Kodagu News: ಕೊಡಗಿನಲ್ಲಿ 13 ದಿನದ ಅಂತರದಲ್ಲೇ ಎರಡನೇ ಕಾಡಾನೆ ಸೆರೆ, ಭಾರೀ ಗಾತ್ರದ ಗಜರಾಜನ ಹಿಡಿಯಲು ಅರಣ್ಯ ಇಲಾಖೆ ತಂಡದ ಶ್ರಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kodagu News: ಕೊಡಗಿನಲ್ಲಿ 13 ದಿನದ ಅಂತರದಲ್ಲೇ ಎರಡನೇ ಕಾಡಾನೆ ಸೆರೆ, ಭಾರೀ ಗಾತ್ರದ ಗಜರಾಜನ ಹಿಡಿಯಲು ಅರಣ್ಯ ಇಲಾಖೆ ತಂಡದ ಶ್ರಮ

Kodagu News: ಕೊಡಗಿನಲ್ಲಿ 13 ದಿನದ ಅಂತರದಲ್ಲೇ ಎರಡನೇ ಕಾಡಾನೆ ಸೆರೆ, ಭಾರೀ ಗಾತ್ರದ ಗಜರಾಜನ ಹಿಡಿಯಲು ಅರಣ್ಯ ಇಲಾಖೆ ತಂಡದ ಶ್ರಮ

  • Kodagu News: ಕೊಡಗಿನ ಸೋಮವಾರಪೇಟೆ ಬಳಿ ಕೆಲವು ದಿನಗಳ ಹಿಂದೆ ಪುಂಡಾನೆ ಸೆರೆ ಹಿಡಿಯಲಾಗಿತ್ತು. ಈಗ ವಿರಾಜಪೇಟೆ ಸಮೀಪದ ತಿತಿಮತಿ ವಲಯದಲ್ಲಿ ಮತ್ತೊಂದು ಕಾಡಾನೆ ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ಹೀಗಿತ್ತು.

ಕೊಡಗು ಜಿಲ್ಲೆ ವೀರಾಜಪೇಟೆ ಅರಣ್ಯ ಉಪವಿಭಾಗದ ತಿತಿಮತಿ ವನ್ಯಜೀವಿ ವಲಯದ ದೇವರಕಾಡುವಿನ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದ ಬಳಿ ಭಾರೀ ಗಾತ್ರದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.
icon

(1 / 6)

ತಿತಿಮತಿ ಭಾಗದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಇಬ್ಬರ ಸಾವಿಗೂ ಕಾರಣವಾಗಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಕೆಲ ದಿನಗಳಿಂದ ಕಾರ್ಯಾಚರಣೆ ಆರಂಭಿಸಿತ್ತು.
icon

(2 / 6)

ವೀರಾಜಪೇಟೆ ಡಿಸಿಎಫ್‌ ಜಗನ್ನಾಥ್‌, ಎಸಿಎಫ್‌ ಕೆ.ಟಿ.ಗೋಪಾಲ್‌, ತಿತಿಮತಿ ಆರ್‌ಎಫ್‌ಒ ಗಂಗಾಧರ್‌ ಹಾಗೂ ಆನೆ ಕಾರ್ಯಪಡೆ ತಂಡ, ಅರಣ್ಯ ಇಲಾಖೆ ಸಿಬ್ಬಂದಿ ದುಬಾರೆ ಶಿಬಿರದ ಆನೆಗಳ ಸಹಕಾರದಿಂದ ಆನೆ ಸೆರೆ ಹಿಡಿದರು. ವನ್ಯಜೀವಿ ಮಂಡಳಿ ಸದಸ್ಯ ಕೊಡಗಿನ ಸಂಕೇತ್‌ ಪೂವಯ್ಯ ಕೂಡ ಇದ್ದರು.
icon

(3 / 6)

ಭದ್ರಕಾಳಿ ದೇವಸ್ಥಾನ ಬಳ ಇದ್ದ ಆನೆಯನ್ನು ದುಬಾರೆ ಸಾಕಾನೆಗಳ ಸಹಕಾರದಿಂದ ಸೆರೆ ಹಿಡಿದು ಬಿಗಿಯಾಗಿ ಹಗ್ಗಗಳಿಂದ ಕಟ್ಟಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ವ್ಯವಸ್ಥಿತವಾಗಿಯೇ ಆನೆ ಸೆರೆ ಹಿಡಿದರು,
icon

(4 / 6)

ಸೆರೆ ಸಿಕ್ಕ ಆನೆಯನ್ನು ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಸಾಗಿಸಲಾಯಿತು. ಅಲ್ಲಿ ಕ್ರಾಲಿಂಗ್‌ಗೆ ಹಾಕಿ ಆನೆಯನ್ನು ಪಳಗಿಸುವ ಚಟುವಟಿಕೆ ಶುರುವಾಗಲಿದೆ.
icon

(5 / 6)

ಕೊಡಗು ಜಿಲ್ಲೆ ತಿತಿಮತಿ ವಲಯದ ಆರ್‌ಎಫ್‌ಒ ಗಂಗಾಧರ್‌ ಹಾಗೂ ಅಧಿಕಾರಿಗಳು. ಸಿಬ್ಬಂದಿ ಸೆರೆ ಹಿಡಿದ ಆನೆಯೊಂದಿಗೆ ಕಂಡಿದ್ದು ಹೀಗೆ.
icon

(6 / 6)

ಕೊಡಗು ಜಿಲ್ಲೆ ತಿತಿಮತಿ ವಲಯದ ಆರ್‌ಎಫ್‌ಒ ಗಂಗಾಧರ್‌ ಹಾಗೂ ಅಧಿಕಾರಿಗಳು. ಸಿಬ್ಬಂದಿ ಸೆರೆ ಹಿಡಿದ ಆನೆಯೊಂದಿಗೆ ಕಂಡಿದ್ದು ಹೀಗೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು