರವಣನ್, ತಂಜಾವೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲೋಕನಾಥನ್ ಸೇರಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು.
(3 / 8)
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನದ ವಿಚಾರ ಚರ್ಚೆಗೆ ಒಳಗಾಗಿತ್ತು. ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಲವು ಆಕಾಂಕ್ಷಿಗಳು ತಮ್ಮ ಒಲವು ವ್ಯಕ್ತಪಡಿಸಿದ್ದು ಕೂಡ ಗಮನಸೆಳೆದಿತ್ತು. ಹೀಗಾಗಿ, ಡಿಕೆ ಶಿವಕುಮಾರ್ ಅವರ ಪ್ರತ್ಯಂಗಿರಾ ದೇವಿ ದೇಗುಲ ಭೇಟಿ ಚರ್ಚೆಗೆ ಒಳಗಾಗಿದೆ.
(4 / 8)
ಪ್ರತ್ಯಂಗಿರಾ ಪರಮೇಶ್ವರಿ ದೇವಿಯು ಸರ್ವಶತ್ರು ಸಂಹಾರಿಣಿಯಾಗಿದ್ದು, ರಾಜಕೀಯ ಮಹತ್ವಾಕಾಂಕ್ಷೆ ಉಳ್ಳವರು ಈ ದೇವಿಯ ಪೂಜೆ ಮಾಡಿಸುವುದು ವಾಡಿಕೆ. ದಕ್ಷಿಣ ಭಾರತದಲ್ಲಿ ಈ ತಾಯಿ ಆರಾಧನೆಗೆ ಮಹತ್ವ ಇದೆ. ಈಗ ಡಿಕೆ ಶಿವಕುಮಾರ್ ಅವರು ಈ ದೇವಿಯ ಮೊರೆ ಹೋಗಿರುವುದು ರಾಜಕೀಯವಾಗಿ ಗಮನಸೆಳೆದಿದೆ. ಕುಂಭಕೋಣಂ ತಲುಪಿದ ಡಿಕೆ ಶಿವಕುಮಾರ್ ಅವರನ್ನು ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರು ಬರಮಾಡಿಕೊಂಡು ದೇವಸ್ಥಾನಕ್ಕೆ ಕರೆದೊಯ್ದರು.
(5 / 8)
ಅಯ್ಯವಾಡಿ ಪ್ರತ್ಯಂಗಿರಾ ದೇವಿಯು ಸರ್ವಶತ್ರು ಸಂಹಾರಿಣಿ ಎಂದೇ ಪ್ರಸಿದ್ಧಿ ಪಡೆದ ದೇವಿ. ಸರ್ವಶತ್ರ ನಾಶ ಬಯಸಿ ಜನ ಆಕೆಯನ್ನು ಆರಾಧಿಸುತ್ತಾರೆ. ಅಂತಹ ದೇವಿಯನ್ನು ಡಿಕೆ ಶಿವಕುಮಾರ್ ದಂಪತಿ ಪೂಜಿಸಿ ಆರಾಧಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
(8 / 8)
ಅಯ್ಯವಾಡಿ ಪ್ರತ್ಯಂಗಿರಾ ದೇವಿ ದೇವಸ್ಥಾನವು ಕಾಳಿಯ ಅವತಾರ ಪ್ರತ್ಯಂಗಿರಾ ದೇವಿಯ ಆರಾಧನೆಗೆ ಮೀಸಲಾದ ಕ್ಷೇತ್ರ. ಈ ದೇಗುಲಕ್ಕೆ 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಮಹಾಭಾರತದಲ್ಲೂ ಪ್ರತ್ಯಂಗಿರಾ ದೇವಿಯ ಉಲ್ಲೇಖವಿರುವುದನ್ನು ದಾಖಲಿಸಿದೆ. ಈ ದೇವಸ್ಥಾನವು ಕುಂಬಕೋಣಂನಿಂದ 6 ಕಿಮೀ ದೂರದ ಅಯ್ಯವಾಡಿ ಗ್ರಾಮದಲ್ಲಿದೆ. ಐವರ್ ಪಡಿ ಎಂದು ಕರೆಯಲ್ಪಡುತ್ತಿದ್ದ ಗ್ರಾಮ ಈಗ ಅಯ್ಯವಾಡಿಯಾಗಿ ಬದಲಾಗಿದೆ. ಐವರ್ ಅಂದರೆ ಪಂಚ ಪುರುಷರನ್ನು ಉಲ್ಲೇಖಿಸಿದ್ದು, ವಿಶೇಷವಾಗಿ ಪಾಂಡವರ ಉಲ್ಲೇಖ ಎಂದು ತಮಿಳು ಐತಿಹ್ಯಗಳಲ್ಲಿ ಉಲ್ಲೇಖವಿದೆ.
ಇತರ ಗ್ಯಾಲರಿಗಳು