ಪೂರ್ವ ಮುಂಗಾರು ಅಬ್ಬರ: ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾದ ಕರ್ನಾಟಕದ 10 ಜಿಲ್ಲೆಗಳು, ಎಲ್ಲಿ ಎಷ್ಟು ಮಳೆ
ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕರಾವಳಿ,ಮಲೆನಾಡು, ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಆಗಿರುವ ಮಳೆ ಪ್ರಮಾಣದ ವಿವರ ಇಲ್ಲಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 10)
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಅತಿ ಹೆಚ್ಚಿನ 268 ಮಿ.ಮೀ ಮಳೆ ಸುರಿದಿದ್ದು ಸಾಕಷ್ಟು ಕಡೆ ಅನಾಹುತ ಆಗಿದೆ.
(The Hindu)(2 / 10)
ಅತಿ ಹೆಚ್ಚು ಅರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗಳವಾರದಂದು ಎಡಬಿಡದೇ ಮಳೆ ಬಿದ್ದು, 223 ಮೀ. ಮೀ ಮಳೆಯಾದ ದಾಖಲಾಗಿದೆ
(Deccan Herald)(3 / 10)
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ 157 ಮಿ.ಮೀ ಮಳೆ ದಕ್ಷಿಣ ಕನ್ನಡದಲ್ಲಿ ಆಗಿದೆ.
(4 / 10)
ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಧಾರವಾಡದಲ್ಲೂ ಮಂಗಳವಾರ ಭಾರೀ ಮಳೆಯೇ ಸುರಿದಿದೆ. ಜಿಲ್ಲೆಯಲ್ಲಿ 137 ಮಿ.ಮೀ ನಷ್ಟು ಮಳೆಯಾಗಿದೆ
(5 / 10)
ಏಲಕ್ಕಿ ನಾಡು ಎಂದೇ ಹೆಸರು ಪಡೆದಿರುವ ಹಾವೇರಿ ಜಿಲ್ಲೆಯ ಹಲವು ಭಾಗದಲ್ಲಿ ಎಡಬಿಡದೇ ಮಳೆಯಾಗಿದೆ, ಹಾವೇರಿಯಲ್ಲಿ ದಾಖಲಾದ ಮಳೆ ಪ್ರಮಾಣ 87 ಮಿ.ಮೀ.
(6 / 10)
ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಜೋರಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ 73 ಮಿ.ಮೀ ಮಳೆಯಾದ ಮಾಹಿತಿಯಿದೆ.
(7 / 10)
ಮಲೆನಾಡಿನ ಜಿಲ್ಲೆ ಚಿಕ್ಕಮಗಳೂರಿನಲ್ಲೂ ಮಂಗಳವಾರದ ಮಳೆ ಜೋರಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 66.5 ಮಿ.ಮೀ ನಷ್ಟು ಮಳೆಯಾದ ದಾಖಲಾಗಿದೆ.
(8 / 10)
ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ಕೊಪ್ಪಳ ಜಿಲ್ಲೆಯ ನಾನಾ ಭಾಗಗಳಲ್ಲಿ ಒಂದೇ ದಿನ 63 ಮಿ.ಮೀ ಮಳೆಯಾದ ಮಾಹಿತಿಯಿದೆ
(9 / 10)
ಉತ್ತರ ಕರ್ನಾಟಕದ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನ ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ಒಂದೇ ದಿನ 63 ಮಿ.ಮೀ ಮಳೆಯಾದ ಮಾಹಿತಿಯನ್ನು ನೀಡಲಾಗಿದೆ.
ಇತರ ಗ್ಯಾಲರಿಗಳು