ಕೊಪ್ಪಳದ ಬಂಕಾಪುರ ವನ್ಯಧಾಮದಲ್ಲಿ ತೋಳದ ಸಂತಾನ ಸಂಭ್ರಮ, ಈ ಭಾಗದಲ್ಲೂ ಸಫಾರಿ ಆರಂಭಕ್ಕೆ ಅರಣ್ಯ ಇಲಾಖೆ ಯೋಜನೆ
- ಮೂರು ವರ್ಷದ ಹಿಂದೆ ಕರ್ನಾಟಕದ ಮೊದಲ ತೋಳ ವನ್ಯಧಾಮವಾಗಿ ಗುರುತಿಸಿಕೊಂಡಿದ್ದ ಕೊಪ್ಪಳದ ತೋಳಧಾಮದಲ್ಲಿ ಈಗ ಸಂತಾನ ಸಂಭ್ರಮ. ಎಂಟು ಮರಿಗಳಿಗೆ ತೋಳ ಜನ್ಮ ನೀಡಿದೆ. ಅದರ ಚಿತ್ರ ನೋಟ ಇಲ್ಲಿದೆ.
- ಮೂರು ವರ್ಷದ ಹಿಂದೆ ಕರ್ನಾಟಕದ ಮೊದಲ ತೋಳ ವನ್ಯಧಾಮವಾಗಿ ಗುರುತಿಸಿಕೊಂಡಿದ್ದ ಕೊಪ್ಪಳದ ತೋಳಧಾಮದಲ್ಲಿ ಈಗ ಸಂತಾನ ಸಂಭ್ರಮ. ಎಂಟು ಮರಿಗಳಿಗೆ ತೋಳ ಜನ್ಮ ನೀಡಿದೆ. ಅದರ ಚಿತ್ರ ನೋಟ ಇಲ್ಲಿದೆ.
(1 / 8)
ಕರ್ನಾಟಕ ಅರಣ್ಯ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಫಲವಾಗಿ, ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಅಳಿವಿನಂಚಿನಲ್ಲಿರುವ ತೋಳಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಇತ್ತೀಚೆಗೆ ಹೆಣ್ಣು ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದೆ
(Karnataka Forest Department)(2 / 8)
ಎಂಟು ಮರಿಗಳು ಬಂಕಾಪುರ ವನ್ಯಧಾಮದಲ್ಲಿ ಒಟ್ಟಿಗೆ ಇರುವುದು ಕಂಡು ಬಂದಿದ್ದು. ಕರ್ನಾಟಕ ಅರಣ್ಯ ಇಲಾಖೆ ಇದನ್ನು ಛಾಯಾಚಿತ್ರಗಳಲ್ಲಿ ಸೆರೆ ಹಿಡಿದಿದೆ.
(3 / 8)
ಇಂಡಿಯನ್ ಗ್ರೇ ಉಲ್ಫ್ ಎಂಬ ಪ್ರಭೇದದ ತೋಳಗಳು ಈ ಸಂರಕ್ಷಿತ ಪ್ರದೇಶದಲ್ಲಿದ್ದು, ಇತ್ತೀಚೆಗೆ 8 ಮರಿಗಳಿಗೆ ಒಂದು ತೋಳ ಜನ್ಮ ನೀಡಿದೆ. ವನ್ಯಧಾಮ ಘೋಷಣೆಯ ಬಳಿಕ ಈ ರೀತಿ ಮರಿಗಳ ಜನನವಾಗಿದೆ.
(4 / 8)
ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಸುಮಾರು 332 ಹೆಕ್ಟರ್ ಪ್ರದೇಶದಲ್ಲಿರುವ ಬಂಕಾಪೂರ ತೋಳ ಧಾಮವು ಕುರುಚಲು ಅರಣ್ಯದೊಳಗೆ ಗುಡ್ಡಗಳು, ಸ್ವಾಭಾವಿಕ ಗುಹೆಗಳನ್ನೂ ಹೊಂದಿದ್ದು, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿಯೇ ಮೊದಲಾದ ಹಲವು ವನ್ಯಜೀವಿಗಳ ತಾಣವಾಗಿದೆ.
(5 / 8)
ಮರಿಗಳ ಪೈಕಿ ಸಾಮಾನ್ಯವಾಗಿ ಪ್ರತಿಶತ 50ರಷ್ಟು ಬದುಕುಳಿಯುವ ಸಾಧ್ಯತೆ ಇರುತ್ತದೆ, ಆದರೆ ಎಲ್ಲ ತೋಳದ ಮರಿಗಳನ್ನೂ ಉಳಿಸಲು ಅರಣ್ಯಾಧಿಕಾರಿಗಳು ಕ್ರಮವಹಿಸಿದ್ದಾರೆ ಎನ್ನುವುದು ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ವಿವರಣೆ.
(6 / 8)
ಬಂಕಾಪೂರ ತೋಳ ವನ್ಯಧಾಮದಲ್ಲಿ ಈ 8 ಮರಿಗಳೂ ಸೇರಿ ಸುಮಾರು 35-40 ತೋಳಗಳಿವೆ. ಇವುಗಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ
(7 / 8)
ಈ ಪ್ರದೇಶವನ್ನು ತೋಳವನ್ಯಧಾಮ ಎಂದು 15ನೇ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಘೋಷಿಸಲಾಗಿದ್ದು, ಸಂಪುಟ ಉಪಸಮಿತಿ ಸಭೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೂ ನಿರ್ಣಯಿಸಲಾಗಿದೆ
ಇತರ ಗ್ಯಾಲರಿಗಳು