ಕನ್ನಡ ಸುದ್ದಿ  /  Photo Gallery  /  Karnataka Election These Are The Brothers Who Contested In The State Assembly Elections Rmy

Karnataka Election: ಕರ್ನಾಟಕ ಚುನಾವಣೆ; ರಾಜ್ಯ ವಿಧಾನಸಭೆಯ ಕಣದಲ್ಲಿರುವ ಅಣ್ಣ ತಮ್ಮಂದಿರ ಕ್ಷೇತ್ರಗಳ ಪರಿಚಯ

ರಾಜ್ಯ ವಿಧಾನಸಭೆ ಚುನಾವಣೆಯ ಕಣದಲ್ಲಿ ಅಪ್ಪ-ಮಕ್ಕಳ ಜೊತೆಗೆ ಅಣ್ಣ ತಮ್ಮಂದಿರು ಸ್ಪರ್ಧೆ ಮಾಡಿದ್ದು, ಗಮನ ಸೆಳೆಯುತ್ತಿದ್ದಾರೆ. ಯಾರು ಯಾವ ಕ್ಷೇತ್ರ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. 

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಕಣದಲ್ಲಿದ್ದಾರೆ. ಆದರೆ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು, ತಮ್ಮ ಪಕ್ಷದಿಂದಲೇ ಗಂಗಾವತಿಯಿಂದ ಸ್ಪರ್ಧಿಸಿದ್ದಾರೆ. ಇವರ ಮತ್ತಿಬ್ಬರು ಸಹೋದರರಾದ ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರದಿಂದ ಕಣಕ್ಕಿಳಿದರೆ, ಕರುಣಾಕರ ರೆಡ್ಡಿ ಹರಪನಹಳ್ಳಿಯಿಂದ ಸ್ಪರ್ಧಿಸಿದ್ದಾರೆ.
icon

(1 / 5)

ಬೆಳಗಾವಿಯ ಸಾಹುಕಾರರಾದ ಜಾರಕಿಹೊಳಿ ಕುಟುಂಬದ ಮೂವರು ಅಣ್ಣ-ತಮ್ಮಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಬೆಳಗಾವಿಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ, ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಹಾಗೂ ಅರಭಾವಿ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸಿದ್ದಾರೆ.
icon

(2 / 5)

ಇತ್ತ ಶಿವಮೊಗ್ಗದಲ್ಲಿ ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರರು  ಕಣದಲ್ಲಿದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಕುಮಾರ ಬಂಗಾರಪ್ಪ ಕಣದಲ್ಲಿದ್ದಾರೆ. 
icon

(3 / 5)

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಲ್ಲಿ ಸ್ಪರ್ಧಿಸಿದ್ದಾರೆ. ಡಿಕೆಶಿ ಅವರ ನಾದಿನಿಯ ಪತಿ ಡಾ ರಂಗನಾಥ್ ಕುಣಿಗಲ್‌ ವಿಧಾನಸಭೆಯಿಂದ ಸ್ಪರ್ಧಿಸಿದ್ದಾರೆ. 
icon

(4 / 5)

ಮತ್ತೊಂದೆಡೆ ಲಾಡ್ ಸಹೋದರರು  ಕೂಡ ಕಣದಲ್ಲಿದ್ದು, ಕಲಘಟಗಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂತೋಷ್ ಲಾಡ್ ಸ್ಪರ್ಧಿಸಿದ್ದಾರೆ. ಇವರ ಸಹೋದರ ಅನಿಲ್ ಲಾಡ್ ಬಳ್ಳಾರಿ ನಗರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು