SM Krishna: ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಎಸ್.ಎಂ.ಕೃಷ್ಣ; ಬೆಂಗಳೂರು ಪ್ರಗತಿಯಿಂದ ಡಾ.ರಾಜ್ ಬಿಡುಗಡೆವರೆಗೆ
- ಎಸ್.ಎಂ.ಕೃಷ್ಣ ಅವರು ಕರುನಾಡ ಕಂಡ ಅಪ್ರತಿಮ ರಾಜಕಾರಣಿ. ಅಧಿಕಾರದಲ್ಲಿದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿಕೊಂಡು ಬಂದವರು. ಅವರ ಬದುಕಿನ ಕೆಲವು ಪ್ರಮುಖ ಕ್ಷಣಗಳ ನೋಟ ಇಲ್ಲಿದೆ.
- ಎಸ್.ಎಂ.ಕೃಷ್ಣ ಅವರು ಕರುನಾಡ ಕಂಡ ಅಪ್ರತಿಮ ರಾಜಕಾರಣಿ. ಅಧಿಕಾರದಲ್ಲಿದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿಕೊಂಡು ಬಂದವರು. ಅವರ ಬದುಕಿನ ಕೆಲವು ಪ್ರಮುಖ ಕ್ಷಣಗಳ ನೋಟ ಇಲ್ಲಿದೆ.
(1 / 10)
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಜನಿಸಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ 1932 ರ ಮೇ 1 ರಂದು. ಮೈಸೂರಿನ ರಾಮಕೃಷ್ಣ ಆಶ್ರಮ, ಯುವರಾಜ ಕಾಲೇಜು, ಬೆಂಗಳೂರು, ವಿದೇಶದಲ್ಲಿ ಶಿಕ್ಷಣ ಪಡೆದವರು ಕೃಷ್ಣ.
(2 / 10)
ವಿದೇಶದಲ್ಲಿ ಓದುವಾಗಲೇ ರಾಜಕೀಯ ಸೆಳೆತಕ್ಕೆ ಒಳಗಾದವರು ಕೃಷ್ಣ. ವಿದೇಶದಲ್ಲಿ ಶಿಕ್ಷಣ ಮುಗಿಸಿ ಬಂದ ನಂತರ ಮೊದಲ ಬಾರಿ ಮದ್ದೂರು ಕ್ಷೇತ್ರದಿಂದ 1962 ರ ಚುನಾವಣೆಗೆ ಪಕ್ಷೇತರರಾಗಿ ಕಣಕ್ಕಿಳಿದು ವಿಧಾನಸಭೆ ಪ್ರವೇಶಿಸಿದರು.
(3 / 10)
ಆನಂತರ ಮದ್ದೂರು ಶಾಸಕರಾಗಿ. ಮಂಡ್ಯ ಸಂಸದರಾಗಿಯೂ ಆಯ್ಕೆಯಾದರು. ಸೋಲು ಗೆಲುವನ್ನು ಅನುಭವಿಸಿದ ಕೃಷ್ಣ ಅವರು ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದವರು, ಈ ಕಾರಣದಿಂದಲೇ ಅವರಿಗೆ ಉನ್ನತ ಹುದ್ದೆಗಳು ದೊರೆತವು. ಇಂದಿರಾಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು.
(4 / 10)
1999 ರಲ್ಲಿ ಜನತಾದಳ ಇಬ್ಬಾಗವಾದಾಗ ಕೃಷ್ಣ ಅವರನ್ನು ಕರ್ನಾಟಕ ಪ್ರದೇಶ ಅಧ್ಯಕ್ಷರನ್ನಾಗಿ ನಿಯೋಜಿಸಲಾಯಿತು. ಆಗ ಪಾಂಚಜನ್ಯ ಮೊಳಗಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು ಸಿಎಂ ಕೂಡ ಆದರು. ಆದರೆ ಐದು ವರ್ಷದ ಆಡಳಿತ ಸುಲಭವಾಗಿರಲಿಲ್ಲ. ಬರ, ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ ಸವಾಲು ಎದುರಿಸಿದರು.
(5 / 10)
ಬೆಂಗಳೂರಿನ ಅಭಿವೃದ್ದಿಗೆ ಕೃಷ್ಣ ಕೊಡುಗೆ ಅಪಾರ. ಮಾಹಿತಿ ತಂತ್ರಜ್ಞಾನ ವಲಯದ ಅಭಿವೃದ್ದಿಗೆ ವಿಶೇಷ ಒತ್ತು ನೀಡಿ ನೀತಿಗಳನ್ನು ರೂಪಿಸಿದವರು. ಬೆಂಗಳೂರಿನ ಪ್ರಗತಿಗೆ ಪ್ರತ್ಯೇಕ ಪ್ರಾಧಿಕಾರವನ್ನೂ ರಚಿಸಿದ್ದರು.
(6 / 10)
ಹೀಗಿದ್ದರೂ ನಂತರದ ಚುನಾವಣೆಯಲ್ಲಿ ಸೋಲು ಕಂಡರು.ಆದರೂ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನಿಯೋಜಿಲಾಯಿತು. ರಾಜ್ಯಪಾಲರ ಹುದ್ದೆ ನಂತರ ಸಿಕ್ಕಿದ್ದು ಉನ್ನತ ಕೇಂದ್ರದಲ್ಲಿ ವಿದೇಶಾಂಗ ಸಚಿವರ ಸ್ಥಾನ, ಅಲ್ಲಿಯೂ ವಿವಾದ ಉಂಟಾಗಿ ಸಚಿವ ಸ್ಥಾನವನ್ನು ತೊರೆಯಬೇಕಾಯಿತು,
(7 / 10)
ಕಾಂಗ್ರೆಸ್‌ನಲ್ಲಿಯೇ ಬಹುತೇಕ ತಮ್ಮ ರಾಜಕೀಯ ಜೀವನವನ್ನು ನಡೆಸಿದ್ದ ಕೃಷ್ಣ ಅವರು ಏಳು ವರ್ಷದ ಹಿಂದೆ ಬಿಜೆಪಿ ಸೇರುವ ಅನಿವಾರ್ಯತೆ ಎದುರಾಯಿತು. ಆಗಿನಿಂದಲೂ ಬಿಜೆಪಿಯಲ್ಲಿಯೇ ಇದ್ದುಕೊಂಡು ಬಂದು ಮೋದಿ ಆಡಳಿತವನ್ನೂ ಮೆಚ್ಚಿಕೊಂಡಿದ್ದರು.
(8 / 10)
ಕರ್ನಾಟಕದಲ್ಲಿ ನಿರಂತರ ರಾಜಕೀಯ ಜೀವನದಲ್ಲಿದ್ದರೂ ತಮ್ಮ ಘನತೆಯ ಹೇಳಿಕೆಯಿಂದಲೇ ಅವರು ಮೆಚ್ಚುಗೆಗೆ ಪಾತ್ರರಾಗಿದ್ದವರು. ಎಲ್ಲರೊಂದಿಎ ಒಡನಾಟ ಚೆನ್ನಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿ ಆಯ್ಕೆಯಾದಾಗ ಅಭಿನಂದಿಸಿದ್ದರು ಕೂಡ.
(9 / 10)
ಹಾಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯದ ಹಿಂದಿನ ಶಕ್ತಿ ಎಸ್.ಎಂ. ಕೃಷ್ಣ, ತಮ್ಮ ಪುತ್ರನಂತೆಯೇ ಶಿವಕುಮಾರ್ ಅವರನ್ನು ಕೃಷ್ಣ ಅವರು ಬೆಳೆಸಿದರು. ತಾವು ಸಿಎಂ ಆಗಿದ್ದಾಗ ಡಿಕೆಶಿ ಅವರಿಗೆ ನಗರಾಭಿವೃದ್ದಿ ಖಾತೆಯನ್ನೂ ನೀಡಿದ್ದರು. ಆನಂತರ ಡಿಕೆಶಿ ಮಗಳನ್ನು ತಮ್ಮ ಮೊಮ್ಮಗನಿಗೆ ತಂದುಕೊಂಡು ಸಂಬಂಧವನ್ನೂ ಬೆಳೆಸಿಕೊಂಡಿದ್ದರು. ಡಿಕೆಶಿ ಕೂಡ ಅಪಾರವಾಗಿ ಕೃಷ್ಣರನ್ನು ಗೌರವಿಸುತ್ತಿದ್ದರು.
ಇತರ ಗ್ಯಾಲರಿಗಳು