Karnataka Tourism: ಕರ್ನಾಟಕದ 12 ಪ್ರಮುಖ ಪ್ರವಾಸಿ, ಧಾರ್ಮಿಕ ಬೆಟ್ಟಗಳಲ್ಲಿ ಬರಲಿದೆ ರೋಪ್‌ವೇ, ಎಲ್ಲೆಲ್ಲಿ ಸಿಕ್ಕಿದೆ ಅನುಮತಿ
- Karnataka Tourism: ಕರ್ನಾಟಕದ ಹಲವಾರು ಪ್ರವಾಸಿ ತಾಣಗಳಲ್ಲಿ ರೋಪ್ ವೇ ನಿರ್ಮಿಸುವ ಸಂಬಂಧ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ವಿಧೇಯಕ 2024 ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಂಜನಾದ್ರಿ, ಯಾದಗಿರಿ, ನಂದಿಬೆಟ್ಟ, ಸವದತ್ತಿ ಸೇರಿದಂತೆ 12 ಕಡೆಗಳಲ್ಲಿ ಸಮೀಕ್ಷೆ ನಡೆಸಿ ರೋಪ್ ವೇ ನಿರ್ಮಿಸಲು ಕ್ರಮ ಕೈಗೊಳ್ಳಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
- Karnataka Tourism: ಕರ್ನಾಟಕದ ಹಲವಾರು ಪ್ರವಾಸಿ ತಾಣಗಳಲ್ಲಿ ರೋಪ್ ವೇ ನಿರ್ಮಿಸುವ ಸಂಬಂಧ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ವಿಧೇಯಕ 2024 ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಂಜನಾದ್ರಿ, ಯಾದಗಿರಿ, ನಂದಿಬೆಟ್ಟ, ಸವದತ್ತಿ ಸೇರಿದಂತೆ 12 ಕಡೆಗಳಲ್ಲಿ ಸಮೀಕ್ಷೆ ನಡೆಸಿ ರೋಪ್ ವೇ ನಿರ್ಮಿಸಲು ಕ್ರಮ ಕೈಗೊಳ್ಳಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
(1 / 12)
ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ನಂದಿಬೆಟ್ಟ ದಲ್ಲಿ ರೋ ವೇ ನಿರ್ಮಿಸುವುದು ಮೂರು ದಶಕಕ್ಕೂ ಹಳೆಯ ಪ್ರಸ್ತಾವ. ನಾನಾ ಕಾರಣದಿಂದ ಈ ಯೋಜನೆ ಜಾರಿಯಾಗಿಲ್ಲ. ಈಗಲೂ ಕರ್ನಾಟಕ ಸರ್ಕಾರದ ಪ್ರಯತ್ನ ಮುಂದುವರಿದಿದೆ.
(2 / 12)
ಮೈಸೂರಿನ ಮುಕುಟದಂತಿರುವ ಚಾಮುಂಡಿಬೆಟ್ಟದಲ್ಲೂ ರೋಪ್ ವೇ ನಿರ್ಮಿಸಿ ಮೈಸೂರು ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಇರಾದೆ ಸರ್ಕಾರದ್ದು. ಇಲ್ಲಿಯೂ ವಿರೋಧದ ಕಾರಣದಿಂದ ಜಾರಿಗೊಂಡಿಲ್ಲ. ಈಗಲೂ ಪ್ರಸ್ತಾವನೆ ಸಲ್ಲಿಕೆಯಾಗಿದೆ.
(3 / 12)
ತುಂಗಭದ್ರಾ ನದಿಗೆ ಅಡ್ಡಲಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದ ಸಮೀಪವಿರುವ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮ ಸ್ಥಳವಾಗಿದ್ದು ಇಲ್ಲಿ ಪ್ರತಿ ವರ್ಷ ಹನುಮ ಜಯಂತಿಯಂದು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನಕ್ಕಾಗಿ ಬರುತ್ತಾರೆ. ಇಲ್ಲಿಗೂ ರೋಪ್ ವೇ ನಿರ್ಮಿಸುವ ಪ್ರಸ್ತಾವನೆಯಿದೆ.
(4 / 12)
ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿ, ಸಮುದ್ರ ಮಟ್ಟದಿಂದ ಸುಮಾರು 1434 ಮೀ ಎತ್ತರದಲ್ಲಿರುವ ಪ್ರವಾಸಿಗರ ಸ್ವರ್ಗ. ಮಂಜು ಮುತ್ತಿಕ್ಕಿದ ಬೆಟ್ಟಗಳು, ಬೆಣ್ಣೆ ಮುದ್ದೆಯಾಕಾರದ ಓಡುವ ಮೋಡಗಳು, ಕಡಿದಾದ ಕಣಿವೆಗಳನ್ನು ರೋಪ್ ವೇ ಮೂಲಕ ಪ್ರದರ್ಶಿಸುವ ಇರಾದೆ ಕರ್ನಾಟಕ ಸರ್ಕಾರದ್ದು. ಇಲ್ಲಿಗೂ ರೋಪ್ ವೇ ಬರಬಹುದು.
(5 / 12)
ಯಾದಗಿರಿ ಜಿಲ್ಲೆಯ ಶಹಾಪುರದ ಗಿರಿಯಲ್ಲಿ ಓರ್ವ ವಿಶೇಷ ವ್ಯಕ್ತಿ ನಿಮ್ಮ ಕಣ್ಣಿಗೆ ಮೇಲ್ಮುಖವಾಗಿ ಮಲಗಿರುವ ದೃಶ್ಯ ಕಂಡುಬರುತ್ತದೆ, ಅದುವೇ ಶಾಂತಿಧೂತ ಗೌತಮ ಬುದ್ಧ, ಆದ್ದರಿಂದ ಈ ಬೆಟ್ಟವನ್ನು ಬುದ್ಧ ಮಲಗಿರುವ ಬೆಟ್ಟ (ಸ್ಲೀಪಿಂಗ್ ಬುದ್ಧ ಹಿಲ್ ) ಎಂದು ಕರೆಯುತ್ತಾರೆ. ಇಲ್ಲಿಯೂ ರೋಪ್ ವೇ ತರುವ ಯೋಜನೆಯಿದೆ.
(6 / 12)
ಪಶ್ಚಿಮ ಘಟ್ಟಗಳ ಪ್ರಕೃತಿಯ ದಟ್ಟಕಾರಣ್ಯದ ಮದ್ಯೆ ಕಪ್ಪು ಸುಣ್ಣದ ಕಲ್ಲಿನಿಂದ ರೂಪುಗೊಂಡ ಉತ್ತರ ಕನ್ನಡ ಜಿಲ್ಲೆಯ ಅದ್ಭುತ ಯಾಣ ಗುಹೆಗಳು ವಿಶಿಷ್ಟ ರಚನೆಯನ್ನು ಹೊಂದಿವೆ. ಸ್ವಯಂ ಉದ್ಭವ ಶಿವಲಿಂಗವನ್ನು ಹೊಂದಿರುವ ಭೈರವೇಶ್ವರ ಶಿಖರ ಮತ್ತು ಜಗನ್ಮೋಹಿನಿ ಶಿಖರ ಗುಹೆಗಳು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಈ ಸೌಂದರ್ಯವನ್ನು ರೋ ಪ್ ವೇ ಮೂಲಕ ಪ್ರದರ್ಶಿಸುವ ಕಾರಣಕ್ಕೆ ಇಲ್ಲಿಗೂ ಈ ಯೋಜನೆಯಿದೆ.
(7 / 12)
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟಗಳ ಸಾಲಿನ ಮೋಹಕ ಬೆಟ್ಟ ಸಾಲು ಕೊಡಚಾದ್ರಿ. ಇದೂ ಕೂಡ ಟ್ರೆಕ್ಕಿಂಗ್ ಗೆ ಹೇಳಿ ಮಾಡಿಸಿದ ತಾಣ. ಇಲ್ಲಿಗೂ ರೋಪ್ ವೇ ಜಾರಿಯಾಗಬಹುದು.
(8 / 12)
ಪರ್ವತಾರೋಹಿಗಳಿಗೆ ಹೆಮ್ಮೆಯ, ಸಂತಸದ ಸುದ್ದಿ. 3984.5 ಅಡಿ ಎತ್ತರದ ಏಷ್ಯಾದ 2ನೇ ಅತಿದೊಡ್ಡ ಏಕಶಿಲಾ ಬಂಡೆ ಮೇಲೆ ಹೊಸ ರಾಕ್ ಕ್ಲೈಂಬಿಂಗ್ ಮಾರ್ಗ ತೆರೆದಿದೆ ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟ. ಯುವ ಸಬಲೀಕರಣ, ಕ್ರೀಡಾ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಪರ್ವತಗಳ ದಿನದಂದು 6 ಮಹಿಳೆಯರು ಸವಾಲಿನ ಈ ಶಿಖರವನ್ನೇರಿ ಗಮನ ಸೆಳೆದಿದ್ದರು. ಇಲ್ಲಿಯೀ ರೋಪ್ ವೇ ತರುವ ಉದ್ದೇಶವಿದೆ.
(9 / 12)
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸುತ್ತಮುತ್ತ ಇರುವ ಕುಮಾರಪರ್ವತವಂತೂ ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ತಾಣ. ಕೆಲವು ದಿನಗಳ ನಿಷೇಧದ ನಂತರ ಇಲ್ಲಿ ಚಾರಣ ಶುರುವಾಗಿದೆ. ಇಲ್ಲಿಗೂ ರೋಪ್ ವೇ ಹಾಕಿ ಪ್ರವಾಸಿ ಚಟುವಟಿಕೆ ವಿಸ್ತರಣೆ ಯೋಜನೆ ಹೊಂದಲಾಗಿದೆ.
(10 / 12)
ಕರ್ನಾಟಕದ ಅತಿ ಎತ್ತರದ ಶಿಖರವಾದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಬೆಟ್ಟಗಳ ಶ್ರೇಣಿಯಲ್ಲಿದೆ. ಸಾಹಸ ಉತ್ಸಾಹಿಗಳು ಅಂಕು ಡೊಂಕಿನ ಸರ್ಪಧಾರಿಯಲ್ಲಿ ರೋಡ್ ಬೈಕಿಂಗ್, ಮೌಂಟೇನ್ ರೈಡಿಂಗ್ ಮತ್ತು ಟ್ರೆಕ್ಕಿಂಗ್ ಮೂಲಕ ಪ್ರಕೃತಿಯ ಸೊಗಸಾದ ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಸವಿಯುವುದೇ ಚಂದ. ಇಲ್ಲಿಯೂ ರೋಪ್ ವೇ ಅನುಷ್ಠಾನವಾಗಬಹುದು.
(11 / 12)
ಬೆಳಗಾವಿ ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣ ಸವದತ್ತಿ ಯಲ್ಲಮ್ಮನ ಗುಡ್ಡ. ಇಲ್ಲಿ ಗುಡ್ಡ ಏರಿ ಬರುವಾಗ ನವಿಲುತೀರ್ಥ ಜಲಾಶಯ ನೋಟ ಚೆನ್ನ. ಈ ಬೆಟ್ಟಕ್ಕೂ ರೋಪ್ ವೇ ಹಾಕುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ಇತರ ಗ್ಯಾಲರಿಗಳು